ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಕ್ರಮ ನಡೆದಿದೆ ಎಂದು ಕಳೆದ ನಾಲ್ಕುವರೆ ವರ್ಷಗಳಿಂದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಸುತ್ತಿ,ಸುತ್ತಿ ಸುಸ್ತಾದವರಿಗೆ ಫಲಿತಾಂಶ ಗಾಯಿತ್ರಿ ಶಾಂತೇಗೌಡರ ಪರ ಬಂದಿತು.
ಈಗಾಗಲೇ ಎರಡು ಬಾರಿ ಪಟಾಕಿ ಸಿಡಿಸಿ ಜೈಕಾರ ಕೂಗಿದವರು ಅಂತಿಮವಾಗಿ ನಿನ್ನೆ ವಿಜಯೋತ್ಸವ ಆಚರಿಸಿದರು.ಅಂತಿಮವಾದ ತೀರ್ಪು ಬಂದರೂ ಒಂದು ತಿಂಗಳು ಮುಂದುವರೆಯಲು ಹಾಲಿ ಸದಸ್ಯ ಎಂ.ಕೆ.ಪ್ರಾಣೇಶ್ ಗೆ ಅವಕಾಶ ಕೊಡಲಾಗಿದೆ.ಇದರಿಂದ ಗಾಯತ್ರಿ ಶಾತೇಗೌಡ ಹಾರ,ತರಾಯಿಯಲ್ಲಿ ಕಾಲ ಕಳೆಯಬೇಕು.
ಬಿಜೆಪಿ ವಲಯದಲ್ಲಿ ಕೂಡ ಇದೇ ತರಹ ಲೆಕ್ಕಾಚಾರ ನಡೆದಿತ್ತು.ಆಗಸ್ಟ್ ಮೊದಲ ವಾರದ ಅಧಿವೇಶನ ಮುಗಿಯಲಿ ಎನ್ನುತ್ತಿದ್ದವರೆಗೆ ವರದಾನವಾಗಿದೆ. ಎಂ.ಕೆ.ಪ್ರಾಣೇಶ ಸುಪ್ರೀಂ ಕೋರ್ಟ್ ನ ತೀರ್ಪು ಜೊತೆಗೆ ನೈತಿಕ ಹೊಣೆ ಇದ್ದರೆ ರಾಜೀನಾಮೆ ನೀಡುವುದು ಒಳ್ಳೆಯದು ಇಲ್ಲದಿದ್ದರೆ ಭಂಡತನ ಎನ್ನುವ ಕಾಂಗ್ರೆಸ್ ನವರ ಒತ್ತಾಯ ಖಚಿತ.ಸುಪ್ರೀಂ ಕೋರ್ಟ್ ಇನ್ನೊಂದು ತಿಂಗಳು ಎಂದು ತೀರ್ಪು ಕೂಡ ಯಕ್ಷ ಪ್ರಶ್ನೆ ಯಾಗಿ ಉಳಿಯುತ್ತದೆ.
ಯಾರದ್ದು ಸರಿ ಎಂಬ ಪ್ರಶ್ನೆ ಮಧ್ಯೆ ಕಳೆದ ನಾಲ್ಕೂವರೆ ವರ್ಷಗಳಿಂದ ಕೋರ್ಟ್ ತಿರುಗಿದ್ದ ವೆಚ್ಚವಾಗಿರುವ ಹಣದ ವಹಿವಾಟು ಕೋಟ್ಯಂತರ ಎನ್ನಲಾಗುತ್ತಿದೆ.ಇಷ್ಟೊಂದು ಪ್ರತಿಷ್ಠೆ ಏಕೆ ಎಂದರೆ ಆದೇ “ಕುರ್ಚಿ” ಮಹಾತ್ಮೆ ಎನ್ನಬಹುದು.
ಕಳೆದ ತಿಂಗಳು ಶೃಂಗೇರಿ ಕ್ಷೇತ್ರದಲ್ಲೂ ಇಂತಹ ಘಟನೆ ನಡೆದು ದಿನಕ್ಕೂಬ್ಬರು ಶಾಸಕರಾದರು.ಬಿಜೆಪಿ ಜೀವರಾಜ್ ಮತ್ತು ಟಿ.ಡಿ.ರಾಜೇಗೌಡರ ಮಧ್ಯೆ ಇಂತಹ ಪ್ರಹಸನ ನಡೆದು ಅಂತಿಮವಾಗಿ ಸುಪ್ರೀಂ ಕೋರ್ಟ್ ನಲ್ಲಿ ಟಿ.ಡಿ.ರಾಜೇಗೌಡ ಶಾಸಕರಾಗಿ ಮುಂದುವರೆದಿದ್ದಾರೆ.ಈಗ ತೀರ್ಪು ಬಂದರು ಗಾಯಿತ್ರಿ ಶಾಂತೇಗೌಡ ಇನ್ನೂ ತಿಂಗಳು ಕಾಯಬೇಕಾಗಿದೆ.
A monthly “chair” for Pranesh? A guarantee for Gayathri for the rest of the term?
Leave a comment