Home namma chikmagalur chikamagalur ಸಮಸ್ತರಿಗೆ ಮತದಾನದ ದಿವ್ಯಾಸ್ತ್ರ ವಿಸ್ತರಿಸಿದ ಚೇತನ ಅಂಬೇಡ್ಕರ್
chikamagalurHomeLatest Newsnamma chikmagalur

ಸಮಸ್ತರಿಗೆ ಮತದಾನದ ದಿವ್ಯಾಸ್ತ್ರ ವಿಸ್ತರಿಸಿದ ಚೇತನ ಅಂಬೇಡ್ಕರ್

Share
Share

ಚಿಕ್ಕಮಗಳೂರು: – ಶ್ರೀಮಂತರು, ತೆರಿಗೆ ಭರಿಸುವ ವ್ಯಕ್ತಿಗಳಿಗೆ ಸೀಮಿತವಾಗಿದ್ಧ ಮತ ದಾನದ ದಿವ್ಯಾಸ್ತ್ರವನ್ನು ದೇಶದ ಸರ್ವಜನಾಂಗಕ್ಕೂ ವಿಸ್ತರಿಸಿದ ಮಹಾಚೇತನ ಡಾ|| ಬಿ.ಆರ್.ಅಂಬೇಡ್ಕರ್ ಎಂದು ಕೆ.ಎಸ್.ಆರ್.ಟಿ.ಸಿ. ಎಸ್ಸಿ, ಎಸ್ಟಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯ ಕ್ಷ ಹಿರೇಮಗಳೂರು ರಾಮಚಂದ್ರ ಹೇಳಿದರು.

ನಗರದ ಕೆ.ಎಸ್.ಆರ್.ಟಿ.ಸಿ. ಎಸ್ಸಿ, ಎಸ್ಟಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಕಚೇ ರಿಯಲ್ಲಿ ಶನಿವಾರ ಭಾರತರತ್ನ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗ ವಾಗಿ ಮೌನಾಚರಣೆ ನಡೆಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸರ್ವರಿಗೂ ಸಮಾನ ಅವಕಾಶ ಮತ್ತು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೇ, ದೌರ್ಜನ್ಯಕ್ಕೆ ಒಳ ಗಾಗಿ ಕತ್ತಲೆಕೂಪದಲ್ಲಿ ನಲುಗಿ ಹೋಗಿದ್ಧ ಶೋಷಿತರನ್ನು ಸೂರ್ಯನ ಬೆಳಕಿನಂತೆ ದಾರಿತೋರಿದ ಅಪೂ ರ್ವ ಚೇತನ ಅಂಭೇಡ್ಕರ್. ಇವರ ಸನ್ಮಾರ್ಗದಲ್ಲಿ ಇಂದಿನ ಯುವಜನತೆ ಸಾಗುವ ಗುಣ ಮೈಗೂಡಿಸಿಕೊ ಳ್ಳಬೇಕು ಎಂದು ಸಲಹೆ ಮಾಡಿದರು.

ನೌಕರರ ಕುಟುಂಬ ಹಾಗೂ ಸಮಾಜದಲ್ಲಿ ಅಂಬೇಡ್ಕರ್ ವಿಚಾರಧಾರೆಯ ಬೀಜಭಿತ್ತಬೇಕು. ಅಲ್ಲದೇ ಸಂವಿಧಾನದ ಮಹತ್ವ ಹಾಗೂ ಅಂಬೇಡ್ಕರ್ ಜೀವನಚರಿತ್ರೆ ಅಧ್ಯಯನ ನಡೆಸುವ ಮೂಲಕ ಸಮಾಜದ ಒಳಿತಿಗಾಗಿ ಬಳಸಿಕೊಂಡರೆ ಮಾತ್ರ ಅಂಬೇಡ್ಕರ್ ತ್ಯಾಗ, ಬಲಿದಾನಕ್ಕೆ ನಿಜವಾದ ಅರ್ಥ ಬರಲಿದೆ ಎಂದರು.

ಸಮಾಜಬಾಂಧವರು, ನೌಕರರು ಪರಸ್ಪರ ಸ್ಪಂದಿಸುವ ಹಾಗೂ ಸಹಕರಿಸುವ ಗುಣ ಬೆಳೆಸಿಕೊಳ್ಳಬೇಕು. ಭಾರತದ ಅಪರೂಪ ಮಿನುಗು ನಕ್ಷತ್ರವಾದ ಅಂಭೇಡ್ಕರ್ ತತ್ವ, ಸಿದ್ದಾಂತಕ್ಕೆ ಎಲ್ಲೆಡೆ ಜಾಗೃತಗೊಳಿಸಬೇಕು. ಜಗತ್ತಿನಲ್ಲಿ ಸೂರ್ಯ, ಚಂದ್ರನ ಇರುವತನಕ ಅಂಬೇಡ್ಕರ್ ವಿಚಾರಧಾರೆ ಉಳಿಸಿ ಬೆಳೆಸುವ ಪಣ ತೊಡಬೇ ಕು ಎಂದು ಹೇಳಿದರು.

ಸಂಘದ ವಿಭಾಗದ ಅಧ್ಯಕ್ಷ ಉಮೇಶ್ ಮರ್ಲೆ ಮಾತನಾಡಿ ಶೋಷಿತರಿಗೆ ಜನ್ಮಕೊಟ್ಟವರು ಪಾಲಕರಾ ದರೆ, ಜೀವನದ ಮೌಲ್ಯ, ಪಾಠವನ್ನು ಬೋಧಿಸಿದವರು ಅಂಭೇಡ್ಕರ್. ಈ ಮಹಾನೀಯರ ಜೀವನವು ಪ್ರತಿ ಯೊಬ್ಬರಿಗೂ ಮಾದರಿ. ಆ ನಿಟ್ಟಿನಲ್ಲಿ ಸಂವಿಧಾನವನ್ನು ಸಂಪೂರ್ಣ ಅರಿತು ಬಾಲ್ಯದಿಂದಲೇ ಮಕ್ಕಳಿಗೆ ಬೋಧಿಸಿ ಅಂಬೇಡ್ಕರ್ ಋಣ ತೀರಿಸುವ ಕಾರ್ಯ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ವಿಭಾಗದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಕೃಷ್ಣಮೂರ್ತಿ, ಖಜಾಂಚಿ ಪ್ರಸನ್ನಕುಮಾರ್, ಉಪಾಧ್ಯಕ್ಷರಾದ ಡಿ.ಎಂ.ಹಾಲಪ್ಪ, ವೈ.ಆರ್.ದಿನೇಶ್‌ಕುಮಾರ್, ಪುಟ್ಟಸ್ವಾಮಿ ಕಾರ್ಯದ ರ್ಶಿ ರಮೇಶ್, ಮುಖಂಡರುಗಳಾದ ಕುಮಾರ್, ಉಪಸ್ಥಿತರಿದ್ದರು.

Ambedkar extended the right to vote to all

 

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...