Home namma chikmagalur chikamagalur ನಕಲಿ ಐಎಎಸ್ ಅಧಿಕಾರಿ ಮಿಥುನ್ ನಿಂದ ವಕೀಲರಿಗೆ ವಂಚನೆ
chikamagalurHomeLatest Newsnamma chikmagalur

ನಕಲಿ ಐಎಎಸ್ ಅಧಿಕಾರಿ ಮಿಥುನ್ ನಿಂದ ವಕೀಲರಿಗೆ ವಂಚನೆ

Share
Share

ಚಿಕ್ಕಮಗಳೂರು: ಕಾಫಿನಾಡಿನ ಮೆಡಿಕಲ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ನಕಲಿ ಐಎಎಸ್ ಅಧಿಕಾರಿ ಮಿಥುನ್ ವಂಚನೆಯ ಒಂದೊಂದೇ ಕರಾಳ ಮುಖಗಳು ಈಗ ಬಯಲಾಗುತ್ತಿವೆ. ಕೇವಲ ಉದ್ಯಮಿಗಳನ್ನಷ್ಟೇ ಅಲ್ಲದೆ, ಕಾನೂನು ಅರಿವಿರುವ ವಕೀಲರನ್ನೂ ಈತ ತನ್ನ ಮಾತುಗಳಿಂದ ಬುಟ್ಟಿಗೆ ಹಾಕಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ಹಾಗೂ ಹಿರಿಯ ವಕೀಲ ಸುನಿಲ್ ಕುಮಾರ್ ಅವರಿಗೆ ಐದು ತಿಂಗಳ ಹಿಂದೆ ಮೇಘನ ಎಂಬಾಕೆ ಪರಿಚಯವಾಗಿದ್ದರು. ಸಿವಿಲ್ ಪ್ರಕರಣವೊಂದರ ಸಂಬಂಧ ವಕೀಲರ ಕಚೇರಿಗೆ ಬಂದಿದ್ದ ಮೇಘನ, ತನ್ನ ಜೊತೆಯಲ್ಲಿ ಮಿಥುನ್ ಸಿ.ಆರ್. ಎಂಬಾತನನ್ನು ಕರೆತಂದಿದ್ದರು. ಈತ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾನೆ ಎಂದು ಸುಳ್ಳು ಹೇಳಿ ಪರಿಚಯಿಸಿದ್ದರು.

ತಾನು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಲು ಮಿಥುನ್ ಅತ್ಯಂತ ಚಾಣಾಕ್ಷತನ ಪ್ರದರ್ಶಿಸಿದ್ದ. ವಕೀಲರ ಮುಂದೆ ನಕಲಿ ಐಡಿ ಕಾರ್ಡ್‌ಗಳು, ಸುಳ್ಳು ಸ್ಯಾಲರಿ ಸರ್ಟಿಫಿಕೇಟ್‌ಗಳು ಹಾಗೂ ತರಬೇತಿಗೆ ಹಾಜರಾಗುವಂತೆ ಸರ್ಕಾರದಿಂದ ಬಂದಿರುವಂತೆ ಸೃಷ್ಟಿಸಲಾಗಿದ್ದ ನಕಲಿ ಪತ್ರಗಳನ್ನು ತೋರಿಸಿ ವಿಶ್ವಾಸ ಗಳಿಸಿದ್ದ.

ಇದನ್ನೇ ಬಂಡವಾಳ ಮಾಡಿಕೊಂಡು ಮನೆ ಕಟ್ಟುವ ನೆಪ ಹಾಗೂ ತುರ್ತು ಆರ್ಥಿಕ ಅಗತ್ಯಗಳ ಹೆಸರಿನಲ್ಲಿ ಮಿಥುನ್ ಮತ್ತು ಮೇಘನ ಜೋಡಿ ವಕೀಲ ಸುನಿಲ್ ಕುಮಾರ್ ಅವರಿಂದ ಹಂತ ಹಂತವಾಗಿ 3,35,000 ರೂಪಾಯಿ ಹಣ ಪಡೆದಿದ್ದರು.

ಅಷ್ಟೇ ಅಲ್ಲದೆ, ವಕೀಲರ ಮೂಲಕ ಅವರ ಸ್ನೇಹಿತರಿಂದಲೂ ಸುಮಾರು 65 ಸಾವಿರ ರೂಪಾಯಿಗಳನ್ನು ಕೊಡಿಸಿ ವಂಚಿಸಿದ್ದರು. ಕಳೆದ ತಿಂಗಳು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಥುನ್ ನಕಲಿ ಐಎಎಸ್ ಅಧಿಕಾರಿ ಎಂಬ ಕಾರಣಕ್ಕೆ ಸಿಕ್ಕಿಬಿದ್ದಾಗ ಆತನ ಅಸಲಿ ಬಣ್ಣ ಬಯಲಾಗಿದೆ.

ಸದ್ಯ ವಕೀಲರ ದೂರಿನ ಮೇರೆಗೆ ಮೇಘನ ಹಾಗೂ ಮಿಥುನ್ ಸಿ.ಆರ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Lawyers cheated by fake IAS officer Mithun Chakraborty

Share

Leave a comment

Leave a Reply

Your email address will not be published. Required fields are marked *

Don't Miss

ಜೆಜೆಎಂನಲ್ಲಿ ನಕಲಿ ಛಾಪಾ ಕಾಗದ ಬಳಸಿ ಸರ್ಕಾರಕ್ಕೆ ವಂಚನೆ

ಶೃಂಗೇರಿ:  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೆಜೆಎಂ (ಜಲ ಜೀವನ್ ಮಿಷನ್) ಹಾಗೂ ಟಾಸ್ಕ್ ಫೋರ್ಸ್ ಯೋಜನೆಯಡಿ ಬೋರ್‌ವೆಲ್ ಕಾಮಗಾರಿ ನಿರ್ವಹಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೊಂದಿಗೆ ಮಾಡಿಕೊಂಡಿದ್ದ...

ಅಕ್ರಮ ಮದ್ಯ ಮಾರಾಟ-ಐವರು ಆರೋಪಿ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ಬಿರುಗಾಳಿ ದಾಳಿ ನಡೆಸಿದ್ದು, ಮಹಿಳೆ ಸೇರಿ ಐವರು ಆರೋಪಿಗಳನ್ನು...

Related Articles

ವಿಶ್ವವಿದ್ಯಾಲಯ ವಿದ್ಯಾ ಶಾಲೆಯ ನವೀಕೃತ ಕಟ್ಟಡ ಲೋಕಾರ್ಪಣೆ

ಚಿಕ್ಕಮಗಳೂರು: 105 ವರ್ಷ ಹಳೆಯ ವಿಶ್ವವಿದ್ಯಾಲಯ ವಿದ್ಯಾ ಶಾಲೆಯ ನವೀಕೃತ ಕಟ್ಟಡ ಹಾಗೂ ಆಟದ ಮೈದಾನ...

ಎರಡು ದೇವಸ್ಥಾನಗಳ ಬೀಗ ಒಡೆದು ಚಿನ್ನಾಭರಣ ಕಳವು

ಚಿಕ್ಕಮಗಳೂರು: ಒಂದೇ ದಿನ ಎರಡು ದೇವಸ್ಥಾನಗಳ ಬೀಗ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿರುವ ಘಟನೆ...

ನಗರದಲ್ಲಿ ಗ್ಯಾಂಗ್ ವಾರ್ ಸ್ವಯಂಪ್ರೇರಿತ ಪ್ರಕರಣ ದಾಖಲು

ಚಿಕ್ಕಮಗಳೂರು: ನಗರದ ಐ.ಜಿ ರಸ್ತೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ಯುವಕರ ಗುಂಪೊಂದು ಭೀಕರವಾಗಿ ಬಡಿದಾಡಿಕೊಂಡಿರುವ...

ಸತ್ತಿಹಳ್ಳಿ ಗ್ರಾಮದಲ್ಲಿ ಪತಿಯಿಂದ ಪತ್ನಿಯ ಮೇಲೆ ಹಲ್ಲೆ

ಚಿಕ್ಕಮಗಳೂರು: ಕುಡಿತದ ದಾಸನಾಗಿ, ಹೆಂಡತಿಯ ನಡತೆಯ ಮೇಲೆ ಇಲ್ಲಸಲ್ಲದ ಅನುಮಾನ ಪಟ್ಟು ಸೌದೆ ಬಡಿಗೆ ಹಾಗೂ...