Home namma chikmagalur chikamagalur ನಟ್ಟು ಬೋಲ್ಟ್ ಟೈಟ್ ಮಧ್ಯೆ ಬಿ.ಜೆ.ಪಿ. ತೆಕ್ಕೆಗೆ ಡಿ.ಸಿ.ಸಿ. ಬ್ಯಾಂಕ್
chikamagalurHomeLatest Newsnamma chikmagalur

ನಟ್ಟು ಬೋಲ್ಟ್ ಟೈಟ್ ಮಧ್ಯೆ ಬಿ.ಜೆ.ಪಿ. ತೆಕ್ಕೆಗೆ ಡಿ.ಸಿ.ಸಿ. ಬ್ಯಾಂಕ್

Share
Share

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಡಿ.ಎಸ್.ಸುರೇಶ್, ಕೆ.ಆರ್.ಆನಂದ್, ಬೆಳ್ಳಿ ಪ್ರಕಾಶ್, ಬಸವರಾಜಪ್ಪ, ಹಳಸೆ ಶಿವಣ್ಣ,ಜಯಪಾಲ್, ದಿನೇಶ್ ಹೆಗ್ಡೆ ಮತ್ತು ಎಸ್.ಡಿ.ಸೋನಾಲ್ ಅವಿರೋಧ ಆಯ್ಕೆಯಾಗಿದ್ದಾರೆ. ಹೆಗ್ಡೆ ಹೊರತು ಪಡಿಸಿ ಉಳಿದವರು ಬಿಜೆಪಿ ಬೆಂಬಲಿಗರು.

ಇಂದು ಐದು ಸ್ಥಾನಗಳಿಗೆ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡರ ಮಧ್ಯೆ ನಿರಂಜನ್ ಸ್ಪರ್ಧೆ ಕೌತಕ ಸೃಷ್ಟಿ ಮಾಡಿದ್ದರ ಜೊತೆಗೆ ಪ್ರತಿನಿಧಿಗಳಿಗೆ ಗುಂಡು,ತುಂಡಿನ ಜೊತೆಗೆ ಪ್ರವಾಸ ಭಾಗ್ಯ ಮತ್ತು ಲಕ್ಷ,ಲಕ್ಷ ಹಣ ಸಿಗುವಂತಾಯಿತು ರವಿ 25 ಮತ ಪಡೆದರೆ ಮತ್ತು ಬೋಜೇಗೌಡರು 30 ಮತ ಪಡೆದರೆ ನಿರಂಜನ್ ಐದು ಮತ ಪಡೆದರೆ ರವಿ ಮತ್ತು ಬೋಜೇಗೌಡರು ಸುಲಭವಾಗಿ ಜಯಗಳಿಸಿದರು.

ಟಿ.ಎ.ಪಿ.ಸಿ.ಎಂ.ಎಸ್.ಕ್ಷೇತ್ರದ ಇಂದು ಚುನಾವಣೆ ನಡೆದು ಆನಂದ್ ಮೂರು ಮತ ಪಡೆದರೆ ನಾಲ್ಕು ಮತ ಪಡೆದ ದಿನೇಶ್ ಹೊಸೂರು ಜಯಗಳಿಸಿದ್ದಾರೆ. ಜಿಲ್ಲಾ ಇತರೆ ಸಹಕಾರ ಸಂಘಗಳ ಚುನಾವಣೆ ಕುತೂಹಲ ಕೆರಳಿಸಿತ್ತು. ಟಿ.ಎಲ್.ರಮೇಶ್ ಎರಡು ಬಾರಿ ಎರಡು,ಮೂರು ಮತಗಳಿಂದ ಜಯಗಳಿಸಿದ್ದರೂ ಈ ಬಾರಿ 56 ಮತ ಪಡೆದು ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ.

ಅವರ ಜೊತೆಯಲ್ಲಿ ಇದ್ದ ನಿರ್ದೇಶಕರುಗಳು ವಿರೋಧ ಮಾಡುತ್ತಿರುವುದು ಮಾತ್ರ ಸೋಜಿಗ.ಜೊತೆಗೆ ಬ್ಯಾಂಕ್‌ ನೌಕರರು ವಿರೋಧ ವ್ಯಕ್ತಪಡಿಸಿದರೂ ಪ್ರತಿಸ್ಪರ್ಧಿ ಮಾಜಿ ಶಾಸಕ ಕುಮಾರಸ್ವಾಮಿ 38 ಮತ ಕುಮಾರಸ್ವಾಮಿ ಪಡೆದಿದ್ದಾರೆ ಕೊಪ್ಪ ಸಹಕಾರ ಸಂಘಗಳ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸತೀಶ್ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಸರ್ಕಾರ ಇರುವುದರಿಂದ ಬ್ಯಾಂಕ್ ನಲ್ಲಿ ನಟ್ಟು ಬೋಲ್ಟ್ ಟೈಟ್ ಮಾಡುವುದು ಮಾಡುವುದು ಖಚಿತ. ಮುಂದಿನ ವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಮತ್ತೊಂದು ರೀತಿಯ ಬೆಳವಣಿಗೆ ಆಗುವುದು ಖಚಿತ.ಸುರೇಶ್ ಅಧ್ಯಕ್ಷರದಾಗ ಮಲೆನಾಡಿಗೆ ಅವಕಾಶ ಕೊಡಿ ಎಂಬ ಕೂಗು ಇತ್ತು.ಇದರ ಜೊತೆಗೆ ಲಿಂಗಾಯತv/s ವಕ್ಕಲಿಗರು ಎಂಬ ಗುಂಪುಗಾರಿಕೆ ಕೂಡ ಶುರು ಸಿ.ಟಿ.ರವಿ ಅಧ್ಯಕ್ಷರಾಗ ಬೇಕು ಎಂಬ ಆಸೆ ಏನಾಗ ಬಹುದು ಎಂಬ ಕುತೂಹಲ ಮಾತ್ರ ಇರುತ್ತದೆ.ಬೆಳ್ಳಿ ಪ್ರಕಾಶ್ ದಾರಳತನದಿಂದ ಮತ್ತೊಮ್ಮೆ ಬಿಜೆಪಿ ಡಿಸಿಸಿ ಬ್ಯಾಂಕ್ ಆಡಳಿತದ ಚುಕ್ಕಾಣಿ ಹಿಡಿದಿದೆ.

BJP takes over DCC Bank amid tight security

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಪುಸ್ತಕ ಸಂಸ್ಕೃತಿ-ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ

ಚಿಕ್ಕಮಗಳೂರು: ಪುಸ್ತಕ ಸಂಸ್ಕೃತಿ ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ ಎಂದು ನ್ಯೂಸ್ ಕಿಂಗ್ ಆನ್ಲೈನ್ ಪತ್ರಿಕೆಯ ಸಂಪಾದಕ...

ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ ಕಾರು

ಕಳಸ: ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಪ್ರವಾಸಿಗರ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ...

ಸ್ವಾತಂತ್ರ್ಯೋತ್ಸವದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ 

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ದಲಿತ...

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ,...