Home namma chikmagalur chikamagalur ಲಕ್ಷ, ಲಕ್ಷ, ಅಲಕ್ಷ್ಯ ! ಹಣಕಾಸಿನ ವ್ಯವಹಾರ ಕುದುರುವುದಿಲ್ಲವೇ ?
chikamagalurHomeLatest Newsnamma chikmagalur

ಲಕ್ಷ, ಲಕ್ಷ, ಅಲಕ್ಷ್ಯ ! ಹಣಕಾಸಿನ ವ್ಯವಹಾರ ಕುದುರುವುದಿಲ್ಲವೇ ?

Share
Share

ಸುಖರಾಯಪಟ್ಟಣ:ಜನಪ್ರತಿನಿಧಿಗಳು,ಅಧಿಕಾರಿಗಳು, ಹೋರಾಟಗಾರರು ಲಕ್ಷ, ಲಕ್ಷ ಅಲಕ್ಷ್ಯ ಮಾಡುತ್ತಿರುವುದೇಕೆ? ಯಾರಾದರೂ ಲಕ್ಷ, ಲಕ್ಷ ನಿರ್ಲಕ್ಷ್ಯ ಮಾಡಲು ಸಾಧ್ಯವೇ? ಹೌದು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಇಲ್ಲಿನ ರೈತರ ಕೊರಗು.

ಲಕ್ಷ ಎಂದ ತಕ್ಷಣ ಜೊಲ್ಲು ಸುರಿಸುವ ಗಿರಾಕಿಗಳು ಈ ಬಗ್ಗೆ ಅಸಡ್ಡೆಯ ಮಾತುಗಳನ್ನು ಹೇಳುತ್ತಿರುವುದು ಏಕೆ? ಇದು ಲಕ್ಷ ಲಕ್ಷ ವ್ಯವಹಾರದ ಕತೆಯಲ್ಲಾ,ಅಂದರೆ ಸಖರಾಯಪಟ್ಟಣದ ಬಳಿ ಇರುವ ಲಕ್ಕ ಸಾಗರ ಕೆರೆಯ ಕತೆ ಇದು. ಹಾಯುವಳಿ ಕೆರೆಯಲ್ಲ ನಿಜ ಆದರೆ ಈ ಕೆರೆ ತುಂಬಿಸುವುದರಿಂದ ಕೆರೆಯ ಕೆಳಭಾಗದ ಹಳ್ಳಿಗಳಲ್ಲಿ ಅಂತರಜಲ ವೃದ್ದಿಯಾಗಿ ಕುಡಿಯುವ ನೀರು ಹಾಗು ಕೊಳವೆ ಬಾವಿಗಳು ತುಂಬುತ್ತವೆ ಎಂಬ ಸಾಮಾನ್ಯ ಜ್ಞಾನ ನಮ್ಮ ಜನಪ್ರತಿನಿಧಿಗಳಿಗಿಲ್ಲದಿರುವುದು ಈ ಭಾಗದ ರೖತರ ದೌರ್ಬಾಗ್ಯ.

ಈ ಕೆರೆ ತುಂಬಿಸಿದರೆ ಜನರಿಗೆ, ರೈತರಿಗೆ, ಪ್ರಾಣಿಗಳಿಗೆ ಉಪಯೋಗವಾಗುತ್ತದೆ. ಅದರೆ ನಮಗೇನು ಉಪಯೋಗ ಎಂದು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಈ ಭಾಗದ ಜನ ದೂರುತ್ತಿದ್ದಾರೆ.
ಕಡೂರು ತಾಲೂಕಿನ ಸಖರಾಯ ಪಟ್ಟಣದ ಹಸ್ತಿನಾಪುರದ ಸರ್ವೇ ನಂಬರ್ 6 ರಲ್ಲಿ 40 ಎಕರೆ ಪ್ರದೇಶದಲ್ಲಿ ಹಳೆಯ ಕೆರೆಯಿದೆ ಈ ಜಾಗವನ್ನು ಅರಣ್ಯ ಇಲಾಖೆಯವರು ಸೇರಿದಂತೆ ಒತ್ತುವರಿ ಮಾಡಲಾಗಿದೆ ಎಂಬ ದೂರಿದೆ ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಹಲವು ಸಭೆ ನಡೆಸಿ ಒತ್ತುವರಿ ಜಾಗ ತೆರವುಗೊಳಿಸಲು ಒತ್ತಾಯ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಜಾಗ ತೆರವು ಮಾಡಿ ಕೊಡಲು ಮೌಖಿಕವಾಗಿ ಹೇಳಿ ಸರ್ವೇ ಮಾಡಿಸಲು ಸೂಚನೆ ಸಹ ಕೊಟ್ಟಿದ್ದಾರೆ.ಎರಡು ಬಾರಿ ಸ್ಥಳಕ್ಕೆ ಹೋದ ಸರ್ವೇ ಇಲಾಖೆಯವರು ಇಲ್ಲ,ಸಲ್ಲದ ಕಾರಣಗಳನ್ನು ಹೇಳಿ ಪರಾರಿಯಾಗಿದ್ದಾರೆ.ಇದರಿಂದ ನಮಗೆ ಏನಾದರೂ ಸಿಗುತ್ತದೆ ಎಂದು ಹೋದ ಸರ್ವೇ ಇಲಾಖೆಯವರು ಕಾಸಿಲ್ಲ,ಕರಿಮಣಿ ಏಕೆ ಎಂದು ನಾಪತ್ತೆಯಾಗಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ.

ಶಾಸಕ ಹೆಚ್.ಡಿ.ತಮ್ಮಯ್ಯ ಬಳಿ ಹೇಳಲು ಹೋದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಡೆ ಕೈ ತೋರಿಸುತ್ತಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಕಛೇರಿಯಿಂದ ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೇ ಇಲಾಖೆಯವರು ಜಂಟಿ ಸರ್ವೇ ಮಾಡಲು ಮತ್ತೊಮ್ಮೆ ಸೂಚನೆ ಹೋಗಿರುವುದರಿಂದ ರೈತರ ಮುಖದಲ್ಲಿ ಗೆಲವಿನ ನಗೆ ಬಂದಿದೆ ಅದರೆ ಜನ ಪ್ರತಿನಿಧಿ ಶಾಸಕ ತಮ್ಮಯ್ಯ ಇನ್ನೊಬ್ಬರ ಕಡೆ ಬೆರಳು ತೋರಿಸುವ ಬದಲು ನಮ್ಮ ರೈತರಿಗೆ ಅನುಕೂಲ ಕಲ್ಪಿಸಿದರೆ ಮಾತ್ರ ಸಾಧ್ಯ ಲಕ್ಕ ಸಾಗರ ಕೆರೆ ಇತ್ತು ಎಂಬ ಹೆಸರು ಹೇಳ ಬಹುದು .

Financial matters are not smooth.

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...