Home namma chikmagalur chikamagalur ಬದುಕಿದ್ದಾಗಲೇ ಸ್ವತಃ ತನ್ನ ‘ತಿಥಿ’ಗೆ ಅಧಿಕಾರಿಗಳನ್ನು ಆಹ್ವಾನಿಸಿದ ಗಂಧದ ಬೆಳೆಗಾರ
chikamagalurHomeLatest Newsnamma chikmagalurTarikere

ಬದುಕಿದ್ದಾಗಲೇ ಸ್ವತಃ ತನ್ನ ‘ತಿಥಿ’ಗೆ ಅಧಿಕಾರಿಗಳನ್ನು ಆಹ್ವಾನಿಸಿದ ಗಂಧದ ಬೆಳೆಗಾರ

Share
Share

ಚಿಕ್ಕಮಗಳೂರು: ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತ ಬೆಳೆಗಾರನೊಬ್ಬ, ತಾನು ಬದುಕಿರುವಾಗಲೇ ತನ್ನ ‘ಸಂತಾಪ ಸಭೆ’ ಹಾಗೂ ‘ತಿಥಿ ಊಟ’ಕ್ಕೆ ಅಧಿಕಾರಿಗಳಿಗೆ ಆಹ್ವಾನ ನೀಡಿರುವ ವಿಲಕ್ಷಣ ಹಾಗೂ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ: ತರೀಕೆರೆ ತಾಲೂಕಿನ ಗಂಧದ ಬೆಳೆಗಾರ ವಿಶುಕುಮಾರ್ ಅವರು ಈ ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದವರು. ರಾಷ್ಟ್ರೀಯ ಹೆದ್ದಾರಿ (ಓಊಂI) ನಿರ್ಮಾಣಕ್ಕಾಗಿ ಇವರ ಜಮೀನಿನಲ್ಲಿದ್ದ ಅಮೂಲ್ಯವಾದ ಶ್ರೀಗಂಧದ ಮರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ಶ್ರೀಗಂಧದ ಮರಕ್ಕೆ ಕೇವಲ ೪೨೦ ರೂಪಾಯಿ ಪರಿಹಾರ ನಿಗದಿಪಡಿಸಿರುವುದು ಬೆಳೆಗಾರನ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳೆಗಾರ ವಿಶುಕುಮಾರ್ ಅವರ ಪ್ರಕಾರ, ಅಧಿಕಾರಿಗಳು ಇತರ ಮರಗಳಿಗೆ ಹೆಚ್ಚಿನ ದರ ನಿಗದಿಪಡಿಸಿ, ಅತ್ಯಂತ ಬೆಲೆಬಾಳುವ ಶ್ರೀಗಂಧಕ್ಕೆ ಕನಿಷ್ಠ ಬೆಲೆ ನೀಡಿದ್ದಾರೆ. ಪರಿಹಾರದ ತಾರತಮ್ಯ ಹೀಗಿದೆ: ಒಂದು ಮಾವಿನ ಮರ: ?೬೩,೦೦೦, ತೆಂಗಿನ ಮರ: ?೩೭,೦೦೦, ಲಿಂಬೆ ಗಿಡ: ?೩,೪೦೦, ಬೇವು: ?೨,೨೦೦,ಶ್ರೀಗಂಧದ ಮರ: ಕೇವಲ ?೪೨೦!

ಈ ಹಿಂದೆ ನ್ಯಾಯಾಲಯವು ಒಂದು ಶ್ರೀಗಂಧದ ಮರಕ್ಕೆ ಕನಿಷ್ಠ ೨೫ ಸಾವಿರ ರೂಪಾಯಿ ನಿಗದಿಪಡಿಸಿ ವೈಜ್ಞಾನಿಕ ದರ ನೀಡುವಂತೆ ಸೂಚಿಸಿದ್ದರೂ, ಅಧಿಕಾರಿಗಳು ಅದನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಬೆಳೆಗಾರನ ಗಂಭೀರ ಆರೋಪವಾಗಿದೆ.

ಅಧಿಕಾರಿಗಳ ನಡೆಗೆ ಬೇಸತ್ತ ವಿಶುಕುಮಾರ್, ವಾರದ ಹಿಂದೆಯಷ್ಟೇ ದಯಾಮರಣಕ್ಕೆ ಮನವಿ ಮಾಡಿದ್ದರು. ಅಲ್ಲದೆ ಸಿಸಿಎಫ್ (ಅಅಈ) ಭೇಟಿಗೆ ಅವಕಾಶ ನೀಡದಿದ್ದರೆ ಶಿವಮೊಗ್ಗ ಕಚೇರಿ ಮುಂಭಾಗವೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು, ನಾಳೆ ಬೆಳಗ್ಗೆ ೧೦ ಗಂಟೆಗೆ ತಮ್ಮ ‘ಸಂತಾಪ ಸಭೆ’ ಹಾಗೂ ಮಧ್ಯಾಹ್ನ ೧ ಗಂಟೆಗೆ ‘ತಿಥಿ ಊಟ’ ಹಮ್ಮಿಕೊಂಡಿದ್ದು, ಇದಕ್ಕೆ ಎನ್.ಎಚ್.ಎ.ಐ ಅಧಿಕಾರಿಗಳು, ಅರಣ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಮತ್ತು ವಿಶೇಷ ಭೂಸ್ವಾಧೀನ ಅಧಿಕಾರಿಗಳನ್ನು ಆಹ್ವಾನಿಸಿದ್ದಾರೆ.

ಇದೇ ವೇಳೆ ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳಿಗೂ ಅವರು ಆಮಂತ್ರಣ ನೀಡಿದ್ದು, ವ್ಯವಸ್ಥೆಯ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಘಟನೆಯು ಜಿಲ್ಲಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ರೈತರಿಗೆ ಸಿಗಬೇಕಾದ ನ್ಯಾಯಯುತ ಪರಿಹಾರದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.

Sandalwood grower who invited officials to his ‘tithi’ while still alive

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...