Home namma chikmagalur chikamagalur ಗ್ರಾಮಲೆಕ್ಕಿಗನಿಗೆ ನಕಲಿ ಕೆ.ಜಿ. ಬೆಳ್ಳಿ ಗಟ್ಟಿ ನೀಡಿ ವಂಚನೆ
chikamagalurCrime NewsHomeLatest Newsnamma chikmagalur

ಗ್ರಾಮಲೆಕ್ಕಿಗನಿಗೆ ನಕಲಿ ಕೆ.ಜಿ. ಬೆಳ್ಳಿ ಗಟ್ಟಿ ನೀಡಿ ವಂಚನೆ

Share
Share

ಚಿಕ್ಕಮಗಳೂರು : ಗ್ರಾಮಲೆಕ್ಕಿಗರೊಬ್ಬರಿಗೆ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿ ಲಾಭಮಾಡಿಕೊಡುವ ಆಮಿಷವೊಡ್ಡಿದ ಬ್ಯಾಂಕ್ ಉದ್ಯೋಗಿಯೊಬ್ಬ ೪೫.೨೦ ಲಕ್ಷ ಹಣಕ್ಕೆ ೫೦ ನಕಲಿ ಕೆ.ಜಿ. ಬೆಳ್ಳಿ ಗಟ್ಟಿ ನೀಡಿ ವಂಚಿಸಿರುವ ಬಗ್ಗೆ ಇಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯಲ್ಲಿ ನಗರದ ಕಲ್ಯಾಣ ನಗರದ ನಿವಾಸಿ ವೈ.ಡಿ.ರಮೇಶ್ ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದಾಗ ವೈ.ಡಿ.ರಮೇಶ್‌ಗೆ ಖಾಸಗಿ ಬ್ಯಾಂಕ್ ಉದ್ಯೋಗಿ ಶಿವಪ್ರಸಾದ್ ಪರಿಚಯವಾಗಿತ್ತು.

೨೦೨೪ರಲ್ಲಿ ರಮೇಶ್ ಪತ್ನಿ ಪುಷ್ಪ ಅವರಿಗೆ ಸೇರಿದ ಕಡೂರಿನ ಮನೆ ಮಾರಾಟದ ಹಣವನ್ನು ಆ ಹಣವನ್ನು ಚಿನ್ನ, ಬೆಳ್ಳಿ ಹೂಡಿಕೆ ಮಾಡಿದರೆ ಭಾರೀ ಲಾಭ ಗಳಿಸಬಹುದೆಂದು ಶಿವ ಪ್ರಸಾದ್ ಬಣಕಲ್‌ನ ಬ್ರಾಮರಿ ಜ್ಯುಯಲ್ಲರ್ ವರ್ಕ್ಸ್‌ನ ನಾಗರಾಜ್ ಎಂಬ ಅಕ್ಕಸಾಲಿಗನ ಕರೆದುಕೊಂಡು ಬಂದು ಪರಿಚಯ ಮಾಡಿಸಿದ್ದ. ೫೦.೮೩೦ ಕೆಜಿ ಬೆಳ್ಳಿಗೆ, ೪೫.೨೩ ಲಕ್ಷ ರು. ಮಾತುಕತೆ ಮಾಡಿ ಬೆಳ್ಳಿಗಟ್ಟಿ ಕೊಡುವುದಾಗಿ ನಂಬಿಸಿದ್ದಾರೆ.
ಆ ಹಿನ್ನಲೆಯಲ್ಲಿ ಹಂತ ಹಂತವಾಗಿ ೪೫.೨೩ ಲಕ್ಷ ಹಣ ನೀಡಿ ಬೆಳ್ಳಿ ಗಟ್ಟಿಗಳನ್ನುರಮೇಶ್ ಪಡೆದಿದ್ದರು.

ಹಣದ ಅವಶ್ಯಕತೆ ಬಂದ ಹಿನ್ನೆಲೆಯಲ್ಲಿ ಮತ್ತು ಬೆಳ್ಳಿಯ ಬೆಲೆ ಹಚ್ಚಾದ ಹಿನ್ನೆಲೆಯಲ್ಲಿ ೨೦೨೫ರ ಮೇ ತಿಂಗಳಿನಲ್ಲಿಯೇ ೨೦ ಕೆ.ಜಿ. ಬೆಳ್ಳಿ ಮಾರಾಟಕ್ಕೆ ಹೋದಾಗ ೧೬ ಕೆ.ಜಿ. ಬೆಳ್ಳಿ ನಕಲಿ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಶಿವಪ್ರಸಾದ್ ಹಾಗೂ ನಾಗರಾಜ್ ವಿಚಾರಿಸಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, ಆ ಬೆಳ್ಳಿಯನ್ನು ನಾವೇ ಮಾರಾಟ ಮಾಡಿ, ನಿಮಗೆ ಹಣ ಕೊಡುತ್ತೇವೆ ಎಂದು ಹೇಳಿ ಕಳೆದ ಏಪ್ರಿಲ್ ೮ ರಂದು ಎಲ್ಲ ೫೦ ಕೆ.ಜಿ ಬೆಳ್ಳಿಯನ್ನು ತೆಗೆದುಕೊಂಡು ಹೋದವರು ಫೋನ್ ಕೂಡಾ ಎತ್ತದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Village accountant cheated by giving fake kg silver bars

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ

ಚಿಕ್ಕಮಗಳೂರು: ನಗರದಲ್ಲಿ ಶನಿವಾರ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚುಕಾಲ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ನಗರದ ಎಂ.ಜಿ ರಸ್ತೆ, ಬಸ್ ನಿಲ್ದಾಣ, ಎಐಟಿ ವೃತ್ತ, ಕಲ್ಯಾಣನಗರ, ಹಿರೇಮಗಳೂರು ಸೇರಿದಂತೆ ನಗರ ಹೊರವಲಯವಾದ...

ಜಾನಪದ ಕ್ಷೇತ್ರದಲ್ಲಿ ನಮ್ಮ ನಾಡು ಹಿಂದೆ ಬಿದ್ದಿಲ್ಲ

ಚಿಕ್ಕಮಗಳೂರು: ಜಾನಪದ ಕ್ಷೇತ್ರದಲ್ಲಿ ನಮ್ಮ ನಾಡು ಹಿಂದೆ ಬಿದ್ದಿಲ್ಲ. ಕಂಸಾಳೆ ನೃತ್ಯವು ಮೈಸೂರು ಭಾಗದಲ್ಲಿ ವಿಶೇಷ ಮನ್ನಣೆ ಪಡೆದುಕೊಂಡಿದೆ. ನಾಡಿನ ಅನೇಕ ಜಿಲ್ಲೆಗಳಲ್ಲಿ ದೈವರಾಧನೆ, ಬೂತರಾಧನೆ ಪೂಜಾ ಪದ್ಧತಿ ವಿಶೇಷತೆ ಹೊಂದಿದೆ...

Related Articles

ಸಮುದಾಯದ ಅಭಿವೃದ್ಧಿಗೆ ದುಡಿಯುವ ಸಂಕಲ್ಪ ಮಾಡಬೇಕು

ಚಿಕ್ಕಮಗಳೂರು: ಪರಿಶಿಷ್ಟಜಾತಿ,ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರು, ನಿವೃತ್ತ ಸರ್ಕಾರಿ ನೌಕರ ಸಂಘದವರು ಸಮುದಾಯದ ಅಭಿವೃದ್ಧಿಗೆ ದುಡಿಯುವ...

ಮೂಡಿಗೆರೆಯಲ್ಲಿ ರೈತರ ಬೃಹತ್ ರೈತ ಸಮಾವೇಶ ಕಾರ್ಯಕ್ರಮ

ಮೂಡಿಗೆರೆ: ರೈತರನ್ನು ವಿರೋಧ ಕಟ್ಟಿಕೊಂಡು, ರೈತ ವಿರೋಧ ಕಾನೂನು ತರುವ ಸರಕಾರಗಳು ಚರಿತ್ರೆಯಲ್ಲೇ ಉಳಿದಿಲ್ಲವೆಂದು ಹಿರಿಯ...

ವಿಶೇಷ ಪೊಲೀಸ್ ತನಿಖಾ ತಂಡದಿಂದ ಅಂತರ್ ಜಿಲ್ಲಾ ಸರಗಳ್ಳರ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನು ಭಯಭೀತರನ್ನಾಗಿಸಿದ್ದ ಅಂತರ್ ಜಿಲ್ಲಾ...

ಸರಣಿ ಕಳ್ಳತನ ಪ್ರಕರಣ – ನಾಲ್ವರು ಅಂತರ-ಗ್ರಾಮ ಕಳ್ಳರ ಬಂಧನ

ಚಿಕ್ಕಮಗಳೂರು : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ...