Home Latest News ನಗರಸಭೆ ದುಡ್ಡಲ್ಲಿ ಪೆಟ್ರೋಲ್-ಡೀಸೆಲ್ ಹಾಕಿಸಿಕೊಂಡು ಬೆಂಗಳೂರಿಗೆ ಬರ್ತಿದ್ದ ಅಯೋಗ್ಯರು
Latest NewschikamagalurHomenamma chikmagalur

ನಗರಸಭೆ ದುಡ್ಡಲ್ಲಿ ಪೆಟ್ರೋಲ್-ಡೀಸೆಲ್ ಹಾಕಿಸಿಕೊಂಡು ಬೆಂಗಳೂರಿಗೆ ಬರ್ತಿದ್ದ ಅಯೋಗ್ಯರು

Share
Share

ಚಿಕ್ಕಮಗಳೂರು: ಮೆಡಿಕಲ್ ಕಾಲೇಜು ವಿಚಾರವಾಗಿ ಶಾಸಕ ತಮ್ಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ರಾಜಕೀಯ ಜಟಾಪಟಿ ಮುಂದುವರೆದಿದೆ. ಶಾಸಕ ತಮ್ಮಯ್ಯ ಆರೋಪಕ್ಕೆ ವಾಗ್ದಾಳಿ ನಡೆಸಿರುವ ಸಿ.ಟಿ. ರವಿ, ನಾನು ಯಾರ ಮೇಲೂ ಆರೋಪ ಮಾಡಿಲ್ಲ. ಅಹಂಕಾರದ ಮಾತಾಡೋದು ಬೇಡ, ನನಗೂ ಅಹಂಕಾರದ ಮಾತು ಬರುತ್ತೆ ಎಂದು ಶಾಸಕ ತಮ್ಮಯ್ಯಗೆ ಸಿ.ಟಿ. ರವಿ ಎಚ್ಚರಿಕೆ ನೀಡಿದ್ದಾರೆ.

ಅಹಂಕಾರದ ಮಾತುಗಳನ್ನಾಡುವ ಕೆಲವರು ಬ್ಯಾಗ್ ಇಟ್ಟುಕೊಂಡು ಓಡಾಡುತ್ತಿದ್ರು, ಬೋಕರ್ ಕೆಲಸ ಮಾಡುತ್ತಿದ್ದುದು ನನಗೆ ಗೊತ್ತು ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ. ನಗರಸಭೆ ದುಡ್ಡಲ್ಲಿ ಪೆಟ್ರೋಲ್-ಡೀಸೆಲ್ ಹಾಕಿಸಿಕೊಂಡು ಬೆಂಗಳೂರಿಗೆ ಬರ್ತಿದ್ದ ಅಯೋಗ್ಯರು ನನ್ನ ಬಗ್ಗೆ ಮಾತಾಡ್ತಾರೆ. ಅಧಿಕಾರಿಗಳ ಹತ್ರ ಖರ್ಚಿಗೆ ದುಡ್ಡು ಕೊಡು ಅಂತ ಕೇಳಿದಂತಹ ಅಯೋಗ್ಯರೆಲ್ಲ ನಾಲಿಗೆ ಹರಿಬಿಟ್ರೆ ಗೊತ್ತಿದೆ ಅವರ ಅಯೋಗ್ಯತನ ಎಂದು ಕಿಡಿಕಾರಿದರು.

ತಾವು ಜನರ ಸಮಸ್ಯೆಗಳನ್ನಿಟ್ಟುಕೊಂಡು ವಿಧಾನಸಭೆ ಒಳಗೂ ಮತ್ತು ಹೊರಗೂ ಮಾತನಾಡಿದ್ದೇನೆ. ವೈದ್ಯಕೀಯ ಕಾಲೇಜಿನ ಸಮಸ್ಯೆಗಳ ಬಗ್ಗೆ ಮಾತ್ರ ಗಮನ ಸೆಳೆದಿದ್ದೇನೆ, ತಾವು 20 ವರ್ಷ ಶಾಸಕನಾದ್ರೂ ಅಧಿಕಾರ ಮದ ತಮಗಾಗಲಿ ನನ್ನ ಮಕ್ಕಳಿಗಾಗಲಿ ಏರಿಲ್ಲ. ಯಾರೋ ಒಬ್ಬ ಅಯೋಗ್ಯ ಕೆಲಸ ಮಾಡಿಲ್ಲ ಅಂತ ಹೇಳಿಲ್ಲ, ಕಮಿಷನ್ ಹೊಡೆಯೋದಕ್ಕೆ ಹೋಗ್ತಾ ಇದ್ದಾನೆ ಅಂತ ಏನಾದ್ರೂ ಆರೋಪ ಮಾಡಿದ್ದ? ಕೇವಲ ಸಮಸ್ಯೆ ಇದೆ ಅಂತ ಹೇಳಿದ್ದೆ ಎಂದು ತಿರುಗೇಟು ನೀಡಿದ್ರು.

ಮೆಡಿಕಲ್‌ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಲು ದಶಕಗಳ ಕಾಲ ಬೇಡಾಡಿದ್ದೇನೆ ಎಂದ ಸಿ.ಟಿ. ರವಿ, ಇದು ಒಂದು ಅಥವಾ ಎರಡು ದಿನದ ಕೆಲಸವಲ್ಲ ನಾಲ್ಕು ಟ್ಯಾಂಕರ್ ನೀರನ್ನ ಜಾಸ್ತಿ ಕೊಟ್ಟು ಆ ಮಕ್ಕಳಿಗೆ ನೀರು ಕೊಡೋ ಯೋಗ್ಯತೆ ಇಲ್ಲ ಇವರಿಗೆ ಎಂದು ಸಿಟ್ಟಾದ್ರು.

ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಹಳೆಯದಕ್ಕೆ ಮಾತನಾಡುವುದು, ಕುಣಿಲಾರದವರು ನೆಲ ಡೊಂಕು ಅಂದ ಹಾಗಿದೆ. ಇವತ್ತು ಆರೋಪ ಮಾಡುತ್ತಿರುವವರು ಸಿ.ಟಿ. ರವಿಗೆ ಜೈ ಅಂದವರು ಎಂದು ಟೀಕಿಸಿದರು. ಮೆಡಿಕಲ್ ಕಾಲೇಜು ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ಎಲ್ಲಾ ಮಕ್ಕಳು ನಮ್ಮ ಮಕ್ಕಳು ತರಾನೇ ಅನ್ನುವಂತ ಭಾವನೆ ಇರೋ ತನಕ ತಂದಿದ್ದೀನಿ. ನನ್ನ ಮಕ್ಕಳ ಬಗ್ಗೆ ಮಾತ್ರ ಆಗಿದ್ರೆ ನಾನು ಅಲ್ಲಿಗೆ ಹೋಗಿ ಆ ಕಷ್ಟ ನೋಡಬೇಕಾದ ಅವಶ್ಯಕತೆನೇ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ್ರು.

Unworthy people were coming to Bangalore by buying petrol and diesel with the municipal money.

Share

Leave a comment

Leave a Reply

Your email address will not be published. Required fields are marked *

Don't Miss

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ ಪಟ್ಟಣದ ಗುಣವಂತೆ ಗ್ರಾಮದಲ್ಲಿರುವ ಕಸ ಹಾಗೂ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ ವಿಮೆಗೆ ನೋಂದಣಿ ಹೆಚ್ಚು ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು....

Related Articles

ESA ಕರಡು ಅಧಿಸೂಚನೆ: ಭೌತಿಕ ಸರ್ವೆ ಬಳಿಕವೇ ಅಂತಿಮ ಅಧಿಸೂಚನೆಗೆ ಒತ್ತಾಯ

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಕುರಿತ 7ನೇ ಕರಡು ಅಧಿಸೂಚನೆಯಲ್ಲಿ ಚಿಕ್ಕಮಗಳೂರು...

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿ.ಪಿ.ಐ. ಪ್ರತಿಭಟನೆ

ಚಿಕ್ಕಮಗಳೂರು: ನಿವೇಶನ ರಹಿತ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ಒದಗಿಸುವುದು, ಎಸ್‌ಐಆರ್‌ ಪರಿಷ್ಕರಣೆಯಲ್ಲಿನ ಲೋಪ ಸರಿಪಡಿಸುವುದು...

ಚಲಿಸುತ್ತಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಏಕಾಏಕಿ ಬೆಂಕಿ

ಕಡೂರು : ಚಲಿಸುತ್ತಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ...

ಅಪಪ್ರಚಾರಕ್ಕೆ ನೊಂದ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಸಮೀಪ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೃತರನ್ನು...