Home namma chikmagalur chikamagalur 2023ರ ಬೆಟ್ಟಿಂಗ್ ದಂಧೆಯಲ್ಲಿ ಸಿ.ಟಿ.ರವಿ-ತಮ್ಮಯ್ಯ ಕಿಂಗ್ – ಪಿನ್ ಗಳಾ ?
chikamagalurHomeLatest Newsnamma chikmagalur

2023ರ ಬೆಟ್ಟಿಂಗ್ ದಂಧೆಯಲ್ಲಿ ಸಿ.ಟಿ.ರವಿ-ತಮ್ಮಯ್ಯ ಕಿಂಗ್ – ಪಿನ್ ಗಳಾ ?

Share
Share

ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಅಪ್ ಗಳು ನಾಯಿ ಕೊಡೆಗಳಂತೆ ದಿನವೂ ಬೆಳೆಯಿತ್ತಿವೆ.ಇದಕ್ಕೆ ಮುಖ್ಯವಾಗಿ ಕ್ರಿಕೆಟ್ ಕೇಜ್ ಅದರಲ್ಲೂ ಐ.ಪಿ.ಎಲ್.ಶುರುವಾದ ಮೇಲೆ ಬೆಟ್ಟಿಂಗ್ ದಂಧೆಯಲ್ಲಿ ಹಲವು ಸಂಸಾರಗಳು ಹಾಳಾಗಿವೆ.ಸಾವಿರಾರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೆರಳೆಣಿಕೆಯಷ್ಟು ಜನ ಹಣ ಮಾಡಿಕೊಂಡರೆ ಸಾವಿರಕ್ಕೆ ಒಬ್ಬ ಕೋಟ್ಯಂತರಗಳಿಸಿದ್ದಾರೆ.

ಇಂತಹ ಬೆಟ್ಟಿಂಗ್ ಜಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಕ್ರಿಯವಾಗಿವೆ.ಇದರಲ್ಲಿ ಮೊನ್ನೆ ಸಿಕ್ಕಿಹಾಕಿಕೊಂಡವರು ಮುದ್ದೆ ಮುರಿಯುತ್ತಿದ್ದಾರೆ. ಬೆಟ್ಟಿಂಗ್ ದಂಧೆಯ ಬಗ್ಗೆ ಬಿಜೆಪಿ ಕಾಂಗ್ರೆಸ್ ಮಧ್ಯೆ ಎನ್ನುವುದಕ್ಕಿಂತ ಸಿ.ಟಿ.ರವಿ V/S ತಮ್ಮಯ್ಯ ಮಧ್ಯೆ ಕೋಲ್ಡ್ ವಾರ್ ಪ್ರಾರಂಭವಾಗಿದೆ.ಅವರ ಮೇಲೆ ಇವರು,ಇವರ ಮೇಲೆ ಅವರು ಆರೋಪ ಪ್ರತ್ಯರೋಪದಲ್ಲಿ ನಿರತರಾಗಿದ್ದಾರೆ.

ಇದರ ಜೊತೆಗೆ ಆರೋಪಿಗಳ ಪೋಟೋ ಶೇರ್ ಕೂಡ ನಡೆದಿದೆ.ಆದರೆ ಬೋಜೇಗೌಡರು ಮಾತ್ರ ಕೂಲ್ ಆಗಿ ತನಿಖೆಗೆ ಒತ್ತಾಯ ಮಾಡಿದ್ದಾರೆ. ಇದು ಕೇವಲ ಪ್ರಚಾರಕ್ಕೆ ಎಂಬುದನ್ನು ತಿಳಿಯದ ಮುರ್ಖರು ಇದ್ದಾರೆ ಎಂಬ ಜ್ಞಾನ ಇಲ್ಲದೆ ಇರುವವರಂತೆ ಮಾತನಾಡುತ್ತಿದ್ದಾರೆ.ಸತ್ಯ ತಿಳಿದು ಕೊಳ್ಳುವುದು ಒಳ್ಳೆಯದು.

ಚಿಕ್ಕಮಗಳೂರು ಸಿ.ಎನ್.ಎನ್.ಠಾಣೆಯಲ್ಲಿ ಆನಂದ್ ಮತ್ತಿತರರು ನೀಡಿದ ದೂರಿನ ಮೇಲೆ ಹಲವು ಜನರ ಮೇಲೆ ದೂರು ದಾಖಲು ಮಾಡಿ ಪ್ರಶಾಂತ್, ರಾಹುಲ್, ಸಂಜಯ್,ಚೇತನ್ ,ಅಸ್ಲಾಂ, ಮತ್ತು ಶರತ್ ಎಂಬುವವರನ್ನು ಬಂಧಿಸಿ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ.

ಪ್ರಶಾಂತ್ ಮತ್ತಿತರರು 2023 ರಲ್ಲಿ ದಂಧೆ ಶುರು ಮಾಡಿ ಮೂರು ನಾಲ್ಕು ತಿಂಗಳಲ್ಲಿ ದಂಧೆ ನಿಲಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ.18 ಅಕೌಂಟ್ ಅವರೀವರ ಹೆಸರಿನಲ್ಲಿ ತೆರೆದು ಬೇರೆ,ಬೇರೆ ಹೆಸರಿನಲ್ಲಿ ವ್ಯವಹಾರ ಮಾಡಿ ಕಮಿಷನ್ ಹಣ ಪಡೆದಿದ್ದಾರೆ.ಮೂರು ಅಕೌಂಟ್ ಗಳಲ್ಲಿ ಮಾತ್ರ ಲಕ್ಷ,ಲಕ್ಷ ಹಣದ ವಹಿವಾಟು ನಡೆದಿದೆ.

ಒಂದು ಅಕೌಂಟ್ ನಲ್ಲಿ 29 ಲಕ್ಷ,ಇನ್ನೊಂದು ಅಕೌಂಟ್ ನಲ್ಲಿ 32 ಲಕ್ಷ ಮತ್ತೊಂದು ಅಕೌಂಟ್ ನಲ್ಲಿ 34 ಲಕ್ಷ ರೂಗಳ ವ್ಯವಹಾರ ನಡೆದರೆ ಬಾಕಿ ಅಕೌಂಟ್ ಗಳಲ್ಲಿ ಸಾವಿರದಿಂದ ಹತ್ತು ಸಾವಿರದವರೆ ವ್ಯವಹಾರ ನಡೆಸಿರುವ ಬಗ್ಗೆ ಮಾಹಿತಿ ದೊರೆಯುತ್ತಿದೆ.ಕಮಿಷನ್ ಹಣಕ್ಕಾಗಿ ಬೆಟ್ಟಿಂಗ್ ದಾರರ ಮಧ್ಯೆ ಕಿತ್ತಾಟ ಪ್ರಾರಂಭವಾಗಿ ಠಾಣೆಗೆ ದೂರು ತಲುಪಿ ದೂರು ದಾಖಾಲಾಗಿದೆ.

ಇದು ಸತ್ಯಕ್ಕೆ ಹತ್ತಿರವಾದದ್ದು.ಆದರೆ ರಾಜಕೀಯಕ್ಕಾಗಿ ಸಿ.ಟಿ.ರವಿ ಮತ್ತು ತಮ್ಮಯ್ಯ ಮಧ್ಯೆ ಹಾದಿ,ಬೀದಿಯಲ್ಲಿ ಹೇಳಿಕೆ ನೀಡುವುದರ ಮೂಲಕ ಇವರುಗಳ ಕೈವಾಡ ಇದೇಯಾ ಎಂಬ ಅನುಮಾಸ ಪ್ರಾರಂಭವಾಗಿದೆ.ಇವರ ಹಿಂದಿನ ಹಿನ್ನೆಲೆ ನೋಡಿದರೆ ಶ್ರೀಮಂತರಲ್ಲ ಆದರೆ ಈಗ ನೋಡಿದರೆ ಭಯ ಶುರುವಾಗುತ್ತದೆ ಎಂದು ರಾಜಕಾರಣಿಗಳು ಹೇಳುತ್ತಿದ್ದಾರೆ.

ಇಂತಹ ಘಟನೆಗಳ ಬಗ್ಗೆ ಸೂಕ್ಷ್ಮತೆ ಬೇಕು ಇವರ ಹೇಳಿಕೆ ತುತ್ತೂರಿ ಉದುವವರ ಮಾತು ಕೇಳಿ ಹಾದಿ ತಪ್ಪುವ ಸಾಧ್ಯತೆಗಳು ಹೆಚ್ಚು.ಪ್ರಚಾರದ ಹುಚ್ಚಿಗೆ ಬಿದ್ದು ಮಾತನಾಡವುದು ಯಾರಿಗೂ ಒಳ್ಳೆಯದಲ್ಲ ತಮ್ಮಯ್ಯರ ಕೋಬ್ರದರ್ ಹೆಸರಿನಲ್ಲಿ ಮಾಧ್ಯಮ ದಂಧೆ ಪ್ರಾರಂಭ ಮಾಡಿದ ಮೇಲೆ ಸಿ.ಟಿ.ರವಿ ಕೂಡ ಮಾಧ್ಯಮ ದಂಧೆ ಪ್ರಾರಂಭ ಮಾಡಿರುವುದರಿಂದ “ತುತ್ತೂರಿ” ಗಳ ಸೌಂಡ್ ಹೆಚ್ಚಾಗುತ್ತಿವೆ.

ಇವರು ಕೊಟ್ಟ ಮಾಹಿತಿಯಿಂದ ಇಂತಹ ಸುಳ್ಳಿನ ಕಂತೆಗಳು ಬಣ್ಣ,ಬಣ್ಣದ ಸುದ್ದಿ ಹರಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.ಒಟ್ಟಾರೆ ಸುತ್ತಿಬಳಸಿ ಸಿ.ಟಿ.ರವಿ ಮತ್ತು ತಮ್ಮಯ್ಯರ ಮಧ್ಯೆ ಗಿರಕಿ ಹೊಡೆಯುತ್ತಿದೆ.

ನಗರಸಭೆಯ ಸದಸ್ಯ ಗೋಪಿ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ.ಅವರ ಸಂಬಂಧಿಗಳ ಇರುವುದು ಇದಕ್ಕೆ ಕಾರಣವಾದರು ಬೆಟ್ಟಿಂಗ್ ದಂಧೆ ವಿಚಾರ ತಿಳಿದಿದೆ ಎನ್ನಲಾಗುತ್ತಿದೆ ಸಾಕ್ಷಿ ಅಧಾರದ ಕೊರತೆ ಇರುವುದರಿಂದ ಪೊಲೀಸ್ ರು ಏನು ಮಾಡಲಾಗುತ್ತಿಲ್ಲ ಎನ್ನಲಾಗಿದೆ.

Are CT Ravi-Thammaiah the kingpins in the 2023 betting business?

Share

Leave a comment

Leave a Reply

Your email address will not be published. Required fields are marked *

Don't Miss

ಕಾಫಿ ತೋಟದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮುತ್ತೋಡಿ ಪ್ರಾದೇಶಿಕ ವಲಯದ ವ್ಯಾಪ್ತಿಯ ಹೊಸ ತೋಟ ಪ್ರದೇಶದ ಖಾಸಗಿ ಕಾಫಿ ತೋಟದಲ್ಲಿ ಗಂಡು ಹುಲಿಯ ಮೃತದೇಹ ಸೋಮವಾರ ಸಂಜೆ...

ವಾಹನ ಡಿಕ್ಕಿಗೆ ಬೈಕ್ ಸವಾರ ಸಾವು

ಬೀರೂರು: ಕಡೂರು ತಾಲ್ಲೂಕಿನ ಹೇಮಗಿರಿ ಗೇಟ್ ಬಳಿಯ ಜಮೀನಿನಲ್ಲಿ ಕೆಲಸ ಮುಗಿಸಿ, ಅಜ್ಜಂಪುರ ಕಡೆಗೆ ಬೀರೂರು ಬೈಪಾಸ್ ರಸ್ತೆ ಮೂಲಕ ತೆರಳುತ್ತಿದ್ದ ವ್ಯಕ್ತಿಯೊಬ್ಬರು, ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೀರೂರು...

Related Articles

ಮೂಡಿಗೆರೆಯಲ್ಲಿ ಅಕ್ರಮ ಅಂದರ್-ಬಾಹರ್ ಜೂಜಾಟದ ಮೇಲೆ ಪೊಲೀಸರ ದಾಳಿ

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ನಡೆಸುತ್ತಿದ್ದ ಸ್ಥಳದ ಮೇಲೆ ಮೂಡಿಗೆರೆ...

ಪ್ರೀತಿಯ ನಿರಾಕರಿಸಿದ ಯುವಕನಿಗೆ ಚಾಕು ಇರಿತ

ಚಿಕ್ಕಮಗಳೂರು: ನಗರದ ಮಲ್ಲಂದೂರು ರಸ್ತೆಯ ಗೋಲ್ಡನ್ ಬಾರ್ ಮುಂಭಾಗ ತಡರಾತ್ರಿ ಚಾಕು ಇರಿತ ಹಾಗೂ ಅಪಹರಣ...

ಕೆಲ ಉದ್ಯಮಗಳ ಕನಿಷ್ಟ ವೇತನ ಕಾಯ್ದೆ ವ್ಯಾಪ್ತಿಗೆ ತರಲು ಎಐಟಿಯೂಸಿ ಹೋರಾಟ

ಚಿಕ್ಕಮಗಳೂರು: ಕನಿಷ್ಟ ವೇತನ ಕಾಯ್ದೆಯಡಿಯಲ್ಲಿ ೮೨ ಉದ್ಯಮಗಳನ್ನು ಸೇರಿಸಲಾಗಿದೆ ಆದರೆ ೧೯ ಉದ್ಯಮಗಳನ್ನು ಕೈಬಿಡಲಾಗಿದೆ. ಈ...

ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸನ್ನದ್ಧರಾಗಿ ಸೂಚನೆ

ಚಿಕ್ಕಮಗಳೂರು: ಬರ ಪರಿಸ್ಥಿತಿ ಎದುರಿಸಲು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಜಿಲ್ಲೆಯ ಎಲ್ಲಾ ಇಲಾಖೆಗಳ...