Home namma chikmagalur chikamagalur ಇಟ್ಟುಕೊಂಡವರು ಮತ್ತು ಕಟ್ಟಿಕೊಂಡವರ ಕಾದಾಟ ! – ವೀರಶೈವ ಲಿಂಗಾಯತ ಸಂಘ ಬೀದಿಗೆ ತಂದಿರುವುದೇಕೆ ?
chikamagalurHomeLatest Newsnamma chikmagalur

ಇಟ್ಟುಕೊಂಡವರು ಮತ್ತು ಕಟ್ಟಿಕೊಂಡವರ ಕಾದಾಟ ! – ವೀರಶೈವ ಲಿಂಗಾಯತ ಸಂಘ ಬೀದಿಗೆ ತಂದಿರುವುದೇಕೆ ?

Share
Share

ಚಿಕ್ಕಮಗಳೂರು: ಪ್ರಪಂಚದಲ್ಲಿ ಯಾರು ಸಾಧನೆ ಮಾಡದ ಕೆಲಸ ಮಾಡಿದ್ದೇವೆ ಎಂಬ ಭ್ರಮೆಯಲ್ಲಿ ತೆಲುತ್ತಿರುವವರು ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಡಬಲ್,ಡಬಲ್ ಆಹ್ವಾನ ಪತ್ರಿಕೆ ಮುದ್ರಣವಾಗಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ,ವಿರೋಧ ಚರ್ಚೆ ಕೂಡ ನಡೆದು ಸಂಘವನ್ನು ಬೀದಿಗೆ ತಂದಿದ್ದಾರೆ ಎಂಬ ಆಕ್ರೋಶವಿದೆ.

ಬಿದ್ದರು ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮೊದಲು ಮಾಡಿಸಿದ ಆಹ್ವಾನ ಪತ್ರಿಕೆ ಹಂಚಲಾಗಿದೆ. ಸಂಘ,ಸಂಸ್ಥೆಗಳ ಕಾರ್ಯಕ್ರಮಕ್ಕೆ ಪ್ರೊಟೊ ಕಾಲ್ ಬರಲ್ಲ ನಿಜ ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಬೋಜೇಗೌಡ, ಸಿ.ಟಿ.ರವಿ ಮತ್ತು ಪ್ರಾಣೇಶ್ ಹಾಗೂ ಲೋಕಸಭಾ ಸದಸ್ಯ ಶ್ರೀನಿವಾಸ್ ಪೂಜಾರಿ ಬಿಟ್ಟು ಉಳಿದವರನ್ನು ಕರೆದು ಮೆರೆಯಲು ಹೊರಟವರು ಯಾವ ಸಂಘಸಂಸ್ಥೆಗಳಿಗೆ ಶೋಭೆ ತರುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಇಲ್ಲದಿರುವುದು ಏಕೆ.ಬೇರೆ ಸಮಾಜದವರು ಯಾವ ರೀತಿಯಲ್ಲಿ ಯೋಚಿಸಬಹದು.

ಈಗಾಗಲೇ ಬಡವರು ಇಲ್ಲಿ ಇರಬಾರದು ಎಂದು ಐದು ಸಾವಿರ ಕೊಟ್ಟವರಿಗೆ ಸದಸ್ಯತ್ವ ಎಂದು ತೀರ್ಮಾನ ತೆಗೆದುಕೊಂಡು ಮೀಸೆ ತಿರುವುತ್ತಿರುವ ಪದಾಧಿಕಾರಿಗಳು ದೇಣಿಗೆ ಕೊಟ್ಟವರನ್ನು ಮಾತ್ರ ಕರೆಯುತ್ತೇವೆ ಎಂಬ ನಿಯಮ ಮಾಡಿಕೊಂಡು ಓಡಾಡುವ ಆರಾಧ್ಯ ಅಂಡ್ ಟೀಮ್ ಯಡಿಯೂರಪ್ಪರ ಮುಂದೆ ಕುಂಡಿ ಊರಿ ಕುಳಿತುಕೊಂಡಿರುವುದು ನಗೆಪಾಟಲಿಗೆ ಸಿಕ್ಕಿದೆ.ಎಲ್ಲರಿಗೂ ಸಂಘ ಬೇಕು ಆದರೆ ಮುಖವಾಡ ಧರಿಸಿಕೊಂಡವರ ಕೈಗೆ ಸಿಕ್ಕರೆ ರಾಜಕೀಯ ಪುಡಾರಿಗಳಿಗಾಗಿ ಪುಡಾರಿಗಳು ಏಪ್ರಿಲ್ 18 ರಂದು ಉದ್ಘಾಟನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಏಕೆಂದರೆ ಸಮಾಜದ ಯಾವ ಸ್ವಾಮೀಜಿ ಗಳನ್ನು ಕರೆಯದೆ ಮತ್ತೊಂದು ದಿನ ಕರೆದು ಸಭೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಅದರಲ್ಲೂ ಅರಡಿ_ಮೂರಡಿ ಕುರ್ಚಿಗಾಗಿ ಮತ್ತೆ ಕಾದಾಟ ನಡೆಯುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇದೆ.ಸಂಘ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಆದರೆ ಬೀದಿಗೆ ತರಬೇಡಿ.ಸಂಘದ ಘನತೆ ಹಾಳಾಗದಂತೆ ಸಂಘಕ್ಕೆ ಆಸ್ತಿ ಮಾಡಿಕೊಟ್ಟಿರುವ ಬಸವೇಗೌಡರು ಮತ್ತು ಗೌರಮ್ಮ ಬಸವೇಗೌಡರ ದೂರ ದೃಷ್ಟಿ ಮರೆಯಬೇಡಿ ಎಂದು ಸಮಾಜದ ಹಲವರು ಹೇಳುತ್ತಿದ್ದಾರೆ.

ಸಂಘ ಕಟ್ಟಿ ಬೆಳೆಸಿದರೆ ಯಾರ ತಕರಾರು ಇಲ್ಲ ಬೀದಿಗೆ ತಂದು ಯಾರನ್ನಾದರೂ ವಿಲನ್ ಮಾಡಲು ಹೋಗಿ ನೀವೆ ವಿಲನ್ ಗಳ ಪೋಷಕರಾಗುವುದು ಯಾವ ಸಮಾಜಕ್ಕೂ ಒಳ್ಳೆಯದಲ್ಲ.ಹಲವು ಸಂಘ ಕಟ್ಟಿ ಮುರಿದಿರುವ ಆರಾಧ್ಯ, ನಂಜೇಗೌಡರು,ಗ್ಯಾರಂಟಿ ಪಾರ್ಟಿ ಶಿವಾನಂದ ಸ್ವಾಮಿ ಅಧ್ಯಕ್ಷ ಶಿವಶಂಕರ್ ಎಚ್ಚರಿಕೆ ವಹಿಸಿದ್ದರೆ ಒಳ್ಳೆಯದಿತ್ತು.ಮತ್ತೆ,ಮತ್ತೆ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಲ್ಲಾ ಪಕ್ಷದವರಿಗೂ ಎಲ್ಲಾ ಜನಾಂಗದ ಹಿಂಬಾಲಕರು ಇರುತ್ತಾರೆ.ಸಂಘದಿಂದಲೇ ರಾಜಕೀಯ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರದ ಲಾಲಸೆ,ಸ್ವಾರ್ಥದಿಂದ ಸಂಘ ಸದೃಢವಾಗಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿರುವುದು ಮಾತ್ರ ಸತ್ಯ.

Why has the Veerashaiva Lingayat Sangha taken to the streets?

Share

Leave a comment

Leave a Reply

Your email address will not be published. Required fields are marked *

Don't Miss

ನಕಲಿ “ಐ.ಎ.ಎಸ್” ಮಿಥುನ್ ಬಂಧನ

ಬೆಂಗಳೂರು: ಚಿಕ್ಕಮಗಳೂರು ಮೂಲದ ಮಿಥುನ್ ಎಂಬತಾ ಐ.ಎ.ಎಸ್.ನ ನಕಲಿ ದಾಖಲೆ ಸೃಷ್ಟಿ ಮಾಡಿ ಹಲವರಿಗೆ ವಂಚನೆ ಮಾಡಿದ್ದು ಬೆಂಗಳೂರಿನ ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅರೋಗ್ಯ ಇಲಾಖೆಯ ಎನ್.ಹೆಚ್.ಎಮ್.ನ ಉಸ್ತುವಾರಿ ಎಂದು...

ನಗರದಲ್ಲಿ ಹಾಡುಹಗಲೇ ಶಿಕ್ಷಕಿಯ ಮಾಂಗಲ್ಯ ಸರ ಅಪಹರಣ

ಚಿಕ್ಕಮಗಳೂರು: ಹಾಡುಹಗಲೇ ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಘಟನೆ ಸೋಮವಾರ ಸಂಜೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ...

Related Articles

ಪ್ರಯಾಣಿಕರೇ ಬಸ್ ತಳ್ಳುವ ಕೆಎಸ್‌ಆರ್‌ಟಿಸಿ ಬಸ್‌

ಚಿಕ್ಕಮಗಳೂರು: ಸರ್ಕಾರದ ಉಚಿತ ಯೋಜನೆಗಳ ಆರ್ಭಟದ ನಡುವೆ ಸಾರಿಗೆ ಬಸ್‌ಗಳ ನಿರ್ವಹಣೆ ಅಧೋಗತಿಗೆ ತಲುಪಿದೆಯೇ? ಇಂತಹದೊಂದು ಪ್ರಶ್ನೆ...

ಏ.23ಕ್ಕೆ ಕರಾಳಕೃತ್ಯ ಖಂಡಿಸಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯದ ಅಪಚಾರ ಏಪ್ರಿಲ್ ೨೩ ರಂದು ಪಶ್ಚಿಮಬಂಗಾಳದಲ್ಲಿ ನಡೆಯುತ್ತಿದೆ. ಇದನ್ನು ವಿರೋಧಿಸಿ...

ಭದ್ರಾ ಅಭಯಾರಣ್ಯದಲ್ಲಿ ಭ್ರಷ್ಟಾಚಾರ

ಚಿಕ್ಕಮಗಳೂರು:ಭದ್ರಾ ಅಭಯಾರಣ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಮೌನವಹಿಸಿದ್ದಾರೆಂದು ದಲಿತ ಸಂಘರ್ಷಸಮಿತಿ ರಾಜ್ಯ ಸಂಘಟನಾ ಸಂಚಾಲಕ...

ಜನತೆ ಬಿಸಿಲಿನ ಬೇಗೆಗೆ ತತ್ತರಿಸಿ ಹೋದ ಕಾಫಿನಾಡಿನ ಜನತೆ

ಚಿಕ್ಕಮಗಳೂರು: ಮಲೆನಾಡಿನ ಮಡಿಲು, ತಂಪಾದ ಹವಾಮಾನಕ್ಕೆ ಹೆಸರಾದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ಬಾರಿ ಸೂರ್ಯನ ಪ್ರಖರತೆ...