Home namma chikmagalur chikamagalur ಮಳಲೂರು ಏತ ನೀರಾವರಿ ಯೋಜನೆಗೆ ಮರುಜೀವ
chikamagalurHomeLatest Newsnamma chikmagalur

ಮಳಲೂರು ಏತ ನೀರಾವರಿ ಯೋಜನೆಗೆ ಮರುಜೀವ

Share
Oplus_16908288
Share

ಚಿಕ್ಕಮಗಳೂರು: ಕಾಫಿನಾಡಿನ ರೈತರ ಬಹುದಿನಗಳ ಕನಸಾಗಿದ್ದ ಮಳಲೂರು ಏತ ನೀರಾವರಿ ಯೋಜನೆಗೆ ಕೊನೆಗೂ ಮರುಜೀವ ಬಂದಿದ್ದು, ರಾಜ್ಯ ಸರ್ಕಾರದಿಂದ 11 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ.

ಈ ಮಹತ್ವದ ಬೆಳವಣಿಗೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ಇಷ್ಟು ದಿನ ಸ್ಥಗಿತಗೊಂಡಿದ್ದ ಕಾಮಗಾರಿಗಳನ್ನು ಪುನರಾರಂಭಿಸಲು ಮತ್ತು ಬಾಣಾವರ ಹಾಗೂ ಗಂಜಲಗೋಡು ಸೇತುವೆ ಕಾಮಗಾರಿಗಳಿಗೆ ಚಾಲನೆ ನೀಡಲು ಈಗ ಹಾದಿ ಸುಗಮವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮಳಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ರೈತರ ಪರವಾಗಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ರೈತ ಸಂಘದ ನಿಯೋಗವು ಶಾಸಕರ ಮನೆಗೆ ಖುದ್ದಾಗಿ ಭೇಟಿ ನೀಡಿ ನಿರಂತರ ಒತ್ತಡ ಹೇರಿದ ಫಲವಾಗಿಯೇ ಇಂದು ಈ ಯೋಜನೆಗೆ ಮರುಚಾಲನೆ ದೊರೆತಿದೆ ಎಂದು ಮಹೇಶ್ ತಿಳಿಸಿದ್ದಾರೆ.

ಇನ್ನು ಈ ಯೋಜನೆಗೆ ಸುದೀರ್ಘ ಇತಿಹಾಸವಿದ್ದು, ಮಳಲೂರು ಜವರೇಗೌಡ, ಗುರುಶಾಂತಪ್ಪ, ಕೃಷ್ಣಗೌಡ ಹಾಗೂ ಎಂ.ಸಿ. ಬಸವರಾಜು ಅವರ ನೇತೃತ್ವದಲ್ಲಿ 1987 ರಲ್ಲೇ ರೈತರ ಹೋರಾಟ ಆರಂಭವಾಗಿತ್ತು.
ಈ ತೀವ್ರ ಹೋರಾಟದ ಪ್ರತಿಫಲವಾಗಿ ಯೋಜನೆಗೆ 1998ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತು, ಬಳಿಕ 2000 ನೇ ಇಸವಿಯಲ್ಲಿ ಶಂಕುಸ್ಥಾಪನೆ ನೆರವೇರಿತ್ತು. ಈಗ ಸಿಕ್ಕಿರುವ ಭಾರೀ ಅನುದಾನದಿಂದಾಗಿ ಜಿಲ್ಲೆಯ ರೈತರಲ್ಲಿ ಹೊಸ ಭರವಸೆ ಮೂಡಿದೆ.

Malaur Lift Irrigation Project revived

Share

Leave a comment

Leave a Reply

Your email address will not be published. Required fields are marked *

Don't Miss

ಅಪಘಾತದಲ್ಲಿ ಸಾವು: ಚಾಲಕನಿಗೆ 9 ತಿಂಗಳು ಸಜೆ

ಚಿಕ್ಕಮಗಳೂರು: ಅತೀ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಚಾಲಕನಿಗೆ ನಗರದ ಒಂದನೇ ಅಧಿಕ ಹಿರಿಯ ಸಿ.ಜೆ....

ದ್ವಿಚಕ್ರ ವಾಹನ ಡಿಕ್ಕಿ-ಪಾದಚಾರಿ ಯುವಕ ಸಾವು

ಚಿಕ್ಕಮಗಳೂರು: ತಾಲೂಕಿನ ಕುರುಬರಹಳ್ಳಿ ಗ್ರಾಮದ ಸಮೀಪ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವಕ ಮೃತಪಟ್ಟಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮಾಚೇನಹಳ್ಳಿ ಗ್ರಾಮದ...

Related Articles

100 ಅಡಿ ಪ್ರಪಾತಕ್ಕೆ ಉರುಳಿದ 10 ಚಕ್ರದ ಲಾರಿ

ಚಿಕ್ಕಮಗಳೂರು: ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ೧೦ ಚಕ್ರದ ಲಾರಿಯೊಂದು ರಸ್ತೆ ಪಕ್ಕದ...

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ...

ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

ಚಿಕ್ಕಮಗಳೂರು:  ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌ ಕರರಿಗೆ ಕಾರ್ಮಿಕ ಆಯುಕ್ತರ ಆದೇಶದಂತೆ ಕನಿಷ್ಟ ವೇತನ...