Home namma chikmagalur chikamagalur ರಾಜ್ಯ ಸರ್ಕಾರ ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟ
chikamagalurHomeLatest Newsnamma chikmagalur

ರಾಜ್ಯ ಸರ್ಕಾರ ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟ

Share
Share

ಕೊಪ್ಪ: ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ವಿಧವಾ ವೇತನ ಪಡೆಯಲು ರಾಜ್ಯ ಸರ್ಕಾತ ಗರಿ? ೩೨ ಸಾವಿರ ರೂ. ಆದಾಯಮಿತಿ ನಿಗದಿಪಡಿಸಿರುವುದನ್ನು ಖಂಡಿಸಿ ಶೃಂಗೇರಿ ಕ್ಷೇತ್ರ ಜೆಡಿಎಸ್ ಸಮಿತಿಯಿಂದ ಪಟ್ಟಣದ ಜೆಡಿಎಸ್ ಕಚೇರಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತಹಸೀಲ್ದಾರ್ ಲಿಖಿತಾ ಮೋಹನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಜೆಡಿಎಸ್ ಮುಖಂಡರು, ಕೂಡಲೇ ರಾಜ್ಯ ಸರ್ಕಾರ ಅವೈಜ್ಞಾನಿಕ ಹಾಗೂ ಬಡವರ ವಿರೋಧಿ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್. ಶೆಟ್ಟಿ, ರಾಜ್ಯ ಸರ್ಕಾರ ಆರ್ಥಿಕ ದುಸ್ಥಿತಿಗೆ ತಲುಪಿದ್ದು, ಆಡಳಿತ ನಡೆಸಲು ಸಾಧ್ಯವಾಗದ ಹಂತ ತಲುಪಿದೆ. ಇದೇ ಕಾರಣದಿಂದಾಗಿ ಇಲ್ಲಸಲ್ಲದ ?ರತ್ತುಗಳನ್ನು ಹಾಕಿ ಬಡವರಿಗೆ ನೀಡುತ್ತಿದ್ದ ಪಿಂಚಣಿ ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಂಡನನ್ನು ಕಳೆದುಕೊಂಡ ಮಹಿಳೆಯರು, ಅಂಗವಿಕಲರು, ವಯಸ್ಸಾದವರು ಅನಾಥರಾಗಬಾರದು ಎಂಬ ಕಾರಣಕ್ಕೆ ಮಾಸಿಕ ಪಿಂಚಣಿ ನೀಡಿ ಅವರಿಗೆ ಆರ್ಥಿಕ ಬೆಂಬಲ ನೀಡುವ ಕೆಲಸವನ್ನು ಈ ಹಿಂದಿನ ಎಲ್ಲ ಸರ್ಕಾರಗಳು ಮಾಡುತ್ತಾ ಬಂದಿವೆ. ಆದರೆ ಇಂದಿನ ರಾಜ್ಯ ಸರ್ಕಾರ ಸುಮಾರು ೨.೯೭ ಲಕ್ಷ ಪಿಂಚಣಿದಾರರಿಗೆ ನೈಜತೆ ಪರಿಶೀಲನೆ ನೆಪದಲ್ಲಿ ನೋಟೀಸ್ ನೀಡಿದೆ. ಇವರು ನೋಟೀಸ್ ನಲ್ಲಿ ಉಲ್ಲೇಖಿಸಿರುವ ದಾಖಲೆಗಳನ್ನು ಪಿಂಚಣಿದಾರರು ನೀಡಲು ಸಾಧ್ಯವಿಲ್ಲದಂತಾಗಿದೆ. ಈ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವವರ ಹಕ್ಕುಗಳನ್ನು ಕಿತ್ತುಕೊಳ್ಳುವ ಜೊತೆಗೆ ಅವರ ಬದುಕಿಗೆ ಆಸರೆಯಾದ ಪಿಂಚಣಿಯನ್ನೇ ನಿಲ್ಲಿಸುವ ಹುನ್ನಾರ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ರಾಜ್ಯದಲ್ಲಿರುವುದು ಲೇಔಟ್ ನಿರ್ಮಾಣದ ಸರ್ಕಾರ ಹಾಗೂ ಭ್ರ?ಚಾರದ ಸರ್ಕಾರ. ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿಯೇ ಬಡವರ ಹಣವನ್ನು ಕಿತ್ತುಕೊಳ್ಳುವ ಕೆಲಸವನ್ನು ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ನೀಡಿರುವ ನೋಟಿಸ್ ಪ್ರಕಾರ ಮಾಸಿಕ ೨೬೦೦ ರೂ. ಕುಟುಂಬದ ಆದಾಯ ಇರುವವರಿಗೆ ಮಾತ್ರ ವಿವಿಧ ಯೋಜನೆಗಳಲ್ಲಿ ಮಾಸಿಕ ಪಿಂಚಣಿ ಸಿಗುತ್ತದೆ. ಕೂಲಿ ಮಾಡುವವರು ಇದಕ್ಕಿಂತ ಹೆಚ್ಚು ದುಡಿಯುತ್ತಾರೆ. ಸರ್ಕಾರ ಯಾವ ಮಾನದಂಡದ ಆಧಾರದ ಮೇಲೆ ಈ ಮಿತಿ ನಿಗದಿಪಡಿಸಿದೆ ಎಂಬುದನ್ನು ಸ್ಪ?ಪಡಿಸಬೇಕು. ಇದಲ್ಲದೆ ವಯಸ್ಸಿನ ಬಗ್ಗೆ ದಾಖಲೆ, ಜಮೀನಿನ ಪಟ್ಟ ಹೀಗೆ ವಿವಿಧ ದಾಖಲೆ ಕೇಳುವ ಮೂಲಕ ಕಚೇರಿಗಳಿಗೆ ಜನ ಅಲೆಯುವಂತೆ ಮಾಡಿದ್ದಾರೆ ಎಂದು ದೂರಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಶ್ರೀಮಂತರ ಪರವಾಗಿದೆ. ಆದರೆ ಬಡವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಸಂಪೂರ್ಣವಾಗಿ ದಿವಾಳಿಯಾಗಿರುವ ಸರ್ಕಾರದ ಬಳಿ ದುಡ್ಡೇ ಇಲ್ಲ. ಹೀಗಾಗಿ ಗಂಗಾ ಕಲ್ಯಾಣ ಯೋಜನೆಯನ್ನೇ ನಿಲ್ಲಿಸಿದ್ದಾರೆ. ಜೊತೆಗೆ ರಸ್ತೆಗಳ ಅಭಿವೃದ್ಧಿಯೂ ಆಗುತ್ತಿಲ್ಲ. ಬಡವರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದು ಹೇಳಿದರು.

ಜೆಡಿಎಸ್ ಕ್ಷೇತ್ರ ಸಂಚಾಲಕ ಕಳಸಪ್ಪ ಮಾತನಾಡಿ, ಬಿಪಿಎಲ್ ಕಾರ್ಡ್‌ಗಳನ್ನೇ ಮಾಸಿಕ ಪಿಂಚಣಿ ಯೋಜನೆಗಳಿಗೂ ಮಾನದಂಡವಾಗಿ ಪರಿಗಣಿಸಬೇಕು. ಅದನ್ನು ಬಿಟ್ಟು ೩೨ ಸಾವಿರ ರೂ. ಆದಾಯದ ಮಿತಿ ನಿಗದಿಪಡಿಸಿರುವುದು ಸರಿಯಲ್ಲ. ಈ ಮೂಲಕ ಬಡ ಫಲಾನುಭವಿಗಳ ಜೊತೆಗೆ ಅಧಿಕಾರಿಗಳನ್ನು ಸಂಕ?ಕ್ಕೆ ಸಿಲುಕಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ಜೆಡಿಎಸ್ ಕ್ಷೇತ್ರದ ಅಧ್ಯಕ್ಷ ದಿವಾಕರ ಭಟ್ ಮಾತನಾಡಿ, ನೈಜತೆ ಪರಿಶೀಲನೆ ಹೆಸರಿನಲ್ಲಿ ಕಳೆದ ಮೂರು ತಿಂಗಳಿನಿಂದ ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನಗಳನ್ನು ನಿಲ್ಲಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸಕ್ಕೆ ಹೋದರು ಪ್ರತಿದಿನ ಕನಿ? ೩೫೨ ರೂ. ಕೂಲಿ ಸಿಗುತ್ತದೆ. ವಾರ್ಷಿಕ ಕನಿ? ನೂರು ದಿನ ಕೆಲಸ ನೀಡಲಾಗುತ್ತದೆ. ಇದೆಲ್ಲದರ ಕನಿ? ಜ್ಞಾನ ಇಲ್ಲದ ಅಧಿಕಾರಿಗಳು ಎಸಿ ಕಚೇರಿಯಲ್ಲಿ ಕುಳಿತು ಮಾಸಿಕ ಪಿಂಚಣಿಗೆ ಕುಟುಂಬದ ವಾರ್ಷಿಕ ಆದಾಯ ಗರಿ? ೩೨ ಸಾವಿರ ರೂ. ಇರಬೇಕು ಎಂದು ಮಿತಿ ನಿಗದಿಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಭ್ರ?ಚಾರದ ಕೂಪಕ್ಕೆ ಹೋಗುತ್ತಿದೆ. ಗೃಹ ಮಂತ್ರಿಗಳು ನಿದ್ರೆಯಲ್ಲಿಯೂ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಮೊದಲು ಗೃಹ ಮಂತ್ರಿಗಳು ಮಾಡಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಕ್ಷೇತ್ರ ಉಪಾಧ್ಯಕ್ಷ ವಾಸಪ್ಪ, ತಾಲೂಕು ಅಧ್ಯಕ್ಷ ರಾಮಸ್ವಾಮಿ, ಪ್ರಮುಖರಾದ ಶಾಂತಕುಮಾರ್ ಜೈನ್, ವಿಶ್ವ, ಮಂಜುನಾಥ್, ಅನಿಲ್ ಮತ್ತು ಇತರರಿದ್ದರು.

The state government is messing with the lives of the common man.

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮೂರು ತಿಂಗಳಿಂದ ಪಿಂಚಣಿ ಹಣ ಸ್ಥಗಿತ

ಚಿಕ್ಕಮಗಳೂರು: ಸಾಮಾಜಿಕ ಭದ್ರತಾ ಯೋಜನೆಗಳಡಿ ವೃದ್ಧಾಪ್ಯ, ವಿಧವಾ ಸೇರಿದಂತೆ ವಿವಿಧ ಮಾಸಿಕ ಪಿಂಚಣಿಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ “ತಿಳುವಳಿಕೆ ಪತ್ರ” ನೀಡುವ ನೆಪದಲ್ಲಿ ಕಳೆದ ಸುಮಾರು ಮೂರು ತಿಂಗಳಿಂದ ಪಿಂಚಣಿ ಹಣ ತಡೆಹಿಡಿಯಲಾಗಿದೆ...

ಕಾಡುಕೋಣ ದಾಳಿಗೆ ಕಾರ್ಮಿಕ ಬಲಿ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಮತ್ತೆ ಜೀವ ಬಲಿ ಪಡೆದಿದೆ. ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ದೋಣಿಹಡ್ಲು ಗ್ರಾಮದಲ್ಲಿ ಕಾಡುಕೋಣ ದಾಳಿಗೆ 45 ವರ್ಷದ ಮಂಜುನಾಥ್ ಮೃತಪಟ್ಟಿದ್ದಾರೆ. ಮಂಜುನಾಥ್...

Related Articles

ಯಗಟಿ ಸಮೀಪದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಬಲಿ

ಚಿಕ್ಕಮಗಳೂರು: ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು...

ಸಿ.ಟಿ.ರವಿಯನ್ನು ಇನ್ನೆರಡು ದಿನದಲ್ಲಿ ಬಂಧಿಸದಿದ್ದರೆ ಜಿಲ್ಲಾ ಬಂದ್‌

ಮೂಡಿಗೆರೆ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಸಮರ್ಥಿಸುವ ಭರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು...

ಸಿ.ಟಿ.ರವಿಯಿಂದ ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸ

ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮುಲ್ಲಾನ ಎದೆ ಸೀಳಿದರೆ ಮೂರಕ್ಷರ ಇಲ್ಲ...

ಎಲ್ಲಾ ಧರ್ಮದವರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಎಲ್ಲಾ ಧರ್ಮದ ಜನರು ಪ್ರೀತಿ ಸ್ನೇಹದಿಂದ ಬದುಕುತ್ತಿರುವ ಇಂತಹ ಪರಂಪರೆಯನ್ನು ಗೌರವಿಸಬೇಕಾಗಿರುವುದು...