ಚಿಕ್ಕಮಗಳೂರು: ರಾಜ್ಯಸರ್ಕಾರದ ಆಡಳಿತ ವೈಫಲ್ಯತೆ ಹಾಗೂ ಹಲವು ಇಲಾಖೆಗಳಲ್ಲಿ ಭಾರೀ ಭ್ರಷ್ಟಚಾರ ಎಸಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡರುಗಳು ಪಕ್ಷದ ಕಚೇರಿ ಮುಂಭಾಗದಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದಲೂ ಭ್ರಷ್ಟಚಾರ ಮುಗಿಲುಮುಟ್ಟಿದೆ. ಭ್ರಷ್ಟಚಾರದಲ್ಲಿ ಸಂಪೂರ್ಣವಾ ಗಿ ಮುಳುಗಿರುವ ರಾಜ್ಯಸರ್ಕಾರ ಕೂಡಲೇ ಅಧಿಕಾರವನ್ನು ತ್ಯಜಿಸಬೇಕಿದೆ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸ್ವಪಕ್ಷ ಶಾಸಕರಿಂದಲೇ ಸರ್ಕಾರದ ಭ್ರಷ್ಟಚಾರವನ್ನು ಬಯಲಿಗೇಳೆಯುವ ಕ್ರಮವಾಗಿದೆ. ಸ ರ್ಕಾರದ ವಾಲ್ಮೀಕಿ ಹಗರಣ ಕೋಟ್ಯಾಂತರ ಹಣವನ್ನು ದುರುಪಯೋಗ ಮಾಡಿಕೊಂಡಿರುವ ವಿರುದ್ಧ ವಿ ಧಾನ ಪರಿಷತ್ ಸಭೆಯೊಳಗೆ ಹೋರಾಟ ರೂಪಿಸಿದ ಪರಿಣಾಮ ಸಂಬಂಧಿಸಿದ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಮಾತನಾಡಿ ರಾಜ್ಯನಾಯಕರ ಆದೇಶದನ್ವಯ ಜಿಲ್ಲೆಯಾದ್ಯಂತ ಭ್ರಷ್ಟ ರಾಜ್ಯಸರ್ಕಾರದ ವಿರುದ್ಧ ಅಭಿಯಾನ ಹಮ್ಮಿಕೊಂಡು ಎಳೆ ಎಳೆಯಾಗಿ ಬಿಚ್ಚಿಸುವ ಕೆಲಸ ಜೆಡಿಎಸ್ ಕಾರ್ಯಕರ್ತರು ಮಾಡಲಿದ್ದಾರೆ. ಜೊತೆಗೆ ಯುವನಾಯಕ ನಿಖಿಲ್‌ಕುಮಾರಸ್ವಾಮಿ ಜನಾಂದೋಲನ ಹಾ ಗೂ ಸದಸ್ಯತ್ವ ಅಭಿಯಾನ ನಡೆಸಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಿ ಕಾರ್ಯಕರ್ತರಲ್ಲಿ ಹುರುಪು ತು ಂಬುತ್ತಿದ್ದಾರೆ ಎಂದರು.
ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ಮಾತನಾಡಿ ವಾಲ್ಮೀಕಿ, ಮುಡ, ಪಡಿತರ ಚೀಟಿ ಹಗರಣ ಮ ತ್ತು ವಸತಿ ಯೋಜನೆಯ ಭ್ರಷ್ಟಚಾರ ಸೇರಿದಂತೆ ಸಾಲು ಸಾಲು ಹಗರಣಗಳು ರಾಜ್ಯಸರ್ಕಾರದಲ್ಲಿ ಕೇಳಿ ಬರುತ್ತಿದೆ. ಆರ್ಥಿಕ ಸಬಲರಾದವರಿಗೆ ಮಾತ್ರ ವಸತಿ ಎಂಬ ನಿಯಮ ರೂಫಿಸಿ ಬಡವರನ್ನು ಕೆಳತಳ್ಳುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಗೋಪಿ, ಶೀಲಾ ದಿನೇಶ್, ಮಾಜಿ ಸದಸ್ಯ ದಿನೇಶ್, ಜೆಡಿ ಎಸ್ ಜಿಲ್ಲಾ ಉಪಾದ್ಯಕ್ಷ ಲಕ್ಷ್ಮಣ್‌ಗೌಡ, ತಾ.ಪಂ. ಮಾಜಿ ಸದಸ್ಯ ಆನಂದ್‌ನಾಯ್ಕ್, ಮುಖಂಡರುಗಳಾದ ಡಿ.ಜೆ.ಸುರೇಶ್, ದೇವರಾಜ್‌ಅರಸ್, ನಂದೀಶ್, ಮೂರ್ತಿ, ಚೇತನ್, ಸಿದ್ದಿಕ್, ಜಾಕರೀಯಾ ಜಾಕೀರ್, ಈಶ್ವರೇಗೌಡ, ರವಿ, ಸತೀಶ್, ಜಯಂತಿ, ರತ್ನ ಮತ್ತಿತರರಿದ್ದರು.
JDS protests condemning the failure of the state government
Leave a comment