Home Crime News ವಿದ್ಯುತ್‌ ತಂತಿ ಸ್ಪರ್ಷಕ್ಕೆ ರೈತನ ಸಾವು
Crime NewschikamagalurHomeLatest Newsnamma chikmagalur

ವಿದ್ಯುತ್‌ ತಂತಿ ಸ್ಪರ್ಷಕ್ಕೆ ರೈತನ ಸಾವು

Share
Share

ಮೂಡಿಗೆರೆ: ವಿದ್ಯುತ್‌ ತಂತಿ ಸ್ಪರ್ಶಿಸಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಾಪುರ ಗ್ರಾಮದಲ್ಲಿ ನಡೆದಿದೆ

ಬೈರಾಪುರ ಗ್ರಾಮದ ಕೃಷಿಕರಾದ ನಾಗೇಶ್ ಗೌಡ (72 ವರ್ಷ) ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.

ನಾಗೇಶ್ ಗೌಡ ಅವರು ಇಂದು ಮಂಗಳವಾರ ಮಧ್ಯಾಹ್ನ ತಮ್ಮ ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ವೇಳೆ ಬೈರಾಪುರ ಸರ್ಕಾರಿ ಶಾಲೆಯ ಸಮೀಪ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ

11 ಕೆಂ.ವಿ. ವಿದ್ಯುತ್ ಪವರ್ ಲೈನ್ ಕಂಬದ ಬಳಿ ವಿದ್ಯುತ್ ಗೌಂಡ್ ಆಗಿದ್ದು ಘಟನೆಗೆ ಕಾರಣ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಆ ಸ್ಥಳದಲ್ಲಿ ಜಾನುವಾರುಗಳನ್ನು ಮೇಯಿಸಲು ಹೋದಾಗ ನಾಗೇಶ್ ಗೌಡರಿಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕು.

ನಾಗೇಶ್ ಗೌಡ ಅವರು ಗ್ರಾಮದ ಹಿರಿಯ ಕೃಷಿಕರಾಗಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ

Farmer dies after touching electric wire

Share

Leave a comment

Leave a Reply

Your email address will not be published. Required fields are marked *

Don't Miss

ಧಾರಾಕಾರ ಮಳೆಗೆ ಕಾಫಿಸಿಟಿ ಫುಲ್ ಕೂಲ್

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ವರುಣನ ಅಬ್ಬರ ಜೋರಾಗಿದ್ದು ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಕಾಫಿ ಸಿಟಿ ಈಗ ಫುಲ್ ಕೂಲ್ ಆಗಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠದ ಸುತ್ತಮುತ್ತಲೂ...

ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಮಲೆನಾಡಿಗರು ಆಕ್ರೋಶ

ಕಳಸ: ಸರ್ಕಾರದ ಬೇಜವಾಬ್ದಾರಿತನ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಮಲೆನಾಡಿಗರು ಆಕ್ರೋಶದ ತೊಡೆ ತಟ್ಟಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ಕುಗ್ರಾಮದ ಜನರಿಗೆ ಮಾತ್ರ...

Related Articles

ಹುಬ್ಬಳ್ಳಿ -ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ...

ಕಾಫಿ ಮೂಟೆ ಸಾಗಿಸುತ್ತಿದ್ದ ಲಾರಿ ಅಪಘಾತ

ಚಿಕ್ಕಮಗಳೂರು: ಕಾಫಿ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಚಾಲಕನ...

ಬೈಕ್ – ಕಾರೊಂದು ಮುಖಾಮುಖಿ ಡಿಕ್ಕಿ: ಚಾಲಕ ತೀವ್ರ ಗಾಯ

ಚಿಕ್ಕಮಗಳೂರು: ಪ್ರವಾಸಕ್ಕೆಂದು ಬಂದಿದ್ದ ಬೀದರ್ ಮೂಲದ ಬೈಕ್ ಸವಾರನಿಗೆ ಕಾರೊಂದು ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು...

ತಂತಿ ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಹುಲಿ

ಚಿಕ್ಕಮಗಳೂರು: ಮುತ್ತೋಡಿ ವಲಯದ ಏಳುನೂರುಖಾನ್ ತೋಟದ ಬಳಿ ತಂತಿ ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ ಹುಲಿಯೊಂದು...