Home namma chikmagalur chikamagalur ಸಂಬಂಧಿಕರ ಮನೆಗೆ ಹೊರಟ ಯುವಕ ರಸ್ತೆ ಅಪಘಾತದಲ್ಲಿ ಸಾವು
chikamagalurHomeLatest Newsnamma chikmagalur

ಸಂಬಂಧಿಕರ ಮನೆಗೆ ಹೊರಟ ಯುವಕ ರಸ್ತೆ ಅಪಘಾತದಲ್ಲಿ ಸಾವು

Share
Share

ಶೃಂಗೇರಿ: ಪೊಲೀಸ್‌ ಠಾಣಾ ವ್ಯಾಪ್ತಿಯ ಸುಂಕದಮಕ್ಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಬೈಕ್ ಅಪಘಾತ ಸಂಭವಿಸಿ ಪ್ರದೀಪ್ (28) ಎಂಬುವರು ಮೃತಪಟ್ಟಿದ್ದಾರೆ.

ಪ್ರದೀಪ್ ಅವರು ತಮ್ಮ ಸ್ನೇಹಿತ ಮಹೇಶ್ ಎಂಬುವರ ಜೊತೆ ಬೈಕ್‌ನಲ್ಲಿ ಕಾರ್ಕಳಕ್ಕೆ ಸಂಬಂಧಿಕರ ಮನೆಗೆ ಹೊರಟಿದ್ದರು. ಮಹೇಶ್ ಬೈಕ್ ಚಲಾಯಿಸುತ್ತಿದ್ದು, ಪ್ರದೀಪ್ ಹಿಂಬದಿ ಕುಳಿತಿದ್ದರು. ಎದುರಿನಿಂದ ಬಂದ ಲಾರಿಗೆ ಸೈಡ್ ಕೊಡಲು ಹೋಗಿ, ಮಹೇಶ್ ಬೈಕನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ ಕಾರಣ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.

ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದು ರಕ್ತಗಾಯಗೊಂಡಿದ್ದ ಪ್ರದೀಪ್ ಅವರನ್ನು ಶೃಂಗೇರಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ. ಮೃತರ ತಾಯಿ ಶಾರದಾ ನೀಡಿದ ದೂರಿನನ್ವಯ ಬೈಕ್ ಚಾಲಕ ಮಹೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

A young man on his way to a relative’s house died in a road accident.

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ...

Related Articles

ಕೋಟ್ಯಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ಬಂಧನ

ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು...

ನಲಪಾಡ್ ಹೇಳಿಕೆ ಖಂಡಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಆಕ್ರೋಶ

ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ...

ಮಳಲೂರು ಏತ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ...

2ಬಿ ಮೀಸಲಾತಿ ಮರುಸ್ಥಾಪನೆಗೆ ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಚಿಕ್ಕಮಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು 2ಬಿ ಮೀಸಲಾತಿಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಕೂಡಲೇ...