Home Latest News MLC ಎಸ್ ಎಲ್ ಭೋಜೇಗೌಡ ವಿರುದ್ಧ ಚುನಾವಣಾಧಿಕಾರಿಗೆ ದೂರು
Latest News

MLC ಎಸ್ ಎಲ್ ಭೋಜೇಗೌಡ ವಿರುದ್ಧ ಚುನಾವಣಾಧಿಕಾರಿಗೆ ದೂರು

Share
Share

ಚಿಕ್ಕಮಗಳೂರು : ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ದೇವೇಂದ್ರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡರ ಮೇಲೆ ಜಿಲ್ಲಾಧಿಕಾರಿಗೆ ದೂರು ಸಲ್ಲಸಿದ್ದು ನೌಕರರನ್ನು ಪದೇ,ಪದೇ ಮನೆಗೆ ಕರೆಯಿಸಿ ಬೆದರಿಕೆಯ ಜೊತೆಗೆ ಆಮಿಷ ಒಡ್ಡುತ್ತಿದ್ದು ರೆಸಾರ್ಟ್ನಲ್ಲಿ ಉಳಿಯಬೇಕು ನಾನು ಹೇಳಿದವರಿಗೆ ಮತ ನೀಡಬೇಕು ಎಂದು ಬೆದರಿಸುತ್ತಿರುವುದರಿಂದ ಮುಕ್ತ ಚುನಾವಣೆ ನಡೆಯುವುದಿಲ್ಲ ನಿರ್ಭಯವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲು ಒತ್ತಾಯ ಮಾಡಿರುವುದು ಚುನಾವಣೆಯಲ್ಲಿ ನಡೆಯುತ್ತಿರುವ ರಂಗಿನಾಟಕ್ಕೆ ಹೊಸ ತಿರುವು ಬಂದಿದೆ.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಡಿಸೆಂಬರ್ 4 ರಂದು ನಡೆಯಲಿದೆ ಈಗಾಗಲೇ ಅಧ್ಯಕ್ಷ ,ಖಜಾಂಚಿ ಮತ್ತು ರಾಜ್ಯ ಪರಿಷತ್ ಗೆ ಸ್ಪರ್ಧೆಯಲ್ಲಿ ರುವವರು ದೇವೇಂದ್ರ ಮತ್ತು ಹೇಮಂತ್ ನೇತೃತ್ವದಲ್ಲಿ ಭರ್ಜರಿ ಬ್ಯಾಟಿಂಗ್ ಶುರುಮಾಡಿದ್ದಾರೆ. 73 ಮತದಾರರು ಇದ್ದು ಎರಡು ಗುಂಪಿನಲ್ಲಿ ನೇರವಾಗಿ ಗುರ್ತಿಸಿಕೊಂಡಿದ್ದರೆ ಕೆಲವರು ಅತ್ತಾ,ಇತ್ತಾ ಸುಳಿದಾಡಿದರೆ ಕೆಲವರು ನೇರವಾಗಿ ಯಾರ ಗುಂಪಿನ ಜೊತೆಯಲ್ಲಿ ಇಲ್ಲ ನಮಗೆ ಮತ ನೀಡುವುದು ಗೊತ್ತು ಎಂದಿದ್ದಾರೆ.

ಹತ್ತರಿಂದ ಹನ್ನೆರಡು ಜನಮಾತ್ರ ಅಯಾಯ ಗುಂಪಿನಲ್ಲಿ ರೆಸಾರ್ಟ್ ಪಾರ್ಟಿ ನಡೆಸುತ್ತಿದ್ದು ಕೆಲವರು ನಮಗೆ ಪಾರ್ಟಿ, ಪೇಮೆಂಟ್, ಗುಂಪು ಬೇಡ ಎಂದು ನೇರವಾಗಿ ಹೇಳಿ ಕಳಿಸಿದ್ದಾರೆ. ಹೀಗಾಗಿ ಇಬ್ಬರಿಗೂ ಚಿಂತೆ ಶುರುವಾಗಿದೆ.
ಎರಡು ಗುಂಪಿಗೂ ರಾಜಕಾರಣಿಗಳ ಬೆಂಬಲವಿದೆ.ಆದರೆ ಪ್ರಾರಂಭದಿಂದಲೂ ಎಂ,ಎಲ್,ಸಿ ಬೋಜೇಗೌಡ ನೇರವಾಗಿ ಹೇಮಂತ್ ಪರ ನಿಂತಿದ್ದಾರೆ.ಇದನ್ನು ಹೆದರಿಸಲು ದೇವೇಂದ್ರ ನುಗ್ಗುತ್ತಿದ್ದು ಡಿಸೆಂಬರ್4 ರ ಸಂಜೆ ಯಾರ ಶಕ್ತಿ ಏನು ಎಂಬ ರಿಯಾಲಿಟಿ ತಿಳಿಯುತ್ತದೆ.

ಗುಂಡು_ ತುಂಡಿನ ಜೊತೆಗೆ ಹಣ ಹಂಚಿಕೆ ಖಚಿತ ಎಂಬ ಮಾಹಿತಿಗೆ ಪೂರಕವಾಗಿ ಪ್ರತಿನಿಧಿ ಅಯ್ಕೆಯಲ್ಲಿ ಎರಡು ಸಾವಿರ ಹಣ ಮತ್ತು ಬೆಳ್ಳಿ ಬಟ್ಟಲು ಹಂಚಲಾಗಿದೆ.ಅಲ್ಲಲ್ಲಿ ಕೇಳಿಬರುತ್ತಿರುವಂತೆ ಇಪ್ಪತ್ತರಿಂದ ಮೂವತ್ತು ಸಾವಿರ ಹಂಚಬಹುದು ಎಂಬ ಗುಮಾನಿ ಮಾತ್ರ ಇದೆ.ಈ ಬಗ್ಗೆ ಅಭ್ಯರ್ಥಿಗಳು ಮಾತ್ರ ನಯವಾಗಿ ತಿರಸ್ಕರಿಸುತ್ತಾರೆ.
ಚುನಾವಣೆಯಲ್ಲಿ ಗೆಲ್ಲ ಬೇಕೆಂಬ ಹಠಕ್ಕೆ ಬಿದ್ದಿರುವ ಎರಡು ಗುಂಪಿನವರು ಎಲ್ಲಾ ಟ್ರಿಕ್ಸ್ ಗಳನ್ನು ಬಳಸುತ್ತಿದ್ದು ಅಣೆ,ಪ್ರಮಾಣ,ದೇವರ ಪ್ರಸಾದ ನೀಡಿ ಮತಗಳನ್ನು ಯಾವ ರೀತಿ ಹಾಕಬೇಕು ಯಾರಿಗೆ ಯಾವ ರೀತಿ ಸಂಖ್ಯೆ ಯಲ್ಲಿ ಒತ್ತ ಬೇಕು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.ಜೊತೆಗೆ ಹೆದರಿಕೆ,ಬೆದರಿಕೆ ಕೂಡ ಉಚಿತವಾಗಿ ಕೊಡಲಾಗಿದೆ.
ಒಟ್ಟಾರೆ ಝಣ,ಝಣ ಕಾಂಚಾಣದ ಸದ್ದಿನೊಂದಿಗೆ ತಂತ್ರ, ಕುತಂತ್ರ ಬಳಸಿ ಗೆಲುವು ನಮ್ಮದೇ ಎನ್ನುವ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ...

Related Articles

ಮಳೆಗಾಲದಲ್ಲಿ ಟಿಂಬರ್ ಸಾಗಣೆರಸ್ತೆಯಿಂದ ರಸ್ತೆ ಹಾಳು

ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ...

ನಗರಕ್ಕೆ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜು ಸ್ಥಗಿತ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 600 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ...

ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ…?

ಚಿಕ್ಕಮಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (LC-48) ಬದಲಿಗೆ...

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ...