ಚಿಕ್ಕಮಗಳೂರು: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ ಡಾ. ಎಚ್.ಎಸ್ ವೆಂಕಟೇಶ್ ಮೂರ್ತಿ ರವರ ಗೌರವಾರ್ಥ ನಗರದ ಬ್ರಹ್ಮ ಸಮುದ್ರ ರಂಗಣ್ಣನ ಛತ್ರದಲ್ಲಿ ಜೂನ್. ೧೫ ರಂದು ಸಂಜೆ ೬ ಗಂಟೆಗೆ ನೆನಪಿನಂಗಳದಲ್ಲಿ ಎಚ್ಚೆಸ್ವಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ನ ಎಂ.ಎಸ್ ಸುಧೀರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚಿಕ್ಕಮಗಳೂರು ಬ್ರಾಹ್ಮಣ ಮಹಾ ಸಭಾ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸಾಂಸ್ಕೃತಿಕ ಸಂಘ ಹಾಗೂ ಸುಗಮ ಸಂಗೀತ ಗಂಗಾ ಇವರುಗಳ ಸಂಯುಕ್ತಾಶ್ರಯದಲ್ಲಿ ವೆಂಕಟೇಶ್ ಮೂರ್ತಿಯವರ ಕಾವ್ಯಗಾಯನ ನೆಡೆಯಲಿದೆ ಎಂದರು.
ವೆಂಕಟೇಶ್ ಮೂರ್ತಿಯವರು ಕಾವ್ಯ, ಮಹಾಕಾವ್ಯ, ಅಂಕಣ ಲೇಖನ, ನಾಟಕ, ಶಿಶುಗೀತೆ, ಚಿತ್ರಗೀತೆ, ಭಾವಗೀತೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅವರು ಇಂದು ಭೌತಿಕವಾಗಿ ನಮ್ಮೋಂದಿಗಿಲ್ಲ, ಚಿಕ್ಕಮಗಳೂರನ್ನು ಪ್ರೀತಿಸುತ್ತಿದ್ದ ಇವರು ಅನೇಕ ಸುಗಮ ಸಂಗೀತ ಕಾರ್ಯಕ್ರಮಗಳಿಗೆ ಆಗಮಿಸಿದ್ದರು ಎಂದು ಹೇಳಿದರು.
ನಿಸರ್ಗ ಸೌಂದರ್ಯವನ್ನು ಸದಾ ಪ್ರೀತಿಸುತ್ತಿದ್ದ ಕವಿ ಎಚ್ಚೆಸ್ವಿ ಅವರಿಗೆ ಸುಗಮ ಸಂಗೀತ ಗಂಗಾ ಸಂಸ್ಥೆ ಕವಿಕಾವ್ಯ ನಮನವನ್ನು ಸಲ್ಲಿಸಿದ್ದು, ಇದೀಗ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಚಿಂತನೆ ನೆಡೆಸಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸಂಗೀತ ಶಿಕ್ಷಕಿ ಬೀರೂರಿನ ಜ್ಯೋತಿ ಅನಂತು ರವರು ಉದ್ಘಾಟಿಸಲಿದ್ದು, ಸಾಹಿತಿ ಡಾ. ಹೆಚ್.ಎಸ್ ಸತ್ಯನಾರಾಯಣ ರವರು ಎಚ್ಚೆಸ್ವಿ ನುಡಿ ನಮನ ಸಲ್ಲಿಸಲಿದ್ದಾರೆ, ಇದೇ ಸಂದರ್ಭದಲ್ಲಿ ಎಂ.ಎಸ್ ಸುಧೀರ್ ನೇತೃತ್ವ ತಂಡ ಎಚ್ಚೆಸ್ವಿ ವಿರಚಿತ ಕಾವ್ಯಗಳ ಗಾನಸುಧೆ ಹರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗಾಯನದಲ್ಲಿ ಎಂ.ಎಸ್ ಸುಧೀರ್, ಚೇತನ್ರಾಮ್, ವಿಷ್ಣುಭಾರದ್ವಾಜ್, ರೂಪಶ್ವಿನ್, ಅನುಷಾ, ರುಕ್ಸಾನ ಕಾಚೂರು. ರಾಯನಾಯಕ್, ಜ್ಯೋತಿವಿನೀತ್ ಕುಮಾರ್, ಲಾಲಿತ್ಯಅಣ್ವೇಕರ್, ಪೃಥ್ವಿಶ್ರೀ, ಸ್ವೇಚಿತ್, ಕೆ.ಎಸ್ ಚಿನ್ಮಯಿ, ಮಾನ್ಯತ ಬಾಗಮನೆ ಹಾಗೂ ಮಾನ್ಯ ಭಟ್ ಇವರುಗಳು ಎಚ್ಚೆಸ್ವ್ವಿ ವಿರಚಿತ ಗೀತೆಗಳನ್ನು ಹಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಜೋಷಿ, ಸುಗಮ ಸಂಗೀತ ಗಂಗಾದ ಸುಮಪ್ರಸಾದ್ ಉಪಸ್ಥಿತರಿದ್ದರು.
June 15th wake up in the city in a eccesvi
Leave a comment