Home namma chikmagalur chikamagalur ತಂತಿ ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಹುಲಿ
chikamagalurCrime NewsHomeLatest Newsnamma chikmagalur

ತಂತಿ ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಹುಲಿ

Share
Share

ಚಿಕ್ಕಮಗಳೂರು: ಮುತ್ತೋಡಿ ವಲಯದ ಏಳುನೂರುಖಾನ್ ತೋಟದ ಬಳಿ ತಂತಿ ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ ಹುಲಿಯೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ಹುಲಿಯ ಹೊಟ್ಟೆಯ ಭಾಗಕ್ಕೆ ತಂತಿ ಉರುಳು ಸುತ್ತಿಕೊಂಡಿರುವುದು ಸ್ವಯಂಚಾಲಿತ ಕ್ಯಾಮೆರಾ ಟ್ರಾಪ್‌ನಲ್ಲಿ ಸೆರೆಯಾಗಿದ್ದು, ಉರುಳು ಬಿಗಿಯಾಗಿ ಪ್ರಾಣಿಯ ಜೀವಕ್ಕೆ ಭಾರೀ ಅಪಾಯ ಎದುರಾಗಿದೆ. ಕಡವೆ ಮತ್ತು ಜಿಂಕೆಯನ್ನು ಬೇಟೆಯಾಡಿದ ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಿ ನಿಗಾ ಇರಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಕಳೆದ ಮೂರು ದಿನಗಳಿಂದ ಹುಲಿ ಪತ್ತೆಗಾಗಿ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ತೋಟದ ಕಾರ್ಮಿಕರು ಹಾಗೂ ಸ್ಥಳೀಯರಿಗೆ ಕೆಲಸಕ್ಕೆ ತೆರಳದಂತೆ ಸೂಚನೆ ನೀಡಲಾಗಿದ್ದು, ಪಂಡರವಳ್ಳಿ ಮತ್ತು ಕೊಳಗಾವೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಈ ಘಟನೆಯು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವನ್ಯಜೀವಿಗಳಿಗೆ ಉರುಳು ಹಾಕಿದ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಇದುವರೆಗೆ ಯಾವುದೇ ಅಧಿಕೃತ ಪ್ರಕರಣ ದಾಖಲಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಕಳ್ಳಬೇಟೆಯನ್ನು ತಡೆಯುವಲ್ಲಿ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ನಿಖರವಾಗಿ ಯಾವ ಕಾಫಿ ಎಸ್ಟೇಟ್‌ನಲ್ಲಿ ಹುಲಿಗೆ ಉರುಳು ಬಿದ್ದಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಗಾಯಗೊಂಡಿರುವ ಹುಲಿಯನ್ನು ಕೂಡಲೇ ಪತ್ತೆ ಹಚ್ಚಿ ರಕ್ಷಿಸುವಂತೆ ಹಾಗೂ ಕಳ್ಳಬೇಟೆಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ತೀವ್ರ ಆಗ್ರಹ ಕೇಳಿಬರುತ್ತಿದೆ.

Tiger seriously injured after getting caught in a wire mesh net

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯಕೀಯ ಕಾಲೇಜ್ ನಲ್ಲಿ ಲೂಟಿ ! ಲೂಟಿ !-ನೂರಾರು ಕೋಟಿ ನುಂಗಿರುವ ಖದೀಮರು?

ಚಿಕ್ಕಮಗಳೂರು: ನೂತನವಾಗಿ ನಿರ್ಮಾಣ ವಾಗಿರುವ ವೈದ್ಯಕೀಯ ಕಾಲೇಜ್ ಕಟ್ಟಡದಲ್ಲಿ ಕೋಟಿ, ಕೋಟಿರೂ ನುಂಗಿರುವ ಖದೀಮರು. ಟೆಂಡರ್ ಲೋಪ ದೋಷಗಳ ಪ್ರಕಾರ ನೂರಾರು ಕೋಟಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಟೆಂಡರ್ ಅವಧಿ 30...

ವಿದ್ಯಾರ್ಥಿ ಹೋರಾಟವನ್ನು ಬೆಂಬಲಿಸಿ ಸಮಾನ ಮನಸ್ಕರ ಪ್ರತಿಭಟನೆ

ಚಿಕ್ಕಮಗಳೂರು : ನೀಟ್ ಪದೆಶ್ನೆ ಪತ್ರಿಕೆ ಸೋರಿಕೆ ತಡೆಯುವಲ್ಲಿ ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ವಿಧ್ಯಾರ್ಥಿ ಹೋರಾಟವನ್ನು ಬೆಂಬಲಿಸಿ ನಗರದ ಆಜಾದ್ ವೃತ್ತದಲ್ಲಿಂದು ಸಮಾನ ಮನಸ್ಕರು ಹಾಗೂ ಪ್ರಗತಿಪರ...

Related Articles

ಕಡೂರು ತಾಲ್ಲೂಕು ಬರಪೀಡಿತ ತಾಲ್ಲೂಕು ಘೋಷಣೆಗೆ ವೈ.ಎಸ್.ವಿ.ದತ್ತ ಒತ್ತಾಯ

ಚಿಕ್ಕಮಗಳೂರು: ತೀವ್ರ ಬರಗಾಲಕ್ಕೆ ತುತ್ತಾಗಿರುವ ಕಡೂರು ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಬೇಕು. ತುರ್ತು...

ಸೊಪ್ಪು ಕಡಿಯಲು ಮರ ಹತ್ತಿದ್ದ ವ್ಯಕ್ತಿ ಕೆಳಗೆ ಬಿದ್ದು ಸಾವು

ಎನ್.ಆ‌ರ್. ಪುರ: ಸೊಪ್ಪು ಕಡಿಯಲು ಮರ ಹತ್ತಿದ್ದ ವೇಳೆ ಒಣಗಿದ ಕೊಂಬೆ ಮುರಿದು ಕೆಳಗೆ ಬಿದ್ದು...

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...

ರೂಬೆನ್ ಮೊಸಸ್ ಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ 

ಚಿಕ್ಕಮಗಳೂರು: ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ರೂಬೆನ್ ಮೊಸಸ್ ರವರಿಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ ದೊರೆತಿದೆ....