Home Crime News ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆಗೆ ಶರಣು
Crime NewsHomeKadurLatest Newsnamma chikmagalur

ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

Share
Share

ಕಡೂರು: ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಲ್ಲೂರು ಗ್ರಾಮದ 20 ವರ್ಷದ ಚಂದನ್ ಮೃತಪಟ್ಟ ದುರ್ದೈವಿ.

ಇತ್ತೀಚೆಗೆ ಇದೇ ಗ್ರಾಮದ ಹುಡುಗಿಯೊಬ್ಬಳು ತನ್ನ ಪ್ರಿಯಕರನ ಜೊತೆ ಮನೆ ಬಿಟ್ಟು ಹೋಗಿದ್ದು, ಆಕೆಯ ಮೊಬೈಲ್ ಕರೆಗಳ ವಿವರವನ್ನು ಪರಿಶೀಲಿಸಿದಾಗ ಚಂದನ್ ನಂಬ‌ರ್ ಪತ್ತೆಯಾಗಿತ್ತು. ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ಮಾತುಕತೆ ನಡೆಸಿದ್ದ ಕಾರಣಕ್ಕಾಗಿ ಬೀರೂರು ಪೊಲೀಸರು ಚಂದನ್‌ನನ್ನು ಸಾಮಾನ್ಯ ವಿಚಾರಣೆಗೆಂದು ಠಾಣೆಗೆ ಕರೆಸಿದ್ದರು.

ವಿಚಾರಣೆ ಮುಗಿದ ಬಳಿಕ ಪೊಲೀಸರು ನಿನ್ನೆ ಸಂಜೆ ಆತನನ್ನು ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ, ಮನೆಗೆ ಮರಳಿದ ಚಂದನ್ ಸಂಜೆ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಡುಗಿ ಓಡಿ ಹೋಗಲು ಈತನೇ ಕಾರಣ ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಮಾತನಾಡಿಕೊಂಡಿದ್ದರಿಂದ ತೀವ್ರ ಮನನೊಂದು ಆತ ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಚಂದನ್ ತನ್ನ ತಾಯಿಗೆ ಮೊಬೈಲ್‌ನಲ್ಲಿ ಸಂದೇಶವೊಂದನ್ನು ರವಾನಿಸಿದ್ದಾನೆ ಎನ್ನಲಾಗಿದೆ.

ಪ್ರಸ್ತುತ ಚಂದನ್ ಆತ್ಮಹತ್ಯೆಗೆ ಕೇವಲ ಪೊಲೀಸರ ವಿಚಾರಣೆ ಮಾತ್ರ ಕಾರಣವೇ ಅಥವಾ ಜನರ ಆಪಾದನೆ ಹಾಗೂ ಬೇರೇನಾದರೂ ಹಿನ್ನೆಲೆ ಇದೆಯೇ ಎಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಸಂಪೂರ್ಣ ತನಿಖೆಯಿಂದಷ್ಟೇ ಚಂದನ್ ಸಾವಿಗೆ ನಿಖರವಾದ ಕಾರಣ ಏನೆಂಬುದು ಹೊರಬರಬೇಕಿದೆ.

A young man who was being questioned by the police committed suicide.

Share

Leave a comment

Leave a Reply

Your email address will not be published. Required fields are marked *

Don't Miss

ಮಾಂಸ ಮಾರಾಟ- ಮೂವರ ಬಂಧನ

ಎನ್.ಆ‌ರ್. ಪುರ: ಕಾಡಿನಲ್ಲಿ ಮೇಯುತ್ತಿದ್ದ ಜಾನುವಾರನ್ನು ಹಿಡಿದು ತಂದು ಎಸ್ಟೇಟ್‌ ನ ಕೂಲಿಲೈನ್ ಬಳಿ ಬರ್ಬರವಾಗಿ ಕಡಿದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು...

ನಕಲಿ ಬೀಗದ ಕೈ ಬಳಸಿ ಮನೆಯಲ್ಲಿದ್ದ ನಗ-ನಗದು ಕಳವು

ಚಿಕ್ಕಮಗಳೂರು: ಮನೆಯ ಯಜಮಾನರು ಹಬ್ಬದ ಸಂಭ್ರಮಕ್ಕೆಂದು ಊರಿಗೆ ತೆರಳಿದ್ದ ಸಮಯವನ್ನೇ ಹೊಂಚು ಹಾಕಿ ಕಾದು, ನಕಲಿ ಬೀಗದ ಕೈ ಮೂಲಕ ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ...

Related Articles

ಬರಗಾಲ ಪರಿಹಾರಕ್ಕೆ ಆಗ್ರಹಿಸಿ ಸೆ.28ರಂದು ರೈತ ಸಂಘದ ಪ್ರತಿಭಟನಾ ಮೆರವಣಿಗೆ

ಚಿಕ್ಕಮಗಳೂರು: ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ...

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ,...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ...

ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳ ಕಳ್ಳತನ

ಚಿಕ್ಕಮಗಳೂರು: ಮನೆಗೆ ಬೀಗ ಹಾಕಿ ಮಾಲೀಕರು ದೂರದ ಊರಿಗೆ ತೆರಳಿದ್ದನ್ನೇ ಹೊಂಚು ಹಾಕಿದ ಖದೀಮರು, ಹಿಂಬಾಗಿಲು...