Home namma chikmagalur ಅಂಗಡಿಗೆ ನುಗ್ಗಿದ ಕಳ್ಳ 2.50ಲಕ್ಷ ರೂ. ಹಣ ಕಳವು
namma chikmagalurchikamagalurHomeLatest News

ಅಂಗಡಿಗೆ ನುಗ್ಗಿದ ಕಳ್ಳ 2.50ಲಕ್ಷ ರೂ. ಹಣ ಕಳವು

Share
Share

ಚಿಕ್ಕಮಗಳೂರು: ಹಗಲುವೇಳೆ ಅಂಗಡಿಗೆ ನುಗ್ಗಿದ ಕಳ್ಳ 2.50ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ನರಸಿಂಹರಾಜಪುರ ಪಟ್ಟಣದಲ್ಲಿ ನಡೆದಿದೆ.

ಕಳ್ಳತನದ ಕೃತ್ಯ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನರಸಿಂಹರಾಜಪುರ ಪಟ್ಟಣದ ಟಿನು ಎಂಬುವವರಿಗೆ ಸೇರಿದ ರಬ್ಬರ್ ಶೀಟ್ ಅಂಗಡಿಯಲ್ಲಿ ಕಳ್ಳತನವಾಗಿದ್ದು, ಅಂಗಡಿ ಮಾಲೀಕ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಳ್ಳತನ ನಡೆಸಲಾಗಿದೆ.
ಚಾಣಾಕ್ಷತನದಿಂದ ಅಂಗಡಿ ಒಳಗೆ ಪ್ರದೇಶಿ ಯಾರಿಗೂ ಅನುಮಾನ ಬಾರದಂತೆ ಕ್ಯಾಶ್‌ ಟೇಬಲ್‌ನಲ್ಲಿದ್ದ 2.50 ಲಕ್ಷ ರೂ. ಕದ್ದು ಪರಾರಿಯಾಗಿದ್ದಾನೆ.
ಅಂಗಡಿ ಮಾಲೀಕ ಊಟ ಮುಗಿಸಿ ಅಂಗಡಿಗೆ ಬಂದಾಗ ಕಳ್ಳತನವಾಗಿರುವುದು ತಿಳಿದು ನರಸಿಂಹರಾಜಪುರ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.
Thief breaks into shop- steals Rs 2.50 lakh
Share

Leave a comment

Leave a Reply

Your email address will not be published. Required fields are marked *

Don't Miss

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ ಪಟ್ಟಣದ ಗುಣವಂತೆ ಗ್ರಾಮದಲ್ಲಿರುವ ಕಸ ಹಾಗೂ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ ವಿಮೆಗೆ ನೋಂದಣಿ ಹೆಚ್ಚು ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು....

Related Articles

ESA ಕರಡು ಅಧಿಸೂಚನೆ: ಭೌತಿಕ ಸರ್ವೆ ಬಳಿಕವೇ ಅಂತಿಮ ಅಧಿಸೂಚನೆಗೆ ಒತ್ತಾಯ

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಕುರಿತ 7ನೇ ಕರಡು ಅಧಿಸೂಚನೆಯಲ್ಲಿ ಚಿಕ್ಕಮಗಳೂರು...

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿ.ಪಿ.ಐ. ಪ್ರತಿಭಟನೆ

ಚಿಕ್ಕಮಗಳೂರು: ನಿವೇಶನ ರಹಿತ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ಒದಗಿಸುವುದು, ಎಸ್‌ಐಆರ್‌ ಪರಿಷ್ಕರಣೆಯಲ್ಲಿನ ಲೋಪ ಸರಿಪಡಿಸುವುದು...

ಚಲಿಸುತ್ತಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಏಕಾಏಕಿ ಬೆಂಕಿ

ಕಡೂರು : ಚಲಿಸುತ್ತಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ...

ಅಪಪ್ರಚಾರಕ್ಕೆ ನೊಂದ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಸಮೀಪ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೃತರನ್ನು...