Home namma chikmagalur chikamagalur ಸತ್ತಿಹಳ್ಳಿ ಗ್ರಾಮದಲ್ಲಿ ಪತಿಯಿಂದ ಪತ್ನಿಯ ಮೇಲೆ ಹಲ್ಲೆ
chikamagalurCrime NewsHomeLatest Newsnamma chikmagalur

ಸತ್ತಿಹಳ್ಳಿ ಗ್ರಾಮದಲ್ಲಿ ಪತಿಯಿಂದ ಪತ್ನಿಯ ಮೇಲೆ ಹಲ್ಲೆ

Share
Share

ಚಿಕ್ಕಮಗಳೂರು: ಕುಡಿತದ ದಾಸನಾಗಿ, ಹೆಂಡತಿಯ ನಡತೆಯ ಮೇಲೆ ಇಲ್ಲಸಲ್ಲದ ಅನುಮಾನ ಪಟ್ಟು ಸೌದೆ ಬಡಿಗೆ ಹಾಗೂ ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಪತ್ನಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸತ್ತಿಹಳ್ಳಿ ಗ್ರಾಮದ ನಿವಾಸಿ ಯೋಗೇಶ್ ಎಂಬಾತನೇ ಪತ್ನಿಯ ಮೇಲೆ ಪೈಶಾಚಿಕ ದೌರ್ಜನ್ಯ ಎಸಗಿದ ಗಂಡ. ಈತನಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಎರಡುವರೆ ವರ್ಷದ ಗಂಡು ಮಗುವಿದೆ. ಯೋಗೇಶನಿಗೆ ಪ್ರತಿದಿನ ವಿಪರೀತ ಮದ್ಯಪಾನ ಮಾಡುವ ಹವ್ಯಾಸವಿದ್ದು, ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಇದೇ ಕಾರಣಕ್ಕೆ ಪ್ರತಿದಿನ ಮನೆಯಲ್ಲಿ ಇಲ್ಲಸಲ್ಲದ ಗಲಾಟೆ ತೆಗೆದು ಪತ್ನಿ ವಾಗ್ಗೇವಿ ಅವರ ಮೇಲೆ ಅನುಮಾನಪಡುತ್ತಿದ್ದ ಎನ್ನಲಾಗಿದೆ.

ವಾಗ್ಗೇವಿ ಅವರು ರೇಷನ್ ಕಾರ್ಡ್ ಮಾಡಿಸಲು ಹೊರಗಡೆ ಹೋಗಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಯೋಗೇಶ್, ಮರುದಿನ ಬೆಳಗ್ಗೆ ವಾಗ್ಗೇವಿ ಅವರು ಮನೆಯ ಹೊರಗೆ ಕೆಲಸ ಮಾಡುತ್ತಿದ್ದಾಗ ವಿಪರೀತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ ಮರದ ಸೌದೆ ಬಡಿಗೆಯಿಂದ ಅವರ ಎಡ ತೋಳು, ಭುಜ, ಬಾಯಿ, ಬಲತೊಡೆ ಹಾಗೂ ಬೆನ್ನಿಗೆ ಮನಬಂದಂತೆ ಹೊಡೆದು ಗಾಯಗೊಳಿಸಿದ್ದಾನೆ.

ಕೈಗೆ ಸಿಕ್ಕ ವಸ್ತುಗಳನ್ನು ಅವರ ಮೇಲೆ ಬೀಸಿ ಹೊಡೆದ ಪರಿಣಾಮ ಅವರು ಕೆಳಗೆ ಬಿದ್ದಿದ್ದಾರೆ. ತಾಯಿ-ಮಗುವಿನ ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದು ಜಗಳ ಬಿಡಿಸಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ನಂತರ ನೊಂದ ಮಹಿಳೆ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರನ್ನು ಕರೆಯಿಸಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಗ್ರಾಮಸ್ಥರು ಗಂಡನಿಗೆ ಬುದ್ದಿ ಹೇಳುವುದಾಗಿ ಸಮಾಧಾನಪಡಿಸಿ ವಾಗ್ಗೇವಿ ಅವರನ್ನು ಮನೆಗೆ ಕಳಿಸಿದ್ದರು. ಆದರೆ ಅಷ್ಟರಲ್ಲೇ ಮನೆಗೆ ಬಂದ ಯೋಗೇಶ್, “ನನ್ನ ಮೇಲೆ ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗುತ್ತೀಯಾ?” ಎಂದು ಕೆರಳಿ ಕೆಂಡವಾಗಿ ವಾಗ್ಗೇವಿ ಅವರ ಎದೆಯ ಭಾಗ ಹಾಗೂ ಎಡಗಣ್ಣಿಗೆ ಬಲವಾಗಿ ಗುದ್ದಿ ಮತ್ತೆ ದೌರ್ಜನ್ಯ ಎಸಗಿದ್ದಾನೆ.

ಸದ್ಯ ಗಂಡನ ನಿರಂತರ ಕಿರುಕುಳ ಹಾಗೂ ಹಲ್ಲೆಯಿಂದ ಬೇಸತ್ತ ವಾಗ್ಗೇವಿ ಅವರು ಆಲ್ಲೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆ ನೀಡಿದ್ದು, ಪೊಲೀಸರು ಯೋಗೇಶ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Husband assaults wife in Sattihalli village

Share

Leave a comment

Leave a Reply

Your email address will not be published. Required fields are marked *

Don't Miss

ಜೆಜೆಎಂನಲ್ಲಿ ನಕಲಿ ಛಾಪಾ ಕಾಗದ ಬಳಸಿ ಸರ್ಕಾರಕ್ಕೆ ವಂಚನೆ

ಶೃಂಗೇರಿ:  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೆಜೆಎಂ (ಜಲ ಜೀವನ್ ಮಿಷನ್) ಹಾಗೂ ಟಾಸ್ಕ್ ಫೋರ್ಸ್ ಯೋಜನೆಯಡಿ ಬೋರ್‌ವೆಲ್ ಕಾಮಗಾರಿ ನಿರ್ವಹಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೊಂದಿಗೆ ಮಾಡಿಕೊಂಡಿದ್ದ...

ಅಕ್ರಮ ಮದ್ಯ ಮಾರಾಟ-ಐವರು ಆರೋಪಿ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ಬಿರುಗಾಳಿ ದಾಳಿ ನಡೆಸಿದ್ದು, ಮಹಿಳೆ ಸೇರಿ ಐವರು ಆರೋಪಿಗಳನ್ನು...

Related Articles

ವಿಶ್ವವಿದ್ಯಾಲಯ ವಿದ್ಯಾ ಶಾಲೆಯ ನವೀಕೃತ ಕಟ್ಟಡ ಲೋಕಾರ್ಪಣೆ

ಚಿಕ್ಕಮಗಳೂರು: 105 ವರ್ಷ ಹಳೆಯ ವಿಶ್ವವಿದ್ಯಾಲಯ ವಿದ್ಯಾ ಶಾಲೆಯ ನವೀಕೃತ ಕಟ್ಟಡ ಹಾಗೂ ಆಟದ ಮೈದಾನ...

ಎರಡು ದೇವಸ್ಥಾನಗಳ ಬೀಗ ಒಡೆದು ಚಿನ್ನಾಭರಣ ಕಳವು

ಚಿಕ್ಕಮಗಳೂರು: ಒಂದೇ ದಿನ ಎರಡು ದೇವಸ್ಥಾನಗಳ ಬೀಗ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿರುವ ಘಟನೆ...

ನಗರದಲ್ಲಿ ಗ್ಯಾಂಗ್ ವಾರ್ ಸ್ವಯಂಪ್ರೇರಿತ ಪ್ರಕರಣ ದಾಖಲು

ಚಿಕ್ಕಮಗಳೂರು: ನಗರದ ಐ.ಜಿ ರಸ್ತೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ಯುವಕರ ಗುಂಪೊಂದು ಭೀಕರವಾಗಿ ಬಡಿದಾಡಿಕೊಂಡಿರುವ...

ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ತರೀಕೆರೆ: ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾವಿಕೆರೆಯಲ್ಲಿ ನಂಬಿಕೆಗೆ ದ್ರೋಹ ಬಗೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ...