Home namma chikmagalur ಮಕ್ಕಳನ್ನು ಸತ್ಪ್ರಜೆಗಳಾಗಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ
namma chikmagalurchikamagalurHomeLatest News

ಮಕ್ಕಳನ್ನು ಸತ್ಪ್ರಜೆಗಳಾಗಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ

Share
Share

ಚಿಕ್ಕಮಗಳೂರು:  ವಿದ್ಯಾರ್ಥಿದೆಸೆಯಲ್ಲಿ ಶಿಸ್ತು, ಜವಾಬ್ದಾರಿ, ಸೇವಾ ಮನೋಭಾವ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾಳಜಿ ತುಂಬಿ, ಸಮಾಜದಲ್ಲಿ ಮಕ್ಕಳನ್ನು ಸತ್ರ್ಪಜೆಗಳಾಗಿಸುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಸೋಮವಾರ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆಯೋಜಿಸಿದ್ಧ ಎ. ಎಂ.ನಿಂಗೇಗೌಡ ಸ್ಮಾರಕ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದ ಕಟ್ಟಡ ಸಮುಚ್ಚಯದ ಭೂಮಿ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಜಗತ್ತಿನ ಸುಮಾರು ೨೦೦ ದೇಶಗಳಲ್ಲಿ ಸ್ಕೌಟ್ಸ್ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಇದೇ ರೀತಿ ರಾಜ್ಯದ ಲ್ಲೂ ಸಿಂಧ್ಯಾರವರ ನೇತೃತ್ವದಲ್ಲಿ ಅಭೂತವಾಗಿ ಕಾರ್ಯಚಟುವಟಿಕೆ ನಡೆಸಲಾಗುತ್ತಿರುವುದು ಹೆಮ್ಮೆಯ ಸಂ ಗತಿ ಎಂದ ಅವರು ತುರ್ತು ಅಥವಾ ಅವಘಡ ವೇಳೆಯಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಿರುವ ಸಂಸ್ಥೆ ಸಮಾಜಮುಖಿ ಚಿಂತನೆ ಹೊಂದಿದೆ ಎಂದರು.

ಜಿಲ್ಲೆಯ ಸ್ಕೌಟ್ಸ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಟೋಯೊಟಾ ಕಂಪನಿಯು ತನ್ನ ಸಿಎಸ್‌ಆರ್ ನಿಧಿ ಯಿಂದ ತರಬೇತಿ ಕೇಂದ್ರ ನಿರ್ಮಿಸಿರುವುದು ಖುಷಿಯ ವಿಷಯ. ಅದರಂತೆ ಜಿಲ್ಲಾ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮಕ್ಕಳಲ್ಲಿ ರಾಷ್ಟ್ರಪ್ರೇಮ, ಸೇವಾಚಟುವಟಿಕೆಗಳ ಬಗ್ಗೆ ಮನದಟ್ಟು ಮಾಡಿ ಪ್ರೋತ್ಸಾಹಿಸು ತ್ತಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಜೀವನದ ಶಿಕ್ಷಣ, ಸಂಸ್ಕಾರದ ಗು ಣವನ್ನು ಸ್ಕೌಟ್ಸ್ ಸಂಸ್ಥೆ ಅರಿವು ಮೂಡಿಸುತ್ತಿದೆ. ಮನೆಗೆ ಬೆಳಕು, ಗುರುಹಿರಿಯರು, ಪಾಲಕರಿಗೆ ಹಾಗೂ ನಾಡು ನುಡಿಯ ಬಗ್ಗೆ ಗೌರವಿಸುವ ಪರಿಪಾಠವನ್ನು ಬೋಧಿಸಿ ಸಮಾಜದ ಒಳಿತಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಭವಿಷ್ಯದಲ್ಲಿ ಮಕ್ಕಳು ಸಾರ್ಥಕ ಜೀವನ ಹಾಗೂ ಶಿಸ್ತುಬದ್ಧ ಬದುಕಿಗಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹ ಕಾರಿ. ಮೊದಲೆಲ್ಲಾ ಅವಕಾಶ ಬಹಳಷ್ಟು ಕಡಿಮೆಯಿತ್ತು. ಸೂಕ್ತ ವ್ಯವಸ್ಥೆಯ ಸೌಲಭ್ಯವಿರಲಿಲ್ಲ. ಇದೀಗ ತರ ಬೇತಿ, ಕಾರ್ಯಾಗಾರ ಇನ್ನಿತರೆ ಚಟುವಟಿಕೆಗಳು ಉತ್ತಮ ಕಟ್ಟಡಗಳಲ್ಲಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಬೋಧಿ ಸುತ್ತಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ ಸ್ಕೌಟ್ಸ್ ತರ ಬೇತಿಗಳನ್ನು ಕಾಲತಕ್ಕಂತೆ ಬದಲಾವಣೆಗೊಳಿಸಿ, ಮೂಲತತ್ವವನ್ನು ಉಳಿಸಬೇಕು. ಹಾಗಾಗಿ ವಿಶೇಷವಾಗಿ ತರಬೇತಿಯಲ್ಲಿ ಪರಿಸರ ರಾಯಭಾರಿಗಳಾಗಿಸುವ ಕಾರ್ಯ ಮಾಡುತ್ತಿದೆ. ಮಕ್ಕಳು ಕೇವಲ ಪುಸ್ತಕದ ಓದಿ ನಲ್ಲಿ ಪರಿಸರ ಕಾಳಜಿ ತೋರದೇ ನೈಜ ಪರಿಸರ ಪ್ರೇಮಿಗಳಾಗಬೇಕು ಎಂದು ತಿಳಿಸಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಿ ನೂರಾರು ಮಕ್ಕಳಿಗೆ ತರಬೇತಿ ಜೊತೆಗೆ ಉದ್ಯೋಗಕ್ಕೆ ಅನುಕೂಲವಾಗಲು ಶ್ರಮಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ನಾಲ್ಕು ಸಾವಿರ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು ಪ್ರತಿ ವಿದ್ಯಾರ್ಥಿಗೂ ತರಬೇತಿ ಜೊತೆಗೆ ಸೇವಾಭತ್ಯೆಯನ್ನು ವಿತ ರಿಸಲಾಗುತ್ತದೆ ಎಂದು ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂ ಸ್ಥೆ ೧೯೦೭ರಲ್ಲಿ ಇಂಗ್ಲೇಡ್ ದೇಶದಲ್ಲಿ ಉಗಮಿಸಿತು. ೧೯೦೭ರಲ್ಲಿ ಭಾರತದಲ್ಲಿ ಸ್ಥಾಪನೆಗೊಂಡು ವಿಸ್ತಾರಗೊಂ ಡಿತು. ನಂತರ ೧೯೭೫ರಲ್ಲಿ ೧.೨೦ ಎಕರೆ ಪ್ರದೇಶವನ್ನು ಜಿಲ್ಲಾ ಸಂಸ್ಥೆಗೆ ಸರ್ಕಾರ ಕಲ್ಪಿಸಿಕೊಟ್ಟಿದ್ದು. ಇದೀಗ ಟೋಯೋಟಾ ಕಂಪನಿ ಸಿಎಸ್‌ಆರ್ ನಿಧಿಯಿಂದ ಕಟ್ಟಡ ಪೂರ್ಣಗೊಳಿಸಲು ಮುಂದಾಗುತ್ತಿದೆ ಎಂದರು.

ಟೋಯೋಟಾ ಕಂಪನಿ ಉದ್ಯಮದೊಂದಿಗೆ ತನ್ನ ಸಿಎಸ್‌ಆರ್ ನಿಧಿಯಿಂದ ಅನೇಕ ಶಾಲೆ, ಸಮು ದಾಯ ಭವನಗಳಿಗೆ ಸಹಾಯಸ್ತ ಚಾಚಿ ಅಭಿವೃದ್ದಿಗೊಳಿಸಿದೆ. ಪಿ.ಜಿ.ಆರ್.ಸಿಂಧ್ಯಾ ಅವರ ನೇತೃತ್ವದಲ್ಲಿ ೧೧೦ ಕೋಟಿ ರೂಗಳ ಅನುದಾನವನ್ನು ರಾಜ್ಯಕ್ಕೆ ತಂದು ಸ್ಕೌಟ್ಸ್ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ದಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಟೋಯೋಟಾ ಕಂಪನಿ ಎಕ್ಸ್ಟ್‌ರ್ನಲ್ ಅಫೈರ್‍ಸ್ ಉಪಾಧ್ಯಕ್ಷ ಎ.ರಮೇಶ್‌ರಾವ್, ಜನರಲ್ ಮ್ಯಾನೇಜರ್‌ಗಳಾದ ಆರ್.ರೋ ಷನ್, ಹೆಚ್.ಜೆ.ಕಿರಣ್, ಸಿಎಸ್‌ಆರ್ ಮ್ಯಾನೇಜರ್ ಈಶ್ವರ್‌ಬಾಬು, ಜಿಲ್ಲಾ ಆಯುಕ್ತ ಡಿ.ಎಸ್.ಮಮತ, ಕೋಶಾಧಿಕಾರಿ ಕೆ.ಎಸ್.ರ ಮೇಶ್, ಕಾರ್ಯದರ್ಶಿ ನೀಲಾಕಂಠಾಚಾರ್ಯ, ತರಬೇತಿ ಆಯುಕ್ತರಾದ ಸಿ.ಸಂಧ್ಯಾರಾಣಿ, ಎಂ.ವಿ.ಪ್ರತಿಮಾ , ಸಂಘಟಕ ಬಿ.ಎನ್.ಕಿರಣ್‌ಕುಮಾರ್ ಮತ್ತಿತರರಿದ್ದರು.

Scouts and Guides an organization that trains children to be good citizens

Share

Leave a comment

Leave a Reply

Your email address will not be published. Required fields are marked *

Don't Miss

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ

ಕೊಪ್ಪ: ತಾಲೂಕಿನ ಕುಂಚೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೇವಿಗೆ ಅಲಂಕರಿಸಿದ್ದ ಚಿನ್ನಾಭರಣ, ಬೆಳ್ಳಿಯ ವಿಗ್ರಹಗಳು ಹಾಗೂ ಕಾಣಿಕೆ ಹುಂಡಿಯ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ...

ನೂತನ ಚಿಕ್ಕಮಗಳೂರು ಜಿಪಂ ಸಿಇಒ ಮೀನಾಕ್ಷಿ ಆರ್ಯ ನೇಮಕ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎಚ್.ಎಸ್. ಕೀರ್ತನಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ ಅವರನ್ನು ನೇಮಿಸಿ ರಾಜ್ಯ ಸರ್ಕಾರ...

Related Articles

ಏಷ್ಯನ್ ಗೇಮ್ಸ್‌ನಲ್ಲಿಶಾನುವಳ್ಳಿಯ ಎಸ್.ಎಸ್. ಸ್ನೇಹಾಗೆ ಕಂಚು

ಚಿಕ್ಕಮಗಳೂರು: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಮಿಶ್ರ 4×100 ಮೀಟರ್ ರಿಲೇ...

ಮಾಣಿಕ್ಯಾಧಾರ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಜಲಪಾತದ ಬಳಿ ಪ್ರವಾಸಿಗರ ಅತಿರೇಕದ...

ಮಹಾತ್ಮಗಾಂಧೀಜಿ-ಲಾಲ್ ಬಹದ್ದೂರ್ ಶಾಸ್ತ್ರೀಜಿ ಮಾರ್ಗದರ್ಶನ ಇಂದಿಗೂ ಪ್ರಸ್ತುತ

ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಸಂದೇಶಗಳು ಮತ್ತು...

ರಸ್ತೆಯ ಮೇಲೆ ಹೆಡ್‌ಲೈಟ್ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ

ಚಿಕ್ಕಮಗಳೂರು: ದಟ್ಟ ಅರಣ್ಯ, ಕಾಫಿ ತೋಟಗಳ ನಡುವೆ ಸಾಗುವ ಕಡಿದಾದ ತಿರುವುಗಳು, ಹೊಂಡ-ಗುಂಡಿಗಳ ರಸ್ತೆಯ ಮೇಲೆ...