ತರೀಕೆರೆ: ರಮೇಶ ಲಿಂಗದಳ್ಳಿ ಜೊತೆಗೆ ಅಮೃತಾಪುರ ಇನ್ ಛಾರ್ಜ್ ಕರ್ತವ್ಯ ನಿರ್ವಾಣೆ ಮಾಡುವಾಗ ರೈತ ಕುಮಾರ್ ಎಂಬುವರಿಂದ ಲಂಚ ಪಡೆಯುತ್ತಿದಾಗ ಆರ್.ಐ.ರಮೇಶ್ ಮತ್ತು ಸಹಾಯಕ ಸಂತೋಷ ನಾಯ್ಕ ಲೋಕಾಯುಕ್ತಾ ಬಲೆಗೆ ಬಿದ್ದಿದ್ದಾರೆ.
ಕುಮಾರ್ ಜಮೀನಿಗೆ ಸಂಭಂದಿಸಿದ ಪೌತಿ ಖಾತೆ ಮಾಡಲು ಐವತ್ತು ಸಾವಿರಕ್ಕೂ ಹೆಚ್ಚು ಬೇಡಿಕೆ ಇಟ್ಟಿದ್ದು ಇಂದು ಸಂಜೆ 30,000 ರೂ ಲಂಚ ಪಡೆಯುವಾಗ ಚಿಕ್ಕಮಗಳೂರು ಲೋಕಾಯುಕ್ತಾರು ಆರ್.ಐ.ರಮೇಶ ಮತ್ತು ವಿ.ಐ ಸಂತೋಷ ನಾಯ್ಕ ಎಂಬುವನನ್ನು ಬಂಧಿಸಿದ್ದಾರೆ.
ಲೋಕಾಯುಕ್ತಾ ಡಿ.ವೈ.ಎಸ್.ಪಿ. ತಿರುಮಲೇಶ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಕಡೂರು ಮತ್ತು ತರೀಕೆರೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಮತ್ತು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬೀಳುತ್ತಿರುವುದು ನೋಡಿದರೆ ಇದೊಂದು ವ್ಯವಸ್ಥಿತ ಜಾಲ ಇರಬಹುದು ಎಂಬ ಅನುಮಾನ ವ್ಯಕ್ತವಾಗುತ್ತದೆ.
Lokayukta Bale Lingadalli R.I.
Leave a comment