ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರು,ಐದು ವಿವಿಧ ನಿಗಮಗಳ ಅಧ್ಯಕ್ಷರು ಕೈ,ಕೈಗೆ ಸಿಗುವ ಮುಖಂಡರು ಕಡಿದು ಗುಡ್ಡೇ ಹಾಕುತ್ತಿದ್ದವೆ ಎಂದು ಕೋಟಿ,ಕೋಟಿ ಲೆಕ್ಕ ಹೇಳುತ್ತಿದ್ದಾರೆ.ಆದರೆ ರಸ್ತೆಯಲ್ಲಿ ಗುಂಡಿ ಹುಡುಕುವ ಬದಲು ಗುಂಡಿಗಳಲ್ಲಿ ರಸ್ತೆ ಹುಡುಕ ಬೇಕಾದ ದುಸ್ಥಿತಿ ಉಂಟಾಗಿದೆ.ಕನಿಷ್ಟ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ ಎಂದು ಜನ ಹಾದಿ,ಬೀದಿಯಲ್ಲಿ ಹಿಡಿ ಶಾಪ ಹಾಕುತ್ತಿದ್ದಾರೆ.
ಕಾಂಗ್ರೆಸ್ ಶಾಸಕರುಗಳ ಬಗ್ಗೆ ಕಾಂಗ್ರೆಸ್ ನವರೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಮುಂದೆ ಚುನಾವಣೆ ಬರಲಿ ಕಾದು ನೋಡಿ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ತಂದಿರುವುದನ್ನು ಹೇಳುವುದು ಬಿಟ್ಟರೆ ಸ್ಪಷ್ಟವಾಗಿ ಎರುಡು ಗುಂಪುಗಳಾಗಿ ಕುರ್ಚಿಗಾಗಿ ದಿನ ಬೆಳಗಾದರೆ ಕಿತ್ತಾಡವುದು ಅವರ ಕಾಲು ಇವರು,ಇವರ ಕಾಲು ಅವರು ಜಗ್ಗಾಡುತ್ತಿದ್ದಾರೆ.
ಚಿಕ್ಕಮಗಳೂರು ಕಾಂಗ್ರೆಸ್ ಇದೆಯೋ,ಇಲ್ಲವೋ ಎಂದು ಹುಡುಕ ಬೇಕಾಗಿದೆ ಎಂದು ಪ್ರಮುಖ ಮುಖಂಡ ಹೇಳುವುದು ನೋಡಿದರೆ ಈಗ ನಡೆಯುತ್ತಿರುವ ಚುನಾವಣಾ ಫಲಿತಾಂಶ ಮುಂದಿನ ದಿಕ್ಸೂಚಿ ಎನ್ನುತ್ತಾರೆ. ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದಳದವರು ವಿಜಯದ ನಗೆ ಬೀರಿದರೆ ಕಾಂಗ್ರೆಸ್ ಚಿತ್ ಆಗಿ ಮಲಗಿದೆ.
ಮೂಡಿಗೆರೆ ಕ್ಷೇತ್ರದಲ್ಲಿ ನಡೆದ ಟಿ,ಎ,ಪಿ,ಸಿ,ಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿಲ್ಲ.ಚಿಕ್ಕಮಗಳೂರು ಜಿಲ್ಲೆಯ ಸಹಕಾರ ಯೂನಿಯನ್ ನಲ್ಲೂ ಕೂಡ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿಲ್ಲಾ.ಕಡೂರು ಪಿ,ಎಲ್,ಡಿ ಬ್ಯಾಂಕ್ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದಿದ್ದಾರೆ. ಇನ್ನೂ ಉಳಿದ ಹತ್ತು ಸ್ಥಾನಗಳನ್ನು ಬಿಜೆಪಿ ದಳ ಮೈತ್ರಿ ಗೆದ್ದುಕೊಂಡಿದೆ.ತರೀಕೆರೆ ಕ್ಷೇತ್ರದಲ್ಲಿ ಅಜ್ಜಂಪುರ ಪಟ್ಟಣ ಪಂಚಾಯತಿಯಲ್ಲಿ ತೀವ್ರ ಪೈಪೋಟಿ ನಡೆದು ಕಾಂಗ್ರೆಸ್ ಐದು ಸ್ಥಾನ ಗೆದ್ದರೆ ಬಿಜೆಪಿ ಆರು ಸ್ಥಾನ ಪಡೆದು ಅಧಿಕಾರದ ಗದ್ದುಗೆ ಏರಿದೆ.
ಇದಕ್ಕೆಲ್ಲ ಶಾಸಕರು ಹೊಣೆ ಎಂದು ಕಾಂಗ್ರೆಸ್ ನವರೇ ಹೇಳುವುದು ನೋಡಿದರೆ ಮುಂದೆ ಐತಿ ಮಾರಿ ಹಬ್ಬ ಎನ್ನಿಸುತ್ತಿದೆ. ಬಿಹಾರದ ಚುನಾವಣಾ ಫಲಿತಾಂಶ ನೋಡಿಯಾದರು ಎಚ್ಚರಿಕೆ ವಹಿಸದಿದ್ದರೆ ಬಿಜೆಪಿ ದಳದ ಮೈತ್ರಿ ಹಬ್ಬ ಆಚರಿಸುವುದು ಖಚಿತ.ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಾಣಿಸಿ ಅಧಿಕಾರ ಮದ,ಹಣ ಮದ,ಲಿಕ್ಕರ್ ಮದ,ಕ್ವಾರಿ ಕಾರ್ಯಾಚರಣೆ ಕುಟುಂಬ ದಾಹ ನೋಡಿ ಜನ ರೋಸಿ ಹೋಗಿದ್ದಾರೆ.
Congress loses in cooperative elections
Leave a comment