Home namma chikmagalur chikamagalur ಸ್ಕೌಟ್ಸ್‌ನ ಗುಣಾತ್ಮಕ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸಬೇಕು
chikamagalurHomeLatest Newsnamma chikmagalur

ಸ್ಕೌಟ್ಸ್‌ನ ಗುಣಾತ್ಮಕ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸಬೇಕು

Share
Share

ಚಿಕ್ಕಮಗಳೂರು: ಸ್ಕೌಟ್ಸ್‌ನ ಗುಣಾತ್ಮಕ ವಿಚಾರಗಳನ್ನು ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿ ಗಳಿಗೆ ಪರಿಚಯಿಸುವ ಕಾರ್ಯ ಶಿಕ್ಷಕರು ಮಾಡಬೇಕು. ಇದು ಮಕ್ಕಳ ಜೀವನದ ಕಾಲಘಟ್ಟದಲ್ಲಿ ಶಿಸ್ತಿನ ಪಾ ರಿಪಾಠ ಬೋಧಿಸಿದಂತಾಗಲಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಶನಿವಾರ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಜಿ.ಪಂ. ಇವರ ಸಹಯೋಗದಲ್ಲಿ ಅಧಿಕಾರಿಗಳು, ಸಿಆರ್‌ಪಿ ಮತ್ತು ಬಿಆರ್‌ಪಿ ಸಿಬ್ಬಂದಿಗಳಿಗೆ ಆಯೋಜಿಸಿದ್ಧ ಸ್ಕೌಟ್ಸ್ ಮತ್ತು ಗೈಡ್ಸ್ ಸಾಮಾನ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಚಟುವಟಿಕೆಗೆ ಮಾತ್ರ ಸೀಮಿತರಾಗದೇ, ಕೊಠಡಿಯಿಂದ ಹೊರ ಬಂದು ಸೇ ವಾಕಾರ್ಯ ಮೈಗೂಡಿಸುವ ಸ್ಕೌಟ್ಸ್-ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಬಗ್ಗೆ ಶಾಲಾ ಶಿಕ್ಷ ಕರು ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದಲ್ಲಿ ಗುರುಗಳ ಶ್ರಮ ಸಾರ್ಥಕವಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸ್ಕೌಟ್ಸ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ತರಬೇತಿಗಾಗಿ ಭವ್ಯವಾದ ಕಟ್ಟಡವು ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಎ.ಎನ್.ಮಹೇಶ್ ಅವರ ಕೊಡುಗೆ ಅಪಾರದ್ದು ಮುಂದೆ ಈ ಕಟ್ಟಡವು ಸ್ಕೌಟ್ಸ್‌ನ ಎಲ್ಲಾ ಕಾರ್ಯಗಳಿಗೂ ಪೂರಕವಾಗಲಿದೆ ಎಂದರು.

ರಾಜ್ಯದ ಸ್ಕೌಟ್ಸ್ ಕಾರ್ಯಚಟುವಟಿಕೆಗಳಲ್ಲಿ ಸುಮಾರು ೫೦ ಸಾವಿರ ಸೇವಕರು, ೮ ಲಕ್ಷ ಮಂದಿ ಸದಸ್ಯ ರಿದ್ದು ಆರೇಳು ಸಾವಿರ ಶಿಕ್ಷಕರಿಗೆ ನಿರಂತರ ತರಬೇತಿ ನೀಡುತ್ತಿದೆ. ಅಲ್ಲದೇ ಸದಸ್ಯರುಗಳ ಮಕ್ಕಳು ಅತಿಹೆಚ್ಚು ಗಳಿಸಿದವರಿಗೂ ಪ್ರತಿವರ್ಷವು ಗೌರವಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಇತ್ತೀಚೆಗೆ ಐಸ್‌ಕ್ರೀಂ ಚಾಕಲೇಟ್‌ಗಳಲ್ಲಿ ಡ್ರಗ್ಸ್ ಪದಾರ್ಥಗಳು ಸೇರ್ಪಡೆಗೊಳ್ಳುತ್ತಿವೆ. ಇದನ್ನು ಮಕ್ಕಳು ನೇರವಾಗಿ ಸೇವಿಸುತ್ತಿದ್ದಾರೆ. ಇದರಿಂದ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸುತ್ತಿಲ್ಲ. ಶಿಕ್ಷಕರ ಪಾಠ ನಡೆ ಸುವ ವೇಳೆಯಲ್ಲೂ ಯಾವುದೋ ಲೋಕದಲ್ಲಿ ತೇಲಾಡುವಂಥ ಮನಸ್ಥಿತಿಯಿದ್ದು ಇದರಿಂದ ಹೊರತರಲು ಸ್ಕೌಟ್ಸ್ ತರಬೇತಿ ಅವಶ್ಯಕ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಉಪಾಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಶತಮಾನೋತ್ಸವ ಪೂ ರೈಸಿರುವ ಸ್ಕೌಟ್ಸ್ ಸಂಸ್ಥೆ ಜಗತ್ತಿನಾದ್ಯಂತ ಒಂದು ಆಂದೋಲನದ ರೂಪದಲ್ಲಿ ಹರಡಿಕೊಂಡಿದೆ. ಈ ಸಂಸ್ಥೆ ಯ ಸಿದ್ದಾಂತವನ್ನು ದೇಶದ ಅನೇಕ ರಾಜಮಹಾರಾಜರು, ಪಿಜಿಆರ್ ಸಿಂಧ್ಯಾ ಹಿರಿಯರ ಮಾರ್ಗದರ್ಶನ ದಲ್ಲಿ ಒಂದು ಆನೆಬಲದಂತೆ ಸಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಪ್ರತಿ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಿಸುವ ಉದ್ದೇಶದಿಂದ ಅಧಿಕಾರಿ ವೃಂದ, ದೈಹಿಕ ಶಿಕ್ಷಣಾಧಿಕಾರಿ, ಗುಚ್ಚ ಸಂಪನ್ಮೂಲ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೆ ಸಾಮಾನ್ಯ ಮಾಹಿತಿ ಶಿಬಿರ ಏ ರ್ಪಡಿಸಿದ್ದು ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್‌ನ ಶಿಕ್ಷಕರ ಜೊತೆಗೂಡಿ ಘಟಕವನ್ನು ತೆರೆಯು ವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

ಡಿಡಿಪಿಐ ತಿಮ್ಮರಾಜು ಮಾತನಾಡಿ ವಿದ್ಯಾರ್ಥಿದೆಸೆಯಲ್ಲಿ ಶಿಸ್ತು, ಸಂಯಮ, ಬದುಕಿನ ಮೌಲ್ಯಗಳನ್ನು ಮೂಡಿಸಲು ಸ್ಕೌಟ್ಸ್-ಗೈಡ್ಸ್ ತರಬೇತಿ ಸಹಕಾರಿಯಾಗಿದೆ. ಕೇವಲ ಅಂಕ ಗಳಿಕೆ ಹಾಗೂ ಒತ್ತಡಕ್ಕೆ ವಿದ್ಯಾಥಿ ಗಳು ಸಿಲುಕಿಕೊಳ್ಳಬಾರದು. ಇದು ಬಹಳ ಅಪಾಯಕಾರಿಯಾಗಿದೆ. ಹೀಗಾಗಿ ಕೊಠಡಿ ಹೊರತಾಗಿ ಚಟು ವಟಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.

ಇತ್ತೀಚೆಗೆ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಬಿಡುವಿಲ್ಲದೇ ಪಾಠವನ್ನು ಕೇಳುವಂತಾಗಿದೆ. ವಿಶೇ ಷವಾಗಿ ಖಾಸಗೀ ಶಾಲೆಗಳಲ್ಲಿ ಅತಿಯಾದ ಹೋಂವರ್ಕ್ಸ್, ಪಾಲಕರ ಒತ್ತಡದಿಂದ ಮಕ್ಕಳು ಮಾನಸಿಕ ವಾ ಗಿ ಕುಗ್ಗುವ ಜೊತೆಗೆ ಬಾಲ್ಯದಲ್ಲೇ ಹೃದಯಘಾತಕ್ಕೆ ತುತ್ತಾಗುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಮಕ್ಕ ಳಿಗೆ ಶಾಲೆ ಹಾಗೂ ಮನೆಗಳಲ್ಲಿ ವಿಶ್ರಾಂತಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಇದೇ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಶೇ.೯೯ ರಷ್ಟು ಅಧಿಕ ಅಂಕಗಳಿಸಿ ರಾಜ್ಯಕ್ಕೆ ೬ನೇ ಸ್ಥಾನ ಗಳಿಸಿದ ಕು. ಕೆ.ಪಿ.ಚೇತನ ಅವರಿಗೆ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ, ಆಯುಕ್ತರಾದ ಟಿ.ಕೆ.ಫಣಿರಾಜ್, ಡಿ.ಎಸ್.ಮಮತ, ಖಜಾಮಚಿ ಕೆ.ಎಸ್.ರಮೇಋಶ್, ಕಾರ್ಯದರ್ಶಿ ನೀಲಕಂಠಚಾರ್, ತರಬೇತಿ ಆಯುಕ್ತೆ ಸಂಧ್ಯಾರಾಣಿ, ಕಿರಣ್‌ಕುಮಾರ್, ಪ್ರಥಮ ಮುಂತಾದವರು ಉಪಸ್ಥಿತರಿದ್ದರು.

Children should be introduced to the positive ideas of Scouts.

Share

Leave a comment

Leave a Reply

Your email address will not be published. Required fields are marked *

Don't Miss

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಅಹ್ವಾನ

ಚಿಕ್ಕಮಗಳೂರು: ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳು ಒಳಗೊಂಡಂತೆ) ೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ...

ಆಯುಷ್ಮಾನ್ ಆರೋಗ್ಯ ಕೇಂದ್ರದ ಕಾಮಗಾರಿಗೆ ಗುದ್ದಲಿ ಪೂಜೆ

ಚಿಕ್ಕಮಗಳೂರು: ಆರೋಗ್ಯ, ಶಿಕ್ಷಣ ಮತ್ತು ಜನರ ಬದುಕಿಗಾಗಿ ಆದ್ಯತೆಯ ಮೇಲೆ ಕೆಲಸ ಮಾಡಬೇಕಾಗಿರುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಆಗಿರುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ...

Related Articles

ಅಂಬೇಡ್ಕರ್ ವಸತಿ ಶಾಲೆಯಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಳಪೆ ಮಟ್ಟದ ಹಾಗೂ ಅರೆಬೆಂದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ...

15.99 ಲಕ್ಷ ಜನರ ಸಂಧ್ಯಾ ಸುರಕ್ಷಾ ಯೋಜನೆಯ ರದ್ದು

ಚಿಕ್ಕಮಗಳೂರು: ರಾಜ್ಯ ಸರಕಾರ ನೀಡುತ್ತಿರುವ ಸಂಧ್ಯಾ ಸುರಕ್ಷಾ ಯೋಜನೆಯ ಪ್ರಯೋಜನ ೧೫.೯೯ ಲಕ್ಷ ಜನರಿಗೆ ರದ್ದಾಗಿದ್ದು...

ಅಯೋದ್ಯೆ ಹಣ ಕಳವು-ಸುಪ್ರೀಂನಿಂದ ಪಾರದರ್ಶಕ ತನಿಖೆಯಾಗಲಿ

ಚಿಕ್ಕಮಗಳೂರು: ಶ್ರೀರಾಮನ ಹೆಸರಲ್ಲಿ ಅಕಾರಕ್ಕೆ ಬಂದ ಬಿಜೆಪಿ ಶ್ರೀರಾಮನ ಟ್ರಸ್ಟ್ ಮೂಲಕ ಹಣಲೂಟಿ ಮಾಡಿದ್ದೇ ಸಾಧನೆಯಾಗಿದೆ....

ಚಿಕ್ಕಮಗಳೂರು ಜಿಲ್ಲೆಯ ಯಾರಿಗೂ ಸಚಿವ ಸ್ಥಾನವಿಲ್ಲ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಯಾವ ಶಾಸಕರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಖಚಿತ ಮಾಹಿತಿ ಇದೆ....