Home namma chikmagalur chikamagalur ಕಾಲೇಜಿನ ಫಲಿತಾಂಶಕ್ಕೆ ಹೆಚ್ಚಿನ ಕಾಳಜಿ ವಹಿಸಲು ಶಾಸಕರು ಸೂಚನೆ
chikamagalurHomeLatest Newsnamma chikmagalur

ಕಾಲೇಜಿನ ಫಲಿತಾಂಶಕ್ಕೆ ಹೆಚ್ಚಿನ ಕಾಳಜಿ ವಹಿಸಲು ಶಾಸಕರು ಸೂಚನೆ

Share
Share

ಚಿಕ್ಕಮಗಳೂರು: ಜಿಲ್ಲೆಯ ಪಿಯು ಫಲಿತಾಂಶವು ಐದರಿಂದ ಒಂಭತ್ತನೇ ಸ್ಥಾನಕ್ಕೆ ಕುಸಿದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ವಿಚಾರವಾಗಿ ಸಂಬಂಧಿಸಿಧ ಅಧಿಕಾರಿಗಳು ಹೆಚ್ಚು ಕಾ ಳಜಿ ವಹಿಸಿ ಮರಳಿ ಐದನೇ ಸ್ಥಾನಕ್ಕೆ ಕೊಂಡೊಯ್ಯುಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ರಾಮನಹಳ್ಳಿ ಸಮೀಪದ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಾಮಾಣಿಕವಾಗಿ ಕೆಲಸ ಮಾಡುವ ನಂಬಿಕೆಯಿದೆ. ಮುಂದಿನ ಪರೀಕ್ಷಾ ಹಂತಕ್ಕೆ ವಿದ್ಯಾರ್ಥಿಗಳನ್ನು ಅಣಿಗೊ ಳಿಸಿ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಲು ಶ್ರಮಿವಹಿಸಬೇಕು ಎಂದು ಸೂಚಿಸಿದರು.

ನಗರದ ಬಸವನಹಳ್ಳಿ, ಜ್ಯೂನಿಯರ್ ಹಾಗೂ ಎಲ್‌ಬಿಎಸ್ ಪಿಯು ಕಾಲೇಜುಗಳು ಹೆಸರುವಾಸಿಯಿ ದೆ. ಸರ್ಕಾರವು ಪರಿಣಿತ ಶಿಕ್ಷಕರು, ಮಕ್ಕಳಿಗೆ ಮೂಲಸೌಕರ್ಯ ಒದಗಿಸುವುದು ಕರ್ತವ್ಯ. ಆ ನಿಟ್ಟಿನಲ್ಲಿ ಪಾ ಲಕರು ನಗರ ಸಮೀಪವಿರುವ ಕಾಲೇಜಿಗೆ ದೃತಿಗೆಡದೇ ಧೈರ್ಯದಿಂದ ಮಕ್ಕಳನ್ನು ದಾಖಲಾತಿ ಮಾಡಬೇ ಕು ಎಂದು ಮನವಿ ಮಾಡಿದರು.

ಪಿಯು ವ್ಯಾಸಂಗದ ಮಕ್ಕಳಿಗೆ ಭವಿಷ್ಯದ ದಿಕ್ಕನ್ನು ಬದಲಿಸುವ ಸಮಯವಿದು. ಆಸೆ, ಆಕರ್ಷಣೆ ಮ ತ್ತು ಕೆಟ್ಟ ಚಟಗಳಿಗೆ ಬಲಿಯಾಗದೇ ನಿರಂತರವಾಗಿ ಕಲಿಕೆಗೆ ಒತ್ತು ನೀಡಬೇಕು. ಜೀವನದಲ್ಲಿ ಒಳ್ಳೆಯ ಸಂ ಸ್ಕಾರ, ನಿಗಧಿತ ಗುರಿ ಹೊಂದಿದ ವಿದ್ಯಾರ್ಥಿ ಮಾತ್ರ ಮುಂದಿನ ದಿನಗಳಲ್ಲಿ ಕಂಡ ಕನಸನ್ನು ಈಡೇರಿಸಿಕೊ ಂಡು ಸಾಧನೆ ಮೆಟ್ಟಿಲೇರುತ್ತಾರೆ ಎಂದರು.

ಭಾರತೀಯ ಸಂಸ್ಕೃತಿ, ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಾಲಾ ಶಿಕ್ಷಣ ಆರಂಭಗೊ ಳ್ಳುವ ಮುನ್ನ ಋಷಿಮುನಿಗಳು ಮಕ್ಕಳಿಗೆ ನದಿದಂಡೆಯಲ್ಲಿ ಪಾಠವನ್ನು ಬೋಧಿಸಿದ್ದರು. ಆದ್ದರಿಂದ ಮಕ್ಕಳು ಸೈನಿಕ, ವೈದ್ಯ ಅಥವಾ ಜನಪ್ರತಿನಿಧಿ ಸೇರಿದಂತೆ ಆಸಕ್ತಿ ಹೊಂದಿರುವ ಗುರಿಯನ್ನಿರಿಸಿ ಭವಿಷ್ಯದ ಹೆಜ್ಜೆಯನ್ನು ಹಾಕಬೇಕು ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕೆ.ಮಂಜುಳಾ ಮಾತನಾಡಿ ವಿದ್ಯಾರ್ಥಿಗಳು ಮುಂದಿನ ವಿದ್ಯಾ ಭ್ಯಾಸವನ್ನು ಕಡಿಮೆ ದರದಲ್ಲಿ ಸೌಲಭ್ಯ ಕಲ್ಪಿಸುವ ಸರ್ಕಾರಿ ಕಾಲೇಜುಗಳಲ್ಲಿ ಪೂರೈಸಬೇಕು. ಹಿಂದಿನ ಅಥ ವಾ ಮುಂಬರುವ ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಲು ಪಾಲಕರು ಸರ್ಕಾರಿ ಕಾಲೇಜಿನ ವಿದ್ಯಾಭ್ಯಾಸದ ಅನುಬಂಧಕ್ಕೆ ಕಡಿವಾಣ ಹಾಕಬಾರದು ಎಂದು ಹೇಳಿದರು.

ಪ್ರಸ್ತುತ ಜಿಲ್ಲೆಯಲ್ಲಿ ೯೩ ಪಿಯು ಕಾಲೇಜುಗಳ ಪೈಕಿ ೬೦ ಕಾಲೇಜುಗಳಿಗೆ ಖುದ್ದು ಭೇಟಿ ನೀಡಿ ವಿದ್ಯಾ ರ್ಥಿಗಳ ಕುಂದುಕೊರತೆ ಆಲಿಸಲಾಗಿದೆ. ಸದ್ಯದಲ್ಲೇ ಪೂರ್ಣಪ್ರಮಾಣದ ಭೇಟಿ ಬಳಿಕ ಕಾಲೇಜುಗಳಿಗೆ ಅವ ಶ್ಯವಿರುವ ಸೌಲಭ್ಯಕ್ಕೆ ಸರ್ಕಾರದೊಂದಿಗೆ ಚರ್ಚಿಸಿ ಅನುದಾನ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.

ಸರ್ಕಾರಿ ಕಾಲೇಜು ಯಾವುದೇ ಖಾಸಗೀ ಶಾಲೆಗಿಂತ ಕಡಿಮೆಯಿಲ್ಲ. ಸರಿಸಮಾನಾಗಿ ಕಾರ್ಯನಿರ್ವ ಹಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಮೂಲ ಸವಲತ್ತು ಒದಗಿಸುವುದು ಸರ್ಕಾರದ ಜವಾಬ್ದಾರಿ. ಆ ನಿಟ್ಟಿನಲ್ಲಿ ಎಲ್‌ಬಿಎಸ್ ಕಾಲೇಜು ಪ್ರತಿವರ್ಷವು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದುತ್ತಿರುವು ದು ಹೆಮ್ಮೆಯ ಸಂಗತಿ ಎಂದರು.

ಎಲ್‌ಬಿಎಸ್ ಕಾಲೇಜು ಪ್ರಾಚಾರ್ಯೆ ಹೆಚ್.ಲೋಲಾಕ್ಷಿ ಮಾತನಾಡಿ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾ ಸ ಒದಗಿಸಿರುವ ಕಾಲೇಜಿಗೆ ನೂತನವಾಗಿ ಕೊಠಡಿಗಳ ನಿರ್ಮಾಣ ಮಾಡಿರುವುದು ಖುಷಿತಂದಿದೆ. ಜೊತೆ ಗೆ ಕಲೆ, ವಿಜ್ಞಾನ, ವಾಣಿಜ್ಯ ವಿಭಾಗ ಲ್ಯಾಬ್, ಗ್ರಂಥಾಲಯಕ್ಕೆ ಕೊಠಡಿಗಳ ಅವಶ್ಯಕತೆಯಿದ್ದು ಈ ಬಗ್ಗೆ ಶಾಸಕ ರು ಗಮನಹರಿಸಿ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಕೆ.ಬಿ.ಪ್ರತೀಪ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೀಗ ನಿರ್ಮಾಣ ಗೊಂಡಿರುವ ಕಾಲೇಜಿನ ಕೊಠಡಿ ಸುಮಾರು ೯೮ ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಉಳಿದಂತೆ ಕಾ ಲೇಜಿನ ಇತರೆ ಚಟುವಟಿಕೆಗಳಿಗೆ ಕೊಠಡಿಗಳು ಅವಶ್ಯವಿರುವ ಕಾರಣ ಶಾಸಕರು ಸಹಕರಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಮಂಜುಳಾ, ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಕಾಂಗ್ರೆಸ್ ಮುಖಂಡರುಗಳಾದ ಸಂತೋಷ್ ಲಕ್ಯಾ, ಪುನೀತ್, ಸುನೀಲ್ ಉಪಸ್ಥಿತರಿದ್ದರು. ಉಪನ್ಯಾಸಕ ಅಶ್ವತ್‌ಕುಮಾರ್ ಅರಸ್ ನಿರೂಪಿಸಿದರು. ಪ್ರಾಚಾರ್ಯೆ ಹೆಚ್.ಲೋಲಾಕ್ಷಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.

Advice to take extra care of college results

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...