Home namma chikmagalur chikamagalur ದಲಿತ ಜನ ಸೇನದ ಹೋರಾಟಕ್ಕೆ ಸಂದ ಜಯ
chikamagalurHomeLatest Newsnamma chikmagalur

ದಲಿತ ಜನ ಸೇನದ ಹೋರಾಟಕ್ಕೆ ಸಂದ ಜಯ

Share
Share

ಚಿಕ್ಕಮಗಳೂರು:  ನಗರದ ಅಂಬೇಡ್ಕರ್ ಬೀದಿಯಲ್ಲಿರುವ ಶಾಂತಿನಗರ ಬಡಾ ವಣೆಯಲ್ಲಿ ಅಂಬೇಡ್ಕರ್ ಭವನ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಡುವಂತೆ ಕೋರಿ ದ್ದು ಜಾಗ ಇಲ್ಲದ ಕಾರಣ ಆ ವಿಷಯ ನೆನೆಗುದಿಗೆ ಬಿದ್ದಿತ್ತು.

ಅದನ್ನು ಮನಗಂಡ ದಲಿತ ಜನಸೇನಾ ಕಾರ್ಯಕರ್ತರು ಸರ್ವೇ ನಂಬರ್ ೫೪ರ ಖಾತೆ ನಂಬರ್ ೯೯೯೯ ರಲ್ಲಿ ಖಾಸಗಿ ಕಾಫಿ ಕ್ಯೂರಿಂಗ್ ಜಾಗ ಒತ್ತುವರಿ ಮಾಡಿಕೊಂಡಿದ್ದನ್ನು ಗಮನಿಸಿ ಆ ಜಾಗದಲ್ಲಿ ಒತ್ತು ವರಿಯನ್ನು ತೆರವುಗೊಳಿಸಿ ಅಂಬೇಡ್ಕರ್ ಭವನ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಡು ವಂತೆ ಮನವಿ ಮಾಡಿದ್ದರು

ಹಲವು ಅಡೆ ತಡೆಗಳೊಂದಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿ ಸಿಬ್ಬಂದಿಗಳ ಶ್ರಮದಿಂದ ಒತ್ತುವರಿ ಜಾಗ ತೆರವುಗೊಳಿಸಲು ಆದೇಶಿಸಲಾಗಿತ್ತು. ಇಂದು ತಾಲೂಕು ಕಚೇರಿ ಸಿಬ್ಬಂದಿಗಳು ನಗರಸಭೆ ಸಿಬ್ಬಂದಿಗಳು ಅರಕ್ಷಕ ಇಲಾಖೆಯ ನೆರವಿನೊಂದಿಗೆ ಒತ್ತುವರಿ ಯಾಗಿದ್ದ ಜಾಗವನ್ನು ತೆರವುಗೊಳಿಸಲಾ ಯಿತು

ಕಾಫಿ ಕ್ಯೂರಿಂಗ್ ಆಡಳಿತ ಮಂಡಳಿಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾವೇ ತೆರವು ಗೊಳಿಸಿ ಕೊಡುತ್ತೇವೆ ಸ್ವಲ್ಪ ಸಮಯಾವಕಾಶ ನೀಡುವಂತೆ ಕೋರಿದ್ದು ಸ್ಥಳೀಯರು ಇದಕ್ಕೆ ಆಕ್ಷೇಪಿಸಿ ಕೂಡಲೇ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಇದರಿಂದ ಸ್ಥಳೀಯರಿಗೆ ಹಾಗೂ ಕಾಫಿ ಕ್ಯೂರಿಂಗ್ ಆಡಳಿತ ಮಂಡಳಿಯವರಿಗೆ ವಾಗ್ವಾದ ಉಂಟಾಗಿ ಪೊಲೀಸರು ಎರಡು ಕಡೆಯವರ ಮನವೊಲಿಸಿ ತೆರವು ಕಾರ್ಯಾ ಚರಣಕ್ಕೆ ಅವಕಾಶ ಮಾಡಿಕೊಟ್ಟರು.

ದಲಿತ ಜನ ಸೇನಾ ಮುಖಂಡರು ಹಾಗೂ ಸ್ಥಳೀಯರು ಮಾತನಾಡಿ ಹಲವು ವ?ಗಳ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ತೀರ ಆರ್ಥಿಕವಾಗಿ ದಲಿತ ವರ್ಗದವರಾದ ನಮಗೆ ಮದುವೆ ಶುಭ ಸಮಾರಂಭಗಳಿಗೆ ಮನೆಯಲ್ಲಿ ಜಾಗವಿಲ್ಲದವರಿಂದ ಇಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಹಾಗೂ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟಲ್ಲಿ ಅನುಕೂಲವಾಗುತ್ತಿದ್ದು ಕೂಡಲೇ ನಮ್ಮ ಬೇಡಿಕೆ ಈಡೇರಿಸಿ ಎಂದು ಒತ್ತಾಯಿಸಿ ಜಾಗ ತೆರವುಗೊಳಿಸಲು ಶ್ರಮಿಸಿದ ಹಿಂದಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ತಹಸಿಲ್ದಾರ್ ರೇ? ಶೆಟ್ಟಿ ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಅಭಿನಂದಿಸಿ ಮಾತನಾಡಿದರು.

ಜೆಸಿಬಿ ಕಾಂಪೌಂಡ್ ತೆರವುಗೊಳಿಸುವಾಗ ಸ್ಥಳೀಯರು ದಲಿತ್ ಜನ ಸೇನಾ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ರವರ ಪರಿಶ್ರಮವನ್ನು ಸ್ಮರಿಸಿ ಪಟಾಕಿ ಸಿಡಿಸಿ ಜಯಗೋ? ಹಾಕಿ ಸಂಭ್ರಮಿಸಿದರು. ತೆರವು ಕಾರ್ಯಾಚರಣೆಯಲ್ಲಿ ತಾಲೂಕು ಕಚೇರಿ ಕಂದಾಯ ಅಧಿಕಾರಿಗಳಾದ ಸಂತೋ? ಗ್ರಾಮ ಲೆಕ್ಕೀಗರಾದ ಚೇತನ್, ದೊರೆ, ನಗರಸಭೆಯ ಮುರುಗೇಶ್, ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕದ ಅಭಯ್ ಪ್ರಕಾಶ್ ಹಾಗೂ ದಲಿತ ಜನ ಸೇನಾದ ಮುಖಂಡರು, ಸ್ಥಳೀಯರು ಹಾಜರಿದ್ದರು.

Victory for the struggle of the Dalit Jana Sena

Share

Leave a comment

Leave a Reply

Your email address will not be published. Required fields are marked *

Don't Miss

ಡಾ.ಮಂಜುನಾಥ್ ಚಿಕ್ಕ‌ಮಗಳೂರು ಡಿಎಚ್ಒ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕ‌ಮಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಎಚ್.ಕೆ.ಮಂಜುನಾಥ್ ನೇಮಕಗೊಂಡಿದ್ದಾರೆ. ಈ ಹಿಂದೆ ಡಿಎಚ್ ಒ ಆಗಿದ್ದ ಅಶ್ವಥ್ ಬಾಬು ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಸಂತಾನೋತ್ಪತ್ತಿ...

ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ...

Related Articles

ಕಳಸದಲ್ಲಿ ಕಾಡುಕೋಣ ದಾಳಿಗೆ ಮಹಿಳೆ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಸಮೀಪ ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ...

ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ

ಚಿಕ್ಕಮಗಳೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ...

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್...