Home namma chikmagalur ಹುತ್ತಿನಗದ್ದೆಯಲ್ಲಿ ಆನೆಗಳು ದಾಳಿಗೆ ಬೈಕ್‌ ಹಾನಿ
namma chikmagalurchikamagalurHomeLatest News

ಹುತ್ತಿನಗದ್ದೆಯಲ್ಲಿ ಆನೆಗಳು ದಾಳಿಗೆ ಬೈಕ್‌ ಹಾನಿ

Share
Share

ಜಯಪುರ: ಕೊಪ್ಪ ತಾಲ್ಲೂಕಿನ ಲೋಕನಾಥಪುರ ಸಮೀಪದ ಕೋಣಂಬಿ ಹಾಗೂ ಹೇರೂರು ಗ್ರಾಮದ ಹುತ್ತಿನಗದ್ದೆಯಲ್ಲಿ ಆನೆಗಳು ದಾಳಿ ಮಾಡಿ ಬೆಳೆ ಹಾಗೂ ಬೈಕ್‌ ಹಾನಿ ಮಾಡಿವೆ.

ಹೇರೂರು ಗ್ರಾಮದ ಹುತ್ತಿನಗದ್ದೆಯ ನಟರಾಜ್ ಅವರ ತೋಟದಲ್ಲಿ ಎರಡು ಆನೆಗಳು ಬೆಳೆದಿದ್ದ ಅಡಿಕೆ, ಬಾಳೆ, ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿವೆ. ಸಮೀಪದ ಸೈಟ್ ಬಳಿ ನಿಲ್ಲಿಸಿದ್ದ ಬೈಕನ್ನು ತುಳಿದು ಜಖಂಗೊಳಿಸಿವೆ.

ಸ್ಥಳಕ್ಕೆ ಕೊಪ್ಪ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಆನೆಗಳನ್ನು ಓಡಿಸಲು ಯತ್ನಿಸಿದ್ದಾರೆ. ಲೋಕನಾಥಪುರ ಸಮೀಪದ ಕೋಣಂಬಿ ಶ್ರೀಕರ, ನಾಗರಾಜ್, ಗುರುಪ್ರಸನ್ನ ಅವರ ಬೆಳೆ ಹಾನಿಯಾಗಿದೆ.

ಸ್ಥಳಕ್ಕೆ ಬಾರದ ಅಧಿಕಾರಿಗಳು: ಆನೆಗಳು ದಾಳಿ ನಡೆಸಿದ ಬಗ್ಗೆ ಕೊಪ್ಪ ಡಿಎಫ್‌ಒ ಶಿವಶಂಕರ್ ಅವರನ್ನು ಶ್ರೀಕರ ಅವರು ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸಿದಾಗ ಸೋಮವಾರ ಸ್ಥಳಕ್ಕೆ ಅಧಿಕಾರಿಗಳು ಬರುತ್ತಾರೆ ಎಂದು ಹೇಳಿದ್ದರು. ಅಧಿಕಾರಿಯ ಉತ್ತರಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಬೆಳೆಹಾನಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರಾಣ ಹಾನಿಯಾದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ.

Bike damaged in elephant attack in Huttinagadde

Share

Leave a comment

Leave a Reply

Your email address will not be published. Required fields are marked *

Don't Miss

ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿ- ಇಬ್ಬರ ಸಾವು

ಚಿಕ್ಕಮಗಳೂರು: ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಭೀಕರ ಘಟನೆ ಜಾವಗಲ್ ಹಳೇಬೀಡು ಮುಖ್ಯ ರಸ್ತೆಯ ಕೊಟ್ಟಿಗೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಕಾರನ್ನು ಅತಿ ವೇಗ ಮತ್ತು...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ, ಮಠ ಮಂದಿರಗಳಿಗೆ ಕಳೆ ಬಂದಿದೆ. ಇದರ ಜೊತೆಗೆ ಕೈ ಪಡೆಯಲ್ಲಿ ನಿಗಮ,ಮಂಡಳಿಗಳಲ್ಲಿ ಸ್ಥಾನ ಪಡೆಯಲು...

Related Articles

ಮಳಲೂರು ಏತ ನೀರಾವರಿ ಯೋಜನೆಗೆ ಮರುಜೀವ

ಚಿಕ್ಕಮಗಳೂರು: ಕಾಫಿನಾಡಿನ ರೈತರ ಬಹುದಿನಗಳ ಕನಸಾಗಿದ್ದ ಮಳಲೂರು ಏತ ನೀರಾವರಿ ಯೋಜನೆಗೆ ಕೊನೆಗೂ ಮರುಜೀವ ಬಂದಿದ್ದು,...

ಶ್ರೀ ವೀರನಾರಾಯಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಿಡಿಗೇಡಿಗಳು ವಿಕೃತಿ

ಚಿಕ್ಕಮಗಳೂರು: ಹೊಯ್ಸಳರ ಕಾಲದ ಅತ್ಯಂತ ಪ್ರಸಿದ್ಧ ಹಾಗೂ ಅಪೂರ್ವ ಕಲೆ-ವಾಸ್ತುಶಿಲ್ಪದ ಹೆಗ್ಗುರುತಾಗಿರುವ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ...

ಹುಬ್ಬಳ್ಳಿ -ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ...

ಕಾಫಿ ಮೂಟೆ ಸಾಗಿಸುತ್ತಿದ್ದ ಲಾರಿ ಅಪಘಾತ

ಚಿಕ್ಕಮಗಳೂರು: ಕಾಫಿ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಚಾಲಕನ...