Home Latest News ಕಾರ್ಮಿಕ ಮಂಡಳಿಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಮನವಿ
Latest NewschikamagalurHomenamma chikmagalur

ಕಾರ್ಮಿಕ ಮಂಡಳಿಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಮನವಿ

Share
????????????????????????????????????
Share

ಚಿಕ್ಕಮಗಳೂರು:  ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸೌಲಭ್ಯ ವಿತರಣೆಯಲ್ಲಿ ಆಗು ತ್ತಿರುವ ವಿಳಂಬ ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ದ ಪದಾಧಿಕಾರಿಗಳು ಬುಧವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿ ದರು.

ಈ ಕುರಿತು ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಫಲಾನುಭವಿ ಕಾರ್ಮಿಕರು ಹತ್ತಾರು ಸ ಮಸ್ಯೆಗಳನ್ನು ಎದುರಿಸುತ್ತಿದ್ದು ಶೈಕ್ಷಣಿಕ, ಸ್ವಾಭಾವಿಕ ಮರಣ ಮತ್ತು ಮದುವೆ ಧನಸಹಾಯ ಸೇರಿದಂತೆ ವಿ ವಿಧ ಸೌಲಭ್ಯ ನೀಡುವಲ್ಲಿ ವಿಳಂಭ ನೀತಿ ಅನುಸರಿಸುತ್ತಿದೆ ಎಂದರು.

ದೈನಂದಿನ ದುಡಿಮೆಯ ಹಿನ್ನೆಲೆಯಲ್ಲಿ ಒಂದೂರಿನಿಂದ ಮತ್ತೊಂದು ಊರಿಗೆ ವಲಸೆ ಬರುವ ಕಟ್ಟಡ ಕಾರ್ಮಿಕರು ಉಳಿದುಕೊಳ್ಳಲು ತಾತ್ಕಾಲಿಕ ವಸತಿ ಸಮುಚ್ಚಯ ನಿರ್ಮಿಸಲು ಕಲ್ಯಾಣ ಮಂಡಳಿಯು ಮುಂ ದಾಗಿದೆ. ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಅತ್ಯಗತ್ಯವಾಗಿ ಬೇಕೆಂಬುದರಲ್ಲಿ ಸಹಮತವಿದೆ. ಆದರೆ ಈ ವ್ಯವಸ್ಥೆ ಎಲ್ಲಾ ಕಾರ್ಮಿಕರಿಗೂ ಅಗತ್ಯವಾಗಿ ಮಾಡಿಕೊಡಬೇಕು ಎಂದರು.

ಈ ಸಂಬಂಧ ರಾಜ್ಯಸರ್ಕಾರ ಟ್ರಾನ್ಸಿಸ್ಟ್ ಮನೆಗಳನ್ನು ನಿರ್ಮಿಸುವುದು ಸೂಕ್ತ. ಕಾರ್ಮಿಕರಿಗೆ ಉಪ ಯೋಗವಾಗುವ ಬದಲು, ಇದರ ನಿರ್ವಹಣೆಯೇ ಮಂಡಳಿಗೆ ಹೊರೆಯಾಗುವ ಅಪಾಯವಿದೆ. ಕಲ್ಯಾಣ ಮಂಡಳಿಯ ಇಂತಹ ಹಲವು ಯೋಜನೆಗಳಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಸುಮಾರು ೨ ಸಾವಿರ ಕೋಟಿ ಬಳಕೆ ಮಾಡಲು ಹೊರಟಿರುವ ತೀರ್ಮಾನ ಕೈಬೀಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಕಲ್ಯಾಣ ಮಂಡಳಿಯು ನೈಜವಾಗಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸು ವಂಥಹ ಕಲ್ಯಾಣ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಆದ್ಯತೆ ನೀಡಿ ಪರಿಣಾಮಕಾರಿಯಾಗಿ ಜಾರಿ ಮಾಡು ವಂತೆ ನಿರ್ದೇಶನ ನೀಡಬೇಕು. ಮತ್ತು ಪ್ರೊಕ್ಯೂರ್‌ಮೆಂಟ್ ಆಧಾರಿತ ಖರೀದಿ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರ ಮೂಲ ಬೇಡಿಕೆಗಳಾದ ಹೈಕೋರ್ಟಿನ ತೀರ್ಪಿನಂತೆ ಶೈಕ್ಷಣಿಕ ಧನಸಹಾಯ ಪಾವತಿಸ ಬೇಕು. ನೋಂದಣಿ ಹಾಗೂ ನವೀಕರಣ ಸಮಸ್ಯೆಗಳು ಇತ್ಯರ್ಥವಾಗಬೇಕು. ಬಾಕಿ ಅರ್ಜಿಗಳು ವಿಲೇವಾರಿ ಆಗಬೇಕು. ಪಿಂಚಣಿ ಅರ್ಜಿಗಳಿಗೆ ಹಣ ಫಾವತಿಸಬೇಕು. ಮನೆ ನಿರ್ಮಿಸಲು ೫ ಲಕ್ಷ ರೂ. ಧನ ಸಹಾಯ ನೀಡಬೇಕು. ವೈದ್ಯಕೀಯ ನೆರವು ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ತಾಲ್ಲೂಕು ಉಪಾಧ್ಯಕ್ಷರಾದ ಸಿ.ಸಿ.ಮಂಜೇಗೌಡ, ಕೆ.ಕುಪ್ಪನ್, ಸದಸ್ಯ ಚಂದ್ರಚಾರ್ ಉಪಸ್ಥಿತರಿದ್ದರು.

Appeal to curb the wasteful spending of the Labour Board

Share

Leave a comment

Leave a Reply

Your email address will not be published. Required fields are marked *

Don't Miss

ದೇಶದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಇಲ್ಲ

ಬೀರೂರು: ‘ದೇಶದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಇಲ್ಲದೆ ಮುಂದಿನ ಪೀಳಿಗೆಗೆ ಕೊಡುಗೆಯಾಗುವಂಥ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಭಾನುವಾರ...

ಅಜ್ಜಂಪುರದ ರೈಲ್ವೆ ಲೆವೆಲ್ ಕ್ರಾಸಿಂಗ್ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

ಚಿಕ್ಕಮಗಳೂರು:  ದೇಶದ ಅಭಿವೃದ್ಧಿಯ ಸಂಕೇತವೇ ರೈಲ್ವೆಯಾಗಿದ್ದು, ರೈಲ್ವೆ ಇಲಾಖೆಯನ್ನು ಎಷ್ಟು ಮಟ್ಟಿಗೆ ಅಭಿವೃದ್ಧಿಪಡಿಸುತ್ತೇವೆಯೋ ಅಷ್ಟು ದೇಶಕ್ಕೆ ಒಳ್ಳೆಯದಾಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ...

Related Articles

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...

ಧಾರಾಕಾರ ಮಳೆಗೆ ಕಾಫಿಸಿಟಿ ಫುಲ್ ಕೂಲ್

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ವರುಣನ ಅಬ್ಬರ ಜೋರಾಗಿದ್ದು ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಕಾಫಿ ಸಿಟಿ ಈಗ...

ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಮಲೆನಾಡಿಗರು ಆಕ್ರೋಶ

ಕಳಸ: ಸರ್ಕಾರದ ಬೇಜವಾಬ್ದಾರಿತನ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಮಲೆನಾಡಿಗರು ಆಕ್ರೋಶದ ತೊಡೆ ತಟ್ಟಿದ್ದಾರೆ. ಸ್ವಾತಂತ್ರ್ಯ...

ಭಾರಿ ಮಳೆಯ ಆರ್ಭಟಕ್ಕೆ ಮೆಸ್ಕಾಂಗೆ 3.21 ಕೋಟಿ ಹಾನಿ

ಚಿಕ್ಕಮಗಳೂರು: ಮುಂಗಾರುಪೂರ್ವ ಮಳೆ ಮತ್ತು ಭಾರಿ ಗಾಳಿಯ ಆರ್ಭಟಕ್ಕೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮೆಸ್ಕಾಂ ವ್ಯಾಪ್ತಿಯಲ್ಲಿ ಭಾರಿ...