Home Crime News ಸಹೋದರನ ಮೇಲೆಯೇ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿ ಕೊಲೆ
Crime NewsHomeLatest Newsnamma chikmagalurTarikere

ಸಹೋದರನ ಮೇಲೆಯೇ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿ ಕೊಲೆ

Share
Share

ಲಿಂಗದಹಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹೋದರನ ಮೇಲೆಯೇ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡೆನಕೊಪ್ಪ ಗ್ರಾಮದ ಕೃಷ್ಣಾ ನಾಯ್ಕ @ ಸಂತೋಷ (40) ಮೃತಪಟ್ಟವರು ಎಂದು ತಿಳಿದುಬಂದಿದ್ದು, ಅವರ ಸಹೋದರ ಯುವರಾಜ ನಾಯ್ಕ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಮೃತ ಕೃಷ್ಣಾ ನಾಯ್ಕ, ಯುವರಾಜ ನಾಯ್ಕ ಹಾಗೂ ಮಮತ ಅವರು ಒಂದೇ ಕುಟುಂಬದವರು. ಮಮತ ಅವರ ಪತಿ ಬಿಟ್ಟು ಹೋಗಿದ್ದರಿಂದ, ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲೇ ವಾಸವಾಗಿದ್ದರು. ಕುಟುಂಬದಲ್ಲಿ ಯುವರಾಜ ನಾಯ್ಕ ಆಗಾಗ್ಗೆ ತಾಯಿ ಹಾಗೂ ಸಹೋದರ ಕೃಷ್ಣಾ ನಾಯ್ಕ ಅವರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಆ.10ರಂದು ಯುವರಾಜ ನಾಯ್ಕ ತಾಯಿಯ ತಲೆಗೆ ಹೊಡೆದಿದ್ದರಿಂದ, ಮತ್ತೆ ಹಲ್ಲೆ ನಡೆಸಬಹುದೆಂಬ ಆತಂಕದಲ್ಲಿ ತಾಯಿಯನ್ನು ಲಕ್ಷ್ಮಿಬಾಯಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು ಐದು ದಿನಗಳ ಹಿಂದೆ ಯುವರಾಜ ನಾಯ್ಕ ದೂರವಾಣಿ ಕರೆ ಮಾಡಿ, ತಾಯಿಯನ್ನು ಕಳುಹಿಸದಿದ್ದರೆ ಸಂತೋಷನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆ.16ರಂದು ರಾತ್ರಿ ಸುಮಾರು 10 ಗಂಟೆಗೆ ಯುವರಾಜ ನಾಯ್ಕ ಲಕ್ಷ್ಮಿಬಾಯಿಗೆ ಕರೆ ಮಾಡಿ, ಸಂತೋಷನಿಗೆ ಕಪಾಳ ಹಾಗೂ ಬೆನ್ನಿಗೆ ಕೈಯಿಂದ ಹೊಡೆದು, ಮುಖ ಮತ್ತು ತಲೆಗೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ಮಾಡಿದ್ದಾಗಿ ಹಾಗೂ ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿದ ಲಕ್ಷ್ಮಿಬಾಯಿ ಅವರು ನೆರೆಮನೆಯ ಜ್ಯೋತಿ ಹಾಗೂ ಚಿಕ್ಕಪ್ಪ ಸತೀಶ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಮನೆಯ ಬಳಿ ತೆರಳಿ ಪರಿಶೀಲಿಸುವಂತೆ ತಿಳಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಜ್ಯೋತಿ ಕರೆ ಮಾಡಿ, ಕೃಷ್ಣಾ ನಾಯ್ಕ ಮನೆಯ ಬಾಗಿಲಿನ ಹೊರಭಾಗದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದಾಗಿ ತಿಳಿಸಿದ್ದಾಳೆ. ಬಳಿಕ ಲಕ್ಷ್ಮಿಬಾಯಿ ಅವರು ಕುಟುಂಬದವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕೃಷ್ಣಾ ನಾಯ್ಕ ಮೃತಪಟ್ಟಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಗೂ ಮುನ್ನ ಕೃಷ್ಣಾ ನಾಯ್ಕ ಹಾಗೂ ಯುವರಾಜ ನಾಯ್ಕ ಬುಲೆರೋ ವಾಹನದ ಬಳಿ ಜಗಳವಾಡುತ್ತಿದ್ದುದನ್ನು ಕಂಡು, ತಾನು ಹಾಗೂ ಪತ್ನಿ ಗೀತಾಬಾಯಿ ಇಬ್ಬರನ್ನೂ ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದಾಗಿ ನೆರೆಮನೆಯ ಸತೀಶ್ ತಿಳಿಸಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿದ್ದ ಮಕ್ಕಳ ಹೇಳಿಕೆಯ ಪ್ರಕಾರ, ಸಂಜೆ ಇಬ್ಬರು ಮಾವಂದಿರು ಕೆಲಸದಿಂದ ಮನೆಗೆ ಬಂದಿದ್ದರು. ಕೃಷ್ಣಾ ನಾಯ್ಕ ಅವರು ಯಾಮಿನಿಗೆ ಊಟ ಮಾಡಿಸಲು ಮುಂದಾದಾಗ, ನಿದ್ದೆಗಣ್ಣಿನಲ್ಲಿದ್ದ ಯಾಮಿನಿ ಕೆಳಗೆ ಬಿದ್ದು ಮುಖದ ಎಡಭಾಗಕ್ಕೆ ಊತವಾಗಿತ್ತು. ಇದನ್ನು ಯುವರಾಜ ನಾಯ್ಕ ತಪ್ಪಾಗಿ ಅರ್ಥೈಸಿಕೊಂಡು, ಸಂತೋಷನೇ ಯಾಮಿನಿಗೆ ಹೊಡೆದಿದ್ದಾರೆಂದು ಭಾವಿಸಿ ಅವರೊಂದಿಗೆ ಜಗಳವಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ನಂತರ ಮಕ್ಕಳನ್ನು ಮನೆಯಿಂದ ಹೊರಗೆ ಕರೆತಂದಾಗ ಕೃಷ್ಣಾ ನಾಯ್ಕ ಮನೆಯ ಬಾಗಿಲಿನ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಮಕ್ಕಳ ಹೇಳಿಕೆಯನ್ನು ದೂರಿನಲ್ಲಿ ದಾಖಲಿಸಲಾಗಿದೆ. ಲಕ್ಷ್ಮಿಬಾಯಿ ನೀಡಿದ ದೂರಿನ ಆಧಾರದ ಮೇಲೆ ಲಿಂಗದಹಳ್ಳಿ ಪೊಲೀಸರು ಯುವರಾಜ ನಾಯ್ಕ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Brother attacked and murdered with an iron pipe

Share

Leave a comment

Leave a Reply

Your email address will not be published. Required fields are marked *

Don't Miss

ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಸಲು ಸೆ.29ರಂದು ಧರಣಿ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಫೆಡರೇಶನ್ (AITUC) ವತಿಯಿಂದ ಸೆ.29ರಂದು...

ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಸುಳ್ಳು ಮಾಹಿತಿ ನೀಡಿ ₹2.20 ಲಕ್ಷ ವಂಚನೆ

ಚಿಕ್ಕಮಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಸುಳ್ಳು ವೈಯಕ್ತಿಕ ಮಾಹಿತಿ ನೀಡಿ ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ *₹2.20 ಲಕ್ಷ ಹಣ ಹಾಗೂ ಮೊಬೈಲ್ ಫೋನ್ ಪಡೆದು ವಂಚಿಸಿರುವ ಆರೋಪ* ಕೇಳಿಬಂದಿದೆ. ಈ...

Related Articles

12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲೆಯ 12...

ಕಳಸದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ

ಕಳಸ : ಮನೆಯಂಗಳದಲ್ಲೇ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಸ್ಥಳೀಯರನ್ನು ಬೆಚ್ಚಿಬೀಳಿಸಿದ ಘಟನೆ ಕಳಸ ತಾಲೂಕಿನ...

ಕೆಎಸ್‌ಆರ್‌ಟಿಸಿ ಬಸ್–ಟ್ರ್ಯಾಕ್ಟರ್ ಇಂಜಿನ್ ಡಿಕ್ಕಿಗೆ ಚಾಲಕ ಸಾವು

ತರೀಕೆರೆ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ರ್ಯಾಕ್ಟರ್ ಇಂಜಿನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟ್ರ್ಯಾಕ್ಟರ್...

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಪ್ರಜಾಸೇವ ಆಂದೋಲನದ ಉದ್ದೇಶ

ಚಿಕ್ಕಮಗಳೂರು:  ಜನರ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಆಲಿಸಿ, ಸಾಧ್ಯವಾದಷು ಶೀಘ್ರವಾಗಿ ಇತ್ಯರ್ಥ ಪಡಿಸುವ...