Home namma chikmagalur chikamagalur ರೂಮ್ ಬುಕ್ ಮಾಡಲು ಹೋದ ಯುವಕನಿಗೆ ಪಿಸ್ತೂಲ್ ನಿಂದ ಕೊಲೆಗೆ ಯತ್ನ
chikamagalurHomeLatest Newsnamma chikmagalur

ರೂಮ್ ಬುಕ್ ಮಾಡಲು ಹೋದ ಯುವಕನಿಗೆ ಪಿಸ್ತೂಲ್ ನಿಂದ ಕೊಲೆಗೆ ಯತ್ನ

Share
Share

ಚಿಕ್ಕಮಗಳೂರು: ಮದುವೆಗೆಂದು ರೂಮ್ ಬುಕ್ ಮಾಡಲು ಹೋದ ಯುವಕನಿಗೆ ಲಾಡ್ಜ್ ಮಾಲೀಕ ಜಾತಿ ನಿಂದನೆ ಮಾಡಿ, ಹಣೆಗೆ ಪಿಸ್ತೂಲ್ ಇಟ್ಟು ಕೊಲೆಗೆ ಯತ್ನಿಸಿರುವ ಘಟನೆ ನಗರದ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಂಡೆದಾಸರಹಳ್ಳಿಯ ಸಂದೀಪ್ ಎಂಬುವವರು ಇಂದಾವರ ಪ್ಯಾರಡೈಸ್ ಮಾಲೀಕ ಯತೀಶ್ ಎಂಬುವವರ ಬಳಿ ತನ್ನ ಸ್ನೇಹಿತನ ಮದುವೆಗಾಗಿ ರೂಮ್ ವಿಚಾರಿಸುವಾಗ ಏಕಾಏಕಿ ಅವಾಚ್ಯ ಪದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, “ರೂಮ್ ಬೇಕಾದರೆ 5 ಲಕ್ಷ ರೂಪಾಯಿ ಕೊಡು, ನಿಮ್ಮ ಜಾತಿಗೆ ಅಷ್ಟು ತಾಕತ್ ಇದೆಯಾ?” ಎಂದು ಅಹಂಕಾರದ ಮಾತುಗಳನ್ನಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೆಖಿಸಾಲಾಗಿದೆ.

ಘಟನೆ ಇಷ್ಟಕ್ಕೇ ನಿಲ್ಲದೆ, ಭಾನುವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಸಂದೀಪ್ ಅವರು ರಾಮನಹಳ್ಳಿಯ ಒಲಂಪಿಯಾ ಹೋಟೆಲ್ ಬಳಿ ಇದ್ದಾಗ ಮಾರುತಿ 800 ಕಾರಿನಲ್ಲಿ ಬಂದ ಯತೀಶ್, ಮತ್ತೆ ಜಗಳ ತೆಗೆದಿದ್ದಾನೆ. ಈ ವೇಳೆ ತನ್ನ ಬಳಿಯಿದ್ದ ಪಿಸ್ತೂಲ್ ತೆಗೆದು ಸಂದೀಪ್ ಅವರ ಹಣೆಗೆ ಗುರಿಯಿಟ್ಟು ಶೂಟ್ ಮಾಡಲು ಮುಂದಾಗಿದ್ದಾನೆ ಎಂದು ದೂರಲಾಗಿದೆ.

ತಕ್ಷಣ ಪಕ್ಕದಲ್ಲೇ ಇದ್ದ ಸಂದೀಪ್ ಸ್ನೇಹಿತ ಮಹೇಶ್ ಅವರು ಸಮಯಪ್ರಜ್ಞೆ ಮೆರೆದು ಸಂದೀಪ್ ಅವರನ್ನು ಪಕ್ಕಕ್ಕೆ ಎಳೆದು ದೂಡಿದ್ದರಿಂದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯ ತಪ್ಪಿದೆ. ಸದ್ಯ ಘಟನೆಯಿಂದ ಗಾಬರಿಗೊಂಡಿರುವ ಸಂದೀಪ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಯತೀಶ್ ವಿರುದ್ಧ ಅಟ್ರಾಸಿಟಿ (ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ) ಹಾಗೂ ಆಯುಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Attempted murder with pistol on a young man who went to book a room

Share

Leave a comment

Leave a Reply

Your email address will not be published. Required fields are marked *

Don't Miss

ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮಾಚರಣೆ

ಚಿಕ್ಕಮಗಳೂರು:  ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಹಾಗೂ ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವಿಜಯ ಪತಾಕೆ ಹಾರಿಸಿದ ಹಿನ್ನೆಲೆಯಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಗರದ ಹನುಮಂತಪ್ಪ...

ಮರಗಸಿ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಬಲಿ

ಚಿಕ್ಕಮಗಳೂರು: ಸಿಲ್ವರ್ ಮರ ಮರಗಸಿ ಮಾಡುವ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರೊಬ್ಬರು ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಕರುಣಾಜನಕ ಘಟನೆ ಚಿಕ್ಕಮಗಳೂರು ತಾಲೂಕಿನ ಕೆರೆಮನೆ ಎಸ್ಟೇಟ್‌ನಲ್ಲಿ ಸಂಭವಿಸಿದೆ. ಮೃತ ದುರ್ದೈವಿಯನ್ನು ತಮಿಳುನಾಡು...

Related Articles

ಮಣ್ಣುಮುಕ್ಕ ಹಾವು ಮಾರಾಟಕ್ಕೆ ಯತ್ನ: ಐವರು ಬಂಧನ

ಚಿಕ್ಕಮಗಳೂರು: ಅಪರೂಪದ ವನ್ಯಜೀವಿಯಾದ ಮಣ್ಣುಮುಕ್ಕ ಹಾವು (Red Sand Boa) ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು...

ಚಾರ್ಮಾಡಿ ಘಾಟ್‌ನ 10ನೇ ತಿರುವಿನಲ್ಲಿ ಒಂಟಿ ಸಲಗ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ನ 10ನೇ ತಿರುವಿನಲ್ಲಿ ಒಂಟಿ ಸಲಗ ರಸ್ತೆ ಮಧ್ಯೆ ನಿಂತ ಪರಿಣಾಮ ವಾಹನ ಸವಾರರು...

ಭಾರತ ಸಾರ್ವಭೌಮ ಪ್ರಜಾ ಪ್ರಭುತ್ವ ರಾಷ್ಟ್ರ

ಚಿಕ್ಕಮಗಳೂರು:  ಭಾರತ ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ಇಲ್ಲಿ ಸರ್ವರಿಗೂ ಸಮಪಾಲು,...

ಕೊಲೆ ಆರೋಪಿ ಗಲ್ಲಿಗೇರಿಸಲು ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ಕೊಡಗು ಜಿಲ್ಲೆಯ ಪತ್ರಿಕೋದ್ಯಮದ ವಿದ್ಯಾರ್ಥಿನಿ ರಂಜಿತಾ ಅವರನ್ನು ಅತ್ಯಾಚಾರ ಮಾಡಿ ಕೊಲೆಗೈದಿರುವ ಆರೋಪಿಗಳನ್ನು ಗಲ್ಲಿಗೇರಿಸುವಂತೆ...