Home namma chikmagalur chikamagalur ಮಹಮದ್ ಅನ್ವರ್ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ
chikamagalurHomeLatest Newsnamma chikmagalur

ಮಹಮದ್ ಅನ್ವರ್ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

Share
Share

ಚಿಕ್ಕಮಗಳೂರು : ಕಳೆದ ಎಂಟು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸಿದ್ದ ಕೇಬಲ್ ನೆಟ್‌ವರ್ಕ್ ಉದ್ಯಮಿ ಉಪ್ಪಳ್ಳಿಯ ಮಹಮದ್ ಅನ್ವರ್ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಮೃತನ ಸಹೋದರ ಅಬ್ದುಲ್ ಕಬೀರ್ ಆಗ್ರಹಿಸಿದರು.

ಅವರು ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ೨೦೧೮ರ ಜೂ.೨೨ ರಂದು ನಗರದ ಗೌರಿ ಕಾಲುವೆ ಬಡಾವಣೆ ಗುಡ್‌ಮಾರ್ನಿಂಗ್ ಶಾಪ್ ಬಳಿ ದುಷ್ಕರ್ಮಿಗಳು ಡ್ರ್ಯಾಗನ್ ಮತ್ತು ಚಾಕುವಿನಿಂದ ಇರಿದು ಭರ್ಬರವಾಗಿ ಕೊಲೆ ಮಾಡಿದ್ದರೆಂದು ಹೇಳಿದರು.

ಕೊಲೆ ನಡೆದು ೮ ವರ್ಷಗಳು ತುಂಬಿದ್ದರೂ ಪೊಲೀಸ್ ಇಲಾಖೆ, ಸಿಐಡಿ ಇಲಾಖೆ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸದೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ವಿಫಲರಾಗಿರುವುದರಿಂದ ಕುಟುಂಬವು ಕಂಗಾಲಾಗಿ ಚಿಂತಾಜನಕ ಸ್ಥಿತಿಯಲ್ಲಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ. ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ಕೊಲೆಗಾರರನ್ನು ಜೈಲಿಗೆ ತಳ್ಳುವವರೆಗೂ ವಿಶ್ರಮಿಸದೆ ಹೋರಾಟ ಮುಂದುವರೆಸುತ್ತೇನೆ. ಈಗಾಗಲೇ ಶಂಕಿತ ೭ ಆರೋಪಿಗಳ ಪೈಕಿ ಮೂವರು ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಿದ್ದು, ನ್ಯಾಯಾಲಯ ಅಧಿಕೃತವಾಗಿ ಆದೇಶ ನೀಡುತ್ತಿಲ್ಲ ಎಂದು ವಿವರಿಸಿದರು.

ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತನಿಖಾ ಸಂಸ್ಥೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೊಲೆ ಪ್ರಕರಣ ನಡೆದು ಇದುವರೆಗೂ ತನಿಖೆ ಪೂರ್ಣಗೊಳ್ಳದಿರುವ ಬಗ್ಗೆ ಕಾರಣವೇನೆಂದು ಪ್ರಶ್ನಿಸಿದ ಅವರು ೫ ವರ್ಷಗಳಿಂದ ಸಿಐಡಿ ತನಿಖೆ ನಡೆಸಿದರೂ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಭವೇಕೆ ಎಂದರಲ್ಲದೆ, ಕೂಡಲೆ ಸಿಬಿಐ ತನಿಖೆ ನಡೆಸಿ ಸಮಗ್ರ ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬೆನಡಿಕ್ಟ್ ಜೇಮ್ಸ್, ಅಬ್ದುಲ್ ಮಜೀದ್, ನಜೀರ್ ಉಪಸ್ಥಿತರಿದ್ದರು.

Demand for CBI investigation into Mohammad Anwar murder case

Share

Leave a comment

Leave a Reply

Your email address will not be published. Required fields are marked *

Don't Miss

ಎಂ.ಸಿ. ಹಳ್ಳಿಯಲ್ಲಿ ಕಡವೆ ಬೇಟೆ-ಆರೋಪಿಗಳ ಬಂಧನ

ತರೀಕೆರೆ: ಲಕ್ಕವಳ್ಳಿ ವಲಯದ ಎಂ.ಸಿ. ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆ ಮಾಡಿ ಮಾಂಸ ಕತ್ತರಿಸುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ...

ಸೆ.21ರಿಂದ ಮುಖ್ಯಮಂತ್ರಿ ನಿವಾಸದವರೆಗೆ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಅಥವಾ ನೇರಪಾವತಿ ವ್ಯವಸ್ಥೆಗೆ ಒಳಪಡಿಸಿ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೆ.21ರಿಂದ ತುಮಕೂರಿನ ಸಿದ್ದಗಂಗಾ ಮಠದಿಂದ...

Related Articles

ಪೂನಾ ಒಪ್ಪಂದ ಯಥಾವತ್ತಾಗಿ ಜಾರಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ

ಚಿಕ್ಕಮಗಳೂರು:  ದಲಿತ ಸಮುದಾಯದ ಪ್ರಾತಿನಿಧ್ಯ ಹಾಗೂ ಹಕ್ಕುಗಳನ್ನು ಸಂರಕ್ಷಿಸುವ ಉ ದ್ದೇಶದಿಂದ ಪೂನಾ ಒಪ್ಪಂದ ಯಥಾವತ್ತಾಗಿ...

ಶೇ.90ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಚಿಕ್ಕಮಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ...

ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗ ಪ್ರತ್ಯಕ್ಷ

ಚಿಕ್ಕಮಗಳೂರು : ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ...

ಸಾರಿಗೆ ಸಂಸ್ಥೆಯ ಬಸ್ – ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ಮೂಡಿಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ...