ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಜನವರಿ 17 ರಂದು ನಡೆಯಲಿದ್ದು ಚುನಾವಣಾ ವೇಳ ಪಟ್ಟಿ ಮತ್ತು ಮತದಾರರ ಪಟ್ಟಿ ಪ್ರಕಟಿಸಲಾಗಿದೆ.
ಚುನಾವಣೆಗೆ ಬಿಜೆಪಿ ಮತ್ತು ದಳದವರು ಪೂರ್ವ ತಯಾರಿ ನಡೆಸಿ ಅಖಾಡಕ್ಕೆ ತಯಾರಿ ನಡೆಸಿದ್ದಾರೆ.ಕಾಂಗ್ರೆಸ್ ನವರು ರಹಸ್ಯ ದಾರಿ ಹುಡುಕುತ್ತಿದ್ದಾರೆ.ಜಿಲ್ಲಾ ಕಾಂಗ್ರೆಸ್ ಗೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಆದರೆ ಕಡೂರು ಶಾಸಕ ಆನಂದ್ ವ್ಯರ್ಥ ಪ್ರಯತ್ನದಲ್ಲಿರುವ ಬಗ್ಗೆ ಮಾಹಿತಿ ಹರಡಿದೆ.
ಚಿಕ್ಕಮಗಳೂರು ಸಹಕಾರ ಸಂಘಗಳ ಕ್ಷೇತ್ರದಿಂದ ಹಾಲಿ ವಿಧಾನ ಪರಿಷತ್ ಸದಸ್ಯರುಗಳಾದ ಬಿಜೆಪಿಯ ಸಿ.ಟಿ.ರವಿ ಮತ್ತು ಜನತಾದಳದ ಎಸ್.ಎಲ್.ಬೋಜೇಗೌಡರು ಎಂಟ್ರಿ ಕೊಡುವುದು ಬಹುತೇಕ ಖಚಿತ. ಇದರಿಂದ ಚುನಾವಣೆ ರಂಗೇರಬಹುದು.
ರೆಸಾರ್ಟ್ ನಲ್ಲಿ ಸ್ಪರ್ಧೆ ಮಾಡುವವರು ಸಭೆ ಸೇರಿ ಅಂತರಿಕವಾಗಿ ಬೆಂಬಲಿಗರ ಮತ ಮಾಡಿಸಿದ್ದು ಸಿ.ಟಿ.ರವಿಗೆ 25 ಮತಗಳು ಬೋಜೇಗೌಡರಿಗೆ 15 ಮತಗಳು ನಿರಂಜನ್ ರವರಿಗೆ 10 ಮತಗಳು ಮತ್ತು ಟಿ.ಮಂಜುನಾಥ್ ಗೆ 5 ಮತಗಳು ಹಾಗೂ ಚಂದ್ರೇಗೌಡ ರವರಿಗೆ ಒಂದು ಮತ ದೊರೆತಿರುವುದರಿಂದ ಬಹುತೇಕ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡರು ಸ್ಪರ್ಧೆ ಮಾಡಿದರೆ ಮುಗಳವಳ್ಳಿ ನಿರಂಜನ್ ಸ್ಪರ್ಧೆ ಮಾಡುವುದು ಖಚಿತ.ಹೀಗಾಗಿ ಕಾಂಗ್ರೆಸ್ ನವರ ಬೆಂಬಲಿಸಿದರೆ ಚುನಾವಣೆ ಕಾವು ಪಡೆದುಕೊಂಡರು ಆಶ್ಚರ್ಯ ಮತ್ತು ಕುತೂಹಲ ಹುಟ್ಟಿಸಬಹುದು.ಸಿ.ಟಿ.ರವಿ ಬ್ಯಾಂಕ್ ನ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಸಕ ತಮ್ಮಯ್ಯನ ಹೊಡೆತಕ್ಕೆ ಬೇಸ್ತು ಬಿದ್ದಿದ್ದು ಮಾಸುವ ಮುನ್ನವೇ ನಿರಂಜನ ಹೊಡೆತ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ಕಾಲವೇ ಹೇಳಬೇಕು. ವೀರಶೈವ – ಲಿಂಗಾಯತ ಸಮಾಜದ ನಿರಂಜನ್ ಪದಾಧಿಕಾರಿಯಾಗುವುದರಿಂದ ಸಮಾಜದವರು ಪ್ರತಿಭಟನೆ ನಡೆಸುವ ಸಾಧ್ಯತೆ ಯಿದೆ. ಕಡೂರು ತಾಲ್ಲೂಕು ಸಹಕಾರ ಸಂಘಗಳ ಕ್ಷೇತ್ರದಿಂದ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮತ್ತು ಬಸವರಾಜಪ್ಪ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದರೆ ತರೀಕೆರೆ ತಾಲ್ಲೂಕ್ ನಲ್ಲಿ ಹಾಲಿ ಬ್ಯಾಂಕ್ ಅಧ್ಯಕ್ಷರಾದ ಡಿ.ಎಸ್.ಸುರೇಶ್ ಮತ್ತು ಕೆ.ಆರ್. ಆನಂದಪ್ಪ ಸ್ಪರ್ಧೆ ಖಚಿತವಾಗಿದೆ.ಇಲ್ಲಿ ಕಾಂಗ್ರೆಸ್ ನವರು ಸೊಸೈಟಿಯ ವಿಳಾಸ ಹುಡುಕಾಡುತ್ತಿದ್ದಾರೆ.
ಮೂಡಿಗೆರೆ ತಾಲ್ಲೂಕು ಸಹಕಾರ ಸಂಘಗಳ ಕ್ಷೇತ್ರದಿಂದ ಹಳಸೇ ಶಿವಣ್ಣರನ್ನು ಅಲ್ಲಾಡಿಸುವುದು ಕಷ್ಟ.ಶೃಂಗೇರಿ, ಕೊಪ್ಪ,ಎನ್.ಆರ್ ಪುರದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತುಸು ಪೈಪೋಟಿ ಕಂಡುಬಂದರೂ ಒಂದು ಸ್ಥಾನ ಪಡೆಯಲು ಕಾಂಗ್ರೆಸ್ ಮುಂದಾಗಬಹುದು. ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರವನ್ನು ಜನತಾದಳವರಿಗೆ ಬಿಟ್ಟು ಕೊಡಲಾಗಿದ್ದು ದಳದ ಸೋನಾಲ್ ಮತ್ತು ಜಗದೀಶ್ ಮಧ್ಯೆ ಹಗ್ಗ ಜಗ್ಗಾಟ ನಡೆದಿದೆ.
ಅಂತಿಮವಾಗಿ ಹೆಚ್.ಡಿ.ರೇವಣ್ಣ ಎಂಟ್ರಿ ಕೊಟ್ಟರೆ ಸೋನಾಲ್ ಅವಿರೋಧವಾಗಿ ಆಯ್ಕೆಯಾದರೆ ಆಶ್ಚರ್ಯ ಪಡುವಂತಿಲ್ಲ ಇನ್ನೂ ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಹಾಲಿ ಸದಸ್ಯ ಟಿ.ಎಲ್.ರಮೇಶ್ ಗೆ ಬದಲಾಗಿ ಈಶ್ವರಹಳ್ಳಿ ಮಹೇಶ್ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ.
ರಾಷ್ಟ್ರ ರಾಜಕಾರಣ,ರಾಜ್ಯ ರಾಜಕೀಯದಲ್ಲಿ ಸದಾ ಬ್ಯೂಜೀಯಾಗಿರುವ ರವಿ ಮತ್ತು ಬೋಜೇಗೌಡರು ಎಂಟ್ರಿ ಕೊಡುವುದು ಹಲವರಿಗೆ ಅಸಮಾಧಾನ ತಂದಿದೆ ಅಡಿಯಿಂದ- ಮುಡಿಯವರೆಗೆ ಇವರುಗಳಿಗೆ ಅಧಿಕಾರ ಬೇಕಾ ಎಂದು ಅವರ ಪಕ್ಷದವರೇ ಮಾತನಾಡುತ್ತಿರುವುದು ಗುಟ್ಟೇನಲ್ಲಾ.ಕಾಂಗ್ರೆಸ್ ನವರು ಮಾತ್ರ ಯಾವಾ ಚುನಾವಣೆ ಎಂದು ಕಣ್ಣು,ಕಿವಿ,ಬಾಯಿ ಇಲ್ಲದವರ ತರಹ ನಟನೆ ಮಾಡುತ್ತಿದ್ದಾರೆ
ಕಾಂಗ್ರೆಸ್ ನವರು ಚುನಾವಣೆ ನಡೆಸದಂತೆ ಮಾಡುವ ಪ್ರಯತ್ನಕ್ಕೆ ಬೆಳ್ಳಿ ಪ್ರಕಾಶ್ ಮಾಡಿದ ಹರಸಾಹಸದಿಂದ ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಯುತ್ತಿದೆ.ಮುಗಿದು ಹೋಗಿದ್ದ ಆಡಳಿತದ ಅವಧಿಯನ್ನು ಮುಂದುವರೆಸುವಂತೆ ಮಾಡಿರುವ ಆದೇಶದ ಪ್ರತಿ ಹಿಡಿದುಕೊಂಡು ಹಲವರು ಓಡಾಡುತ್ತಿದ್ದಾರೆ.
The image of Ghatanu Ghatigalu entering the DCC Bank elections has changed.
Leave a comment