Home namma chikmagalur chikamagalur ವಿಧಾನ ಸಭಾ ಚುನಾವಣೆಗೆ ಟಿ.ಜಿ.ಗೋಪಿಕುಮಾರ್ ಸ್ಪರ್ಧೆ
chikamagalurHomeLatest Newsnamma chikmagalur

ವಿಧಾನ ಸಭಾ ಚುನಾವಣೆಗೆ ಟಿ.ಜಿ.ಗೋಪಿಕುಮಾರ್ ಸ್ಪರ್ಧೆ

Share
Share

ತರೀಕೆರೆ: ವಿಧಾನ ಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ.ಆದರೆ ತರೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಶುರುವಾಗಿದೆ. ಹಾಲಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಗೆ ಸೆಡ್ಡು ಹೊಡೆಯಲು ಹಲವರು ಲೆಕ್ಕಾಚಾರ ಮಾಡುತ್ತಿದ್ದಾರೆ.

ಭರತ್ ಅಂಚೆ ಅಲ್ಲಲ್ಲಿ ಸುತ್ತಿ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ.ಅಜ್ಜಂಪುರದ ಕೃಷ್ಣಮೂರ್ತಿ ನಾನು ಒಂದು ಕೈ ನೋಡುವೆ ಎನ್ನುತ್ತಿದ್ದಾರೆ. ಇದರ ಜೊತೆಗೆ ಟಿ.ಜಿ.ಗೋಪಿಕುಮಾರ್ ಈಗಾಗಲೇ ಹಳ್ಳಿ, ಹಳ್ಳಿ ಸುತ್ತಿ ವಿಧಾನ ಸಭಾ ಅಖಾಡಕ್ಕೆ ಧುಮುಕುವ ತಯಾರಿ ನಡೆಸಿದ್ದಾರೆ.ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ನೀಡುತ್ತೇನೆ ಎನ್ನುತ್ತಿದ್ದಾರೆ.

ಟಿ.ಜಿ.ಗೋಪಿಕುಮಾರ್ ಮಾಜಿ ಪರಸಭಾ ಅಧ್ಯಕ್ಷ ಮತ್ತು ಪರ್ಮೆನಂಟ್ ಆಟೋಚಾಲಕ ಮಾಲೀಕರ ಸಂಘದ ಅಧ್ಯಕ್ಷ ಜೊತೆಗೆ ಹಲವು ಸಂಘ,ಸಂಸ್ಥೆಗಳಲ್ಲಿ ಸಕ್ರಿಯ ಇವರ ತಂದೆ ಜ್ಞಾನದೇವ ರಾವ್ ಕೂಡ ಹಲವು ವರ್ಷಗಳ ಪುರಸಭಾ ಸದಸ್ಯರಾಗಿ ಅಧ್ಯಕ್ಷರಾಗಿ ಹಲವರನ್ನು ಶಾಸಕರನ್ನಾಗಿಸಲು ದುಡಿದವರು ಹೀಗಾಗಿ ರಾಜಕೀಯ ಹಿನ್ನೆಲೆ ಕ್ಷೇತ್ರದಲ್ಲಿ ಚಿರಪರಿಚಿತನಾಗಿರುವುದು ಹೊಡೆತ ಖಚಿತ.ನನ್ನ ಮುಂದೆ ಯಾರು ಇಲ್ಲ ಎಂದು ಹೇಳಿಕೊಳ್ಳುತ್ತಿರುವವರು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಬಂದಿದೆ.

ಈಗಾಗಲೇ ಚಿಕ್ಕಾವನಂಗಲದ ರಾಜಪ್ಪರ ಹೆಸರು ಹರಿದಾಡುತ್ತಿದ್ದು ಇದರ ಜೊತೆಯಲ್ಲಿ ಹಲವರು ತೆರೆಮರೆಯಲ್ಲಿ ಪ್ರಯತ್ನ ನಡೆಸಿರುವ ಮಾಹಿತಿಗಳು ಹರಿದಾಡುತ್ತಿವೆ.ಆರ್,ಎಸ್,ಎಸ್.ತನ್ನದೇ ಮೂಲದಲ್ಲಿ ಅಭ್ಯರ್ಥಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿಜೇಯೆಂದ್ರ ಅಧ್ಯಕ್ಷರಾಗಿ ಮುಂದುವರೆದರೆ ಸುರೇಶ್ ಟಿಕೆಟ್ ಖಚಿತ. ಇಲ್ಲದಿದ್ದರೆ ಹೊಸ ಮುಖ ಖಚಿತ ಎಂದು ಹೇಳಲಾಗುತ್ತಿದೆ.

ವಿಧಾನ ಸಭಾ ಚುನಾವಣೆ ಯ ನಂತರ ಕಣ್ಮರೆಯಾದ ಗೋಪಿಕೃಷ್ಣ ಕಾಂಗ್ರೆಸ್ ಸೇರಿ ಕಾಂಗ್ರೆಸ್ ಟಿಕೆಟ್ ಪಡೆದೇ ಬರುತ್ತೇನೆ ಎಂದು ಅವರ ಶಿಷ್ಯ ಬಳಗದಲ್ಲಿ ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಭಾರತೀಯ ಜನತಾ ಪಕ್ಷದ ಲ್ಲೂ ಮಾಜಿ ಶಾಸಕ ಡಿ.ಎಸ್.ಸುರೇಶ್ ಗೆ ಠಕ್ಕರ್ ಕೊಡಲು ಹಲವರು ಪ್ರಯತ್ನ ನಡೆಸಿರುವ ಬೆಳವಣಿಗೆಗಳು ನಡೆಯುತ್ತಿವೆ.

ತರೀಕೆರೆಯ ರಂಗು ರಂಗಿನ ರಾಜಕೀಯ 1952 ರಿಂದಲೂ ಹೊಸಹೊಸ ವರಸೆಗಳಿಗೆ ಹೆಸರಾಗಿದೆ.ಮೊದಲ ವಿಧಾನ ಸಭಾ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗಿ ಗೆದ್ದ ಅಭ್ಯರ್ಥಿ ನಾಗಪ್ಪರ ವಿರುದ್ದ ಟಿ.ಸಿ.ಬಸಪ್ಪ ಶಾಸಕರಾಗಿದ್ದು ಅವರ ನಿಧನರಾದ ನಂತರ ಉಪಚುನಾವಣೆ ನಡೆದು ಟಿ.ಸಿ.ಶಾಂತಪ್ಪ ವಿಧಾನ ಸಭೆ ಪ್ರವೇಶ ಮಾಡಿ ಐದು ವರ್ಷಗಳಲ್ಲಿ ಮೂರು ಜನ ಶಾಸಕರಾಗಿರುವ ದಾಖಲೆ ಹೊಂದಿದೆ.

ಇದೇ ರೀತಿ 1972 ರಿಂದ ಗೆದ್ದ ಅಭ್ಯರ್ಥಿಗಳು ಮತ್ತೆ ಆಯ್ಕೆಯಾಗಿಲ್ಲ. ಟಿಕೆಟ್ ಕೂಡ ಮತ್ತೆ, ಮತ್ತೆ ಪಡೆಯಲಾಗಿಲ್ಲ ಇಂತಹ ಕ್ಷೇತ್ರ ಮತ್ತು ಮತದಾರನ ಚಿತ್ತ ಹೊಸ ದಾಖಲೆ ಬರೆಯುವುದು ಖಚಿತ ಎಂದು ಹಿರಿಯ ಮುಖಂಡರ ಅಭಿಪ್ರಾಯವಾಗಿದೆ.

TG Gopikumar contest for Vidhan Sabha elections

Share

Leave a comment

Leave a Reply

Your email address will not be published. Required fields are marked *

Don't Miss

ಡಾ.ಮಂಜುನಾಥ್ ಚಿಕ್ಕ‌ಮಗಳೂರು ಡಿಎಚ್ಒ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕ‌ಮಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಎಚ್.ಕೆ.ಮಂಜುನಾಥ್ ನೇಮಕಗೊಂಡಿದ್ದಾರೆ. ಈ ಹಿಂದೆ ಡಿಎಚ್ ಒ ಆಗಿದ್ದ ಅಶ್ವಥ್ ಬಾಬು ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಸಂತಾನೋತ್ಪತ್ತಿ...

ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ...

Related Articles

ಕಳಸದಲ್ಲಿ ಕಾಡುಕೋಣ ದಾಳಿಗೆ ಮಹಿಳೆ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಸಮೀಪ ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ...

ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ

ಚಿಕ್ಕಮಗಳೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ...

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್...