ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ಗಣೇಶನ ಮರ್ಡರ್ ನಡೆದು ಎಂಟು ದಿನವಾಯಿತು .ಕೊಲೆಗಾರರನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.
ಮೇಲ್ನೋಟಕ್ಕೆ ಬ್ಯಾನರ್ ಗಲಾಟೆ ಎನ್ನುತ್ತಾರೆ ಇದರ ಹಿಂದಿನ ಅಳಾ ಮತ್ತು ಅಗಲಾ ವಿಪರೀತ ಇದೆ.ಗಣೇಶ ಮತ್ತು ಸಂಜಯ್ ಒಂದೇ ಗ್ಯಾಂಗ್ ಸಖರಾಯಪಟ್ಟಣದ ಸಮೀಪದ ಜಮೀನು ಮಾರಾಟ ಮಾಡಿಸಿ ಇಪ್ಪತ್ತು ಲಕ್ಷ ಕಮೀಷನ್ ಪಡೆದು ಗಣೇಶ ಸರಿಯಾಗಿ ಹಂಚಿಕೆ ಮಾಡಲಿಲ್ಲ ಎಂದು ಕೋಪಗೊಂಡು ಬೇರೆ,ಬೇರೆ ಯಾಗಿ ಗುಂಪು ಕಟ್ಟಿ ಕೊಂಡು ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುತ್ತಿದ್ದರು ಈ ಸಂಬಂಧ ಎರಡು ಬಾರಿ ಕಿತ್ತಾಟ ನಡೆದಿದೆ ಕೊನೆಗೆ ಗಣೇಶ ಕೊಲೆಯಾದರೆ ಸಂಜಯ್ ಗ್ಯಾಂಗ್ ಜೈಲಿನಲ್ಲಿ ಮುದ್ದೆ ಮುರಿಯುವಂತೆಯಾಗಿದೆ.
ಇಲ್ಲಿ ನಿಗೂಢವಾಗಿರುವುದು ಸಂದೀಪ ಅಲಿಯಾಸ್ ಕತ್ತೆ ಸಂದೀಪನ ಪಾತ್ರದ ಬಗ್ಗೆ ಜನ ಸಂಶಯ ಪಡುತ್ತಿದ್ದಾರೆ.ಗಣೇಶನ ಆಪ್ತ ವಲಯದಲಿದ್ದ ಗಣೇಶನಂತೆ ಸ್ಟೈಲ್ ಮಾಡುತ್ತಿದ್ದ ಬಟ್ಟೆಯಿಂದ ಹಿಡಿದು ಬಂಗಾರದ ಚೈನ್ ಧರಿಸುವವರೆಗೆ ಅನುಕರಣೆ ಮಾಡುತ್ತಿದ್ದ ಕಳೆದ ಬಾರಿ ನಡೆದ ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾದಲ್ಲಿ ದುಡ್ಡು ಚೆಲ್ಲಿ ತನ್ನ ಕೈ ಚಳಕ ತೋರಿಸಿದ ವಿಡಿಯೋ ಹರಿದಾಡಿತ್ತು.ಕತ್ತೆಯ ಮೇಲೆ ಅಡಿಕೆ ಸಾಗಿಸುತ್ತಿದ್ದ ಈತ ಈ ಮಟ್ಟಕ್ಕೆ ಮೆರೆಯಲು ಗಣೇಶನ ಎಲ್ಲಾ ಪಾಪ ಕೃತ್ಯಗಳಲ್ಲಿ ಪಾಲುದಾರ ಎನ್ನುತ್ತಾರೆ.
ಇವರಿಗೆಲ್ಲಾ ರೋಲ್ ಮಾಡಲ್ ಬೆಂಗಳೂರಿನ ಶೂಟ್ ಗಿರಿ ಎನ್ನಲಾಗಿದೆ ಈತನನ್ನು ಕರೆಸಿ ಸನ್ಮಾನ ಮಾಡಿ ಕಳಿಸಲಾಗಿದೆ ಹೀಗಾಗಿ ಗಿರಿ ರೀತಿ ಗಣೇಶ ಮತ್ತು ಸಂದೀಪ ಡ್ರೆಸ್ ಮಾಡುತ್ತಿದ್ದರು ಎನ್ನಲಾಗಿದೆ. ಗಣೇಶ ಹಲವು ಹನಿ ಟ್ರ್ಯಾಪ್ ಮಾಡಿರುವ ಮತ್ತು ಹಲವರ ವಿಡಿಯೋ ಮಾಡಿ ಹಣಗಳಿಸಿರುವ ಬಗ್ಗೆ ಜನ ಮಾತನಾಡುತ್ತಿದ್ದಾರೆ.ಈ ಎಲ್ಲಾ ವಿಚಾರದಲ್ಲೂ ಸಂದೀಪ್ ಪಾಲುದಾರ ಎನ್ನಲಾಗಿದೆ.
ಗಣೇಶ ಕೊಲೆಯಾದ ದಿನ ಜೊತೆಗೆ ಇದ್ದವನು ಇದೇ ಸಂದೀಪ.ಕೊಲೆಯ ಪ್ರತ್ಯಕ್ಷ ಸಾಕ್ಷಿ. ಗಣೇಶನಿಗೆ ಹೊಡೆತ ಬಿದ್ದಾಗ ಈತ ಸುಮ್ಮನೆ ಇರುವುದು ಕೂಲ್ ಆಗಿ ನಡೆದು ಕೊಂಡು ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಇದು ಪೊಲೀಸರು ತನಿಖೆ ಮಾಡಲಿಲ್ಲಾವಾ ಅಥವಾ ಕಾಂಗ್ರೆಸ್ ನವರ ಒತ್ತಡ ಇರಬಹುದು ಎಂಬ ಅನುಮಾನ ಹುಟ್ಟಿಸುತ್ತಿದೆ.
ಸಂಜಯ್ ಕಡೆಯವರು ನೀಡಿರುವ ದೂರಿನಲ್ಲಿ ಕೊಲೆಯತ್ನದ ಮೊದಲ ಆರೋಪಿ ಸಂದೀಪ. ನಾಗಭೂಷಣ್ ಮತ್ತು ಸಂಜಯ್ ಗೆ ಮಾರಣಾಂತಿಕ ಪೆಟ್ಟು ಬಿದ್ದಿರುವುದು ಪೊಲೀಸರಿಗೆ ಗೊತ್ತಿಲ್ಲವೇ ಎಂದು ಜನ ಮಾತನಾಡುತ್ತಿದ್ದು ತನಿಖೆಯ ದಿಕ್ಕು ತಪ್ಪುತ್ತಿರುವುದರ ಹಿಂದೆ ಯಾರ ನೆರಳು ಇದೆ ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಕಳೆದ ನಾಲ್ಕಾರು ದಿನಗಳಿಂದ ಕತ್ತೆ ಸಂದೀಪ ಕೂಡ ನಾಪತ್ತೆಯಾಗಿರುವುದು ಯಾಕೆ? ನಿಗೂಢವಾಗಿ ಉಳಿದಿರುವ ಪ್ರಶ್ನೆಗಳಿಗೆ ಸದ್ಯದಲ್ಲಿ ತನಿಖೆಯ ಮೂಲಕ ಉತ್ತರ ನೀಡಬಹುದು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆಯ ಜಾಡು ಹಿಡಿಯ ಬಹುದು.
Why did the mournful donkey Sandeep escape?
Leave a comment