Home namma chikmagalur ಗಿರಿಭಾಗಕ್ಕೆ ಪ್ರವೇಶ ಶುಲ್ಕ-ಪಾಸ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
namma chikmagalurchikamagalurHomeLatest News

ಗಿರಿಭಾಗಕ್ಕೆ ಪ್ರವೇಶ ಶುಲ್ಕ-ಪಾಸ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

Share
Share

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮತ್ತು ಐ.ಡಿ.ಪೀಠ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿ ವಾಸಿಗಳಿಗೆ ಪ್ರವೇಶ ಶುಲ್ಕ ಮತ್ತು ಪಾಸ್ ವಿತರಿಸುವ ನಿರ್ಧಾರ ಖಂಡಿಸಿ ಅತ್ತಿಗುಂಡಿ, ಮಹಲ್, ಬಿಸಗ್ನಿ ಮಠ, ಕೆಸವಿನಮನೆ, ಪಂಡರವಳ್ಳಿ, ಉಕುಡ, ಚಂದ್ರಗಿರಿ, ಗೌರಿಶಂಕರದ ನೂರಾರು ಗ್ರಾಮಸ್ಥರು ಶುಕ್ರವಾರ ಅತ್ತಿಗುಂಡಿ ಗ್ರಾಮದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ವಾಹನ ಚಾಲಕರು, ವ್ಯಾಪಾರಿಗಳು ಸ್ವಯಂಪ್ರೇರಿತ ಬಂದ್‌ಗೊಳಿಸಿದರು. ನಂತರ ಗ್ರಾಮ ಪಂಚಾಯಿತಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಪ್ರವೇಶ ಶುಲ್ಕ ಮತ್ತು ಪಾಸ್ ಕೊಡುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಪಿಡಿಓ ಮಂಜುನಾಥ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಗ್ರಾಮಸ್ಥರು ಮಾತನಾಡಿ ಪಾಸ್ ವಿತರಿಸುವ ಸಂಬಂಧ ಗಿರಿಪ್ರದೇಶ ನಿವಾಸಿಗಳ ಜೊತೆ ಚರ್ಚಿಸಿ ನಂತರ ನಿರ್ಣಯ ಕೈಗೊಳ್ಳುವ ಬದಲು, ಏಕಾಏಕಿ ಪಾಸ್ ವ್ಯವಸ್ಥೆ ಜಾರಿಗೆ ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಗ್ರಾಮಾಡಳಿತವು ನಿವಾಸಿಗಳ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರೂ ಜಿಲ್ಲಾಧಿಕಾರಿಗಳು ದಿಡೀರನೇ ಸ್ಥಳೀಯರಿಗೆ ಪಾಸ್ ಕಡ್ಡಾಯಗೊಳಿಸುವುದು ನ್ಯಾಯಸಮಂಜಸವಲ್ಲ ಎಂದು ಹೇಳಿದರು.

ಎನ್‌ಎಂಡಿಸಿ ಚೆಕ್‌ಪೋಸ್ಟ್‌ನಿಂದ ಮುಂದೆ ಸುಮಾರು ಎರಡು ಸಾವಿರ ಕುಟುಂಬಗಳ ಪೈಕಿ ಏಳು ಸಾವಿರ ಮಂದಿ ವಾಸಿಸುತ್ತಿದ್ದಾರೆ. ಮದುವೆ ಕಾರ್ಯ ಅಥವಾ ಸಾವು-ನೋವುಗಳು ಸಂಭವಿಸಿದರೆ ದೂರದ ಊರಿನಿಂದ ಬರುವಂಥ ಬಂಧುಗಳು, ಸ್ನೇಹಿತರು ಪಾಸ್‌ನಲ್ಲಿಯೇ ಆಗಮಿಸಬೇಕೇ ಎಂದು ಪ್ರಶ್ನಿಸಿದ ಅವ ರು ಆ ರೀತಿಯ ನಿರ್ಣಯ ಕೈಗೊಂಡಲ್ಲಿ ಯಾವುದೇ ಕಾರ್ಯ ನಡೆದರೂ ಚೆಕ್‌ಪೋಸ್ಟ್‌ನಲ್ಲಿ ಕುಟುಂಬಸ್ಥ ರು ತಿಕಾಣಿ ಹೂಡಬೇಕಾಗುತ್ತದೆ ಎಂದರು.

ಗಿರಿಭಾಗಕ್ಕೆ ದಿನಕ್ಕೆ ಒಂದು ಬಸ್ಸಿನ ವ್ಯವಸ್ಥೆಯಿದ್ದು ಈ ಹಿಂದಿನಂತೆ ಖಾಸಗೀ ಬಸ್‌ಗಳ ಸಂಚಾರವಿಲ್ಲ. ಇದನ್ನು ಹೊರತುಪಡಿಸಿ ಉಳಿದಂತ ಗ್ರಾಮಗಳಿಗೆ ಬಹುತೇಕ ಸ್ವಂತ ವಾಹನಗಳಲ್ಲಿ ತೆರಳಬೇಕಾಗಿದೆ. ಜೊ ತೆಗೆ ಈ ವ್ಯಾಪ್ತಿಯಲ್ಲಿ ತೋಟ, ಕಟ್ಟಡ ಅಥವಾ ಇನ್ನಿತರೆ ಕೆಲಸಗಳಿಗೆ ತೆರಳಲು ಸ್ಥಳೀಯರಿಗೆ ಪಾಸ್ ಕಡ್ಡಾ ಯವಾದರೆ ಜೀವನ ರೂಪಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ ಎಂದು ಹೇಳಿದರು.

ಪರಿಸರ ಕಾಳಜಿ ದೃಷ್ಟಿಯಿಂದ ಜಿಲ್ಲಾಡಳಿತ ಆದೇಶದಂತೆ ಗಿರಿಭಾಗದ ಅಂಗಡಿಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ಮಾರಾಟಕ್ಕೆ ಕಡಿವಾಣ ಹಾಕಿದೆ. ಆದರೆ ಸ್ಥಳೀಯರು ತಮ್ಮ ತಮ್ಮ ಮನೆಗಳಿಗೂ ತೆರಳಲು ಸ್ವತ ಂತ್ರವಿಲ್ಲದೇ ಅಪ್ಪಣೆ ಪಡೆಯಬೇಕೇ ಎಂದ ಅವರು ಈ ನಿರ್ಣಯ ಕೇವಲ ಗುಬ್ಬಿ ಮೇಲೆ ಬ್ರಹ್ಮಸ್ತ್ರದಂತಾ ಗಿದ್ದು ಬಲಾಡ್ಯ ರೆಸಾರ್ಟ್ ಹಾಗೂ ಎಸ್ಟೇಟ್ ಮಾಲೀಕರಿಗೆ ಅನ್ವಯಿಸುವುದಿಲ್ಲ ಎಂದರು.

ಪ್ರವಾಸಿಗರು ಗಿರಿಪ್ರದೇಶ ಭೇಟಿ ನೀಡಲು ಜಿಲ್ಲಾಡಳಿತ ಇಂತಿಷ್ಟು ವಾಹನಗಳ ಸಂಚಾರ ನಿಗಧಿಪಡಿ ಸಿರುವುದು ಉತ್ತಮ ಕೆಲಸ. ಆದರೆ ಈ ಭಾಗದಲ್ಲಿ ಮುಳ್ಳಪ್ಪಸ್ವಾಮಿ, ಸೀತಳಯ್ಯನಗಿರಿ, ದತ್ತಾತ್ರೇಯಸ್ವಾಮಿ, ಬಿಸಗ್ನಿಮಠ, ಬೈರೇಶ್ವರ ಬೆಟ್ಟ, ಹೊನ್ನಮ್ಮದೇವಿಹಳ್ಳ, ಮುತ್ತಿನಮ್ಮ ದೇವಾಲಯ, ದರ್ಗಾ ಸೇರಿದಂತೆ ಅನೇಕ ಪವಿತ್ರ ಶ್ರದ್ದಾಕೇಂದ್ರಗಳಿರುವ ಕಾರಣ ಪಾಸ್ ನಿರ್ಧಾರವನ್ನು ಕೈಬಿಡಬೇಕಿದೆ ಎಂದರು.

ಈ ಪವಿತ್ರ ಕೇಂದ್ರಗಳಿಗೆ ಬರುವ ಬಹುತೇಕ ಭಕ್ತಾಧಿಗಳು ಅನಕ್ಷರಸ್ಥರಾದ ಕಾರಣ ಆನ್‌ಲೈನ್ ಬುಕ್ಕಿಂ ಗ್ ವ್ಯವಸ್ಥೆಯ ಅರಿವಿಲ್ಲ ಹಾಗೂ ಗೊಂದಲಗಳು ಉಂಟಾಗಲಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೈಗೊಂ ಡಿರುವ ನಿರ್ಧಾರವನ್ನು ಕೈಬಿಡದಿದ್ದಲ್ಲಿ ಗಿರಿಪ್ರದೇಶದ ನಿವಾಸಿಗಳು ಒಟ್ಟಾಗಿ ದೊಡ್ಡಮಟ್ಟಿನಲ್ಲಿ ಉಗ್ರ ಪ್ರತಿಭ ಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಕುಮಾರ್, ಶಾಂತಕುಮಾರ್, ಸತೀಶ್, ಮುನ್ನ, ಅಬ್ದುಲ್ ಸು ಮಾನ್, ಆದಿಲ್, ಬಾಬಿ, ಇಬ್ರಾಹಿಂ, ಮಹಮ್ಮದ್ ಅಪ್ಸರ್, ಸೈಯದ್ ನಜೀಮ್, ಸಿದ್ದಿಕ್, ಉಮೇಶ್, ಸುಂದರೇಶ್, ಹೊನ್ನಪ್ಪ, ನವೀನ್, ನಾಗರಾಜ್, ಸೈಯದ್ ಮುಕ್ಪಾಶ, ಪ್ರೇಮ, ಭರತ್, ಧರ್ಮರಾಜ್, ಚನ್ನ ಕೇಶವ, ಶಹಬುದ್ಧೀನ್, ಅವಿನಾಶ್ ಮತ್ತಿತರರು ಹಾಜರಿದ್ದರು.

Villagers protest against entry fee-pass to hill stations

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...