Home namma chikmagalur chikamagalur ಸಿದ್ದರಾಮಯ್ಯ ಪರವಾಗಿ ಅಹಿಂದ ಸಂಘಟನೆ ರಾಜ್ಯದಾದ್ಯಂತ ಹೋರಾಟ
chikamagalurHomeLatest Newsnamma chikmagalur

ಸಿದ್ದರಾಮಯ್ಯ ಪರವಾಗಿ ಅಹಿಂದ ಸಂಘಟನೆ ರಾಜ್ಯದಾದ್ಯಂತ ಹೋರಾಟ

Share
Share

ಚಿಕ್ಕಮಗಳೂರು: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿರುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಜಿಲ್ಲಾ ಅಹಿಂದ ಘಟಕದ ಅಧ್ಯಕ್ಷ ತ್ರಿಭುವನ್ ಎತ್ತಿನಮನೆ ತಿಳಿಸಿದರು.

ಸಿದ್ದರಾಮಯ್ಯ ಅವರನ್ನು ಕೈಬಿಟ್ಟರೆ ರಾಜ್ಯದಲ್ಲಿ ಅಹಿಂದ ವರ್ಗದ ಜನರ ಮನಸ್ಸಿಗೆ ಅತೀವ ನೋವುಂಟಾಗಲಿದೆ. ಸಿದ್ದರಾಮಯ್ಯ ಅಹಿಂದ ವರ್ಗದ ಶಕ್ತಿ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಆಡಳಿತ ನಡೆಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.

ಸಿದ್ದರಾಮಯ್ಯ ಪರವಾಗಿ ಅಹಿಂದ ಸಂಘಟನೆ ರಾಜ್ಯದಾದ್ಯಂತ ಹೋರಾಟ ನಡೆಸಲಿದೆ. ಅಹಿಂದ ಸಮುದಾಯಗಳು ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಮರು ಚಿಂತನೆ ನಡೆಸಬೇಕಾಗುತ್ತದೆ ಎಂದರು.

ಅಹಿಂದ ಸಂಘಟನೆ ಮುಖಂಡ ದಂಟರಮಕ್ಕಿ ಪುಟ್ಟೇಗೌಡ ಮಾತನಾಡಿ, ಸಿದ್ದರಾಮಯ್ಯ ಅವರು ರಾಜ್ಯದ ಉದ್ದಗಲಕ್ಕೂ ಕೆಲಸ ಮಾಡುವ ಮೂಲಕ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಬೇರೆ ಪಕ್ಷದವರು ಅನುಸರಿಸಿದ್ದಾರೆ. ಯಾವುದೇ ಕಳಂಕವಿಲ್ಲದೆ ಪಾರದರ್ಶಕ ಆಡಳಿತ ನಡೆಸಿದವರು ಸಿದ್ದರಾಮಯ್ಯ ಎಂದು ಹೇಳಿದರು.

ಅಹಿಂದ ಸಂಘಟನೆ ಕಾರ್ಯಾಧ್ಯಕ್ಷ ರಸೂಲ್ ಖಾನ್, ಮುಖಂಡರಾದ ಪ್ರಕಾಶ್‌ ರೈ ಕೆಂಪನಹಳ್ಳಿ, ಸುರೇಶ್ ಹಿರೇಮಗಳೂರು, ಸಿ.ಸಿ. ಮಧು, ಜಗದೀಶ್ ಕೋಟೆ ಭಾಗವಹಿಸಿದ್ದರು.

Ahinda organization protests across the state in favor of Siddaramaiah

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...