Home namma chikmagalur ಸೇತುವೆ ಮಾಡಿ ಇಲ್ಲ ದೋಣಿ ಬಿಡಿ
namma chikmagalurchikamagalurHomeLatest News

ಸೇತುವೆ ಮಾಡಿ ಇಲ್ಲ ದೋಣಿ ಬಿಡಿ

Share
Share

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಿಳ್ಳೆನಹಳ್ಳಿ ಗ್ರಾಮದ ಸಾವಿರಾರು ಎಕರೆ ಜಮೀನು ತೋಟಗಳಿದ್ದು ಕಡೆ ಕಾಲುವೆ ರಸ್ತೆ ಬಳಸಿಕೊಂಡು ಹೋಗಬೇಕಾಗಿರುತ್ತದೆ.

ಈ ರಸ್ತೆಯು ಕಡೂರು ಚಿಕ್ಕಮಗಳೂರು ರಸ್ತೆ ಸೇರಿಕೊಂಡು ಶ್ರೀನಿವಾಸಪುರ ಮತ್ತು ಅಯ್ಯನಕೆರೆಗಳಿಗೆ ದಾರಿ ಆಗಿರುತ್ತದೆ ಮತ್ತು ಕುನ್ನಾಳು ಗ್ರಾಮಕ್ಕು ಸಂಪರ್ಕ ರಸ್ತೆ ಆಗಿರುತ್ತದೆ, ಈ ರಸ್ತೆಗೆ ಅಡ್ಡಲಾಗಿ ಹಾದು ಹೋಗುವ ವೇದಾ ನದಿಯ ಬಸವನಹಳ್ಳವನ್ನು ದಾಟಿ ಓಡಾಡುವುದು ತುಂಬಾ ಕಷ್ಟಕರವಾಗಿರುತ್ತದೆ.

ಏಕೆಂದರೆ ಸೆಪ್ಟಂಬರ್ ನಲ್ಲಿ ಬಿದ್ದ ಮಳೆಯಿಂದ ಹಳ್ಳದ ಮಣ್ಣು ಕೊಚ್ಚಿ ಮೊಣಕಾಲುದ್ದ ನೀರು ಹರಿದು ಹೋಗುತ್ತಿದ್ದು ಜನಜಾನುವಾರುಗಳು ದಾಟುವುದಕ್ಕೂ ಮತ್ತು ಬೈಕ್ ಮತ್ತು ಇತರ ವಾಹನಗಳು ದಾಟಿ ಹೋಗೋದು ದುಸ್ತರವಾಗಿರುತ್ತದೆ. ಹತ್ತಾರು ಬೈಕುಗಳು ವಾಹನಗಳು ಸೈಲೆನ್ಸರ್ ಮುಖಾಂತರ ನೀರು ತುಂಬಿ ಹಾಳಾಗಿ ಹೋಗಿರುತ್ತದೆ

ಸದ್ಯ ಅಡಿಕೆ ಕೊಯ್ಲು ನಡೆಯುತ್ತಿದ್ದು ರೈತಪಿಗಳು ಬಳಸಿಕೊಂಡು ಸಖರಾಯಪಟ್ಟಣ ರಸ್ತೆ ಮೂಲಕ ಜಮೀನುಗಳಿಗೆ ತೋಟಗಳಿಗೆ ಹೋಗುತ್ತಿದ್ದಾರೆ

ಆದ್ದರಿಂದ ಒಂದು ಸೇತುವೆ ಅವಶ್ಯಕತೆ ಇದ್ದು ತಕ್ಷಣ ಸಂಬಂಧಪಟ್ಟ ಇಲಾಖೆಯವರು ಕೈಗೊಳ್ಳಬೇಕೆಂದು ಆಗ್ರಹಿಸಿ ಪೇಪರ್ ದೋಣಿಯನ್ನು ತೇಲಿ ಬಿಡುವ ಮೂಲಕ ಸೇತುವೆ ಮಾಡಿ ಇಲ್ಲ ದೋಣಿ ಕೊಡಿ ಎಂಬ ಘೋಷಣೆಯೊಂದಿಗೆ ವಿನೂತನ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಮತ್ತು ಅಧ್ಯಕ್ಷರುಗಳಿಗೆ ಮನವಿ ಸಲ್ಲಿಸಲಾಯಿತು

Build a bridge or leave the boat.

Share

Leave a comment

Leave a Reply

Your email address will not be published. Required fields are marked *

Don't Miss

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ ಪಟ್ಟಣದ ಗುಣವಂತೆ ಗ್ರಾಮದಲ್ಲಿರುವ ಕಸ ಹಾಗೂ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ ವಿಮೆಗೆ ನೋಂದಣಿ ಹೆಚ್ಚು ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು....

Related Articles

ESA ಕರಡು ಅಧಿಸೂಚನೆ: ಭೌತಿಕ ಸರ್ವೆ ಬಳಿಕವೇ ಅಂತಿಮ ಅಧಿಸೂಚನೆಗೆ ಒತ್ತಾಯ

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಕುರಿತ 7ನೇ ಕರಡು ಅಧಿಸೂಚನೆಯಲ್ಲಿ ಚಿಕ್ಕಮಗಳೂರು...

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿ.ಪಿ.ಐ. ಪ್ರತಿಭಟನೆ

ಚಿಕ್ಕಮಗಳೂರು: ನಿವೇಶನ ರಹಿತ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ಒದಗಿಸುವುದು, ಎಸ್‌ಐಆರ್‌ ಪರಿಷ್ಕರಣೆಯಲ್ಲಿನ ಲೋಪ ಸರಿಪಡಿಸುವುದು...

ಚಲಿಸುತ್ತಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಏಕಾಏಕಿ ಬೆಂಕಿ

ಕಡೂರು : ಚಲಿಸುತ್ತಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ...

ಅಪಪ್ರಚಾರಕ್ಕೆ ನೊಂದ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಸಮೀಪ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೃತರನ್ನು...