Home Political News ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನಾ ಭಾಷಣದ ವೇಳೆ ಸಚಿವ ಜಾರ್ಜ್ ಭಾಷಣಕ್ಕೆ ಅಡ್ಡಿ
Political News

ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನಾ ಭಾಷಣದ ವೇಳೆ ಸಚಿವ ಜಾರ್ಜ್ ಭಾಷಣಕ್ಕೆ ಅಡ್ಡಿ

Share
Share

ಚಿಕ್ಕಮಗಳೂರು : ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನೆ ವೇಳೆ ಸಚಿವ ಕೆ.ಜೆ ಜಾರ್ಜ್ ಭಾಷಣಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ. ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಭಾಷಣ ಮಾಡಿದ್ದಕ್ಕೆ ಜಾರ್ಜ್ ಅವರಿಗೆ ಆಕ್ಷೇಪ ವ್ಯಕ್ತವಾಗಿದೆ. ನಗರದ ಎಐಟಿ ವೃತ್ತದ ಬಳಿ ನೂತನ ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನಾ ಭಾಷಣದ ವೇಳೆ

ಸಭೆಯಲ್ಲಿದ್ದ ಒಕ್ಕಲಿಗ ಯುವಕರಿಂದ ಸಚಿವ ಜಾರ್ಜ್ ಭಾಷಣಕ್ಕೆ ಆಕ್ಷೇಪ ಕೇಳಿ ಬಂತು ವೇದಿಕೆಯತ್ತ ತೆರಳಿ ಸಚಿವರು ಭಾಷಣ ನಿಲ್ಲಿಸುವಂತೆ ತಡೆಯ ಲಾಗಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಯುವಕರನ್ನು ಸಮಾಧಾನ ಪಡಿಸಿದರು. ಸ್ವಾಮೀಜಿ ಮಧ್ಯ ಪ್ರವೇಶದಿಂದ ಯುವಕರು ಸುಮ್ಮನಾದರು.

ನಂತರ ತಮ್ಮ ಮಾತಿಗೆ ಸಭೆಯಲ್ಲೇ ಸಚಿವ ಜಾರ್ಜ್ ಕ್ಷಮೆಯಾಚಿಸಿದರು ಅರ್ಧಕ್ಕೆ ಭಾಷಣ ನಿಲ್ಲಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಮುಜುಗರಕ್ಕೆ ಒಳಗಾದರು. ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣಕ್ಕೆ ಮುಂದಾದ ಸಚಿವ ಕೆ.ಜೆ.ಜಾರ್ಜ್ ಪೇಚಿಗೆ ಸಿಲುಕಿದಂತಾಗಿದೆ. ಇದು ರಾಜಕೀಯ ವೇದಿಕೆಯಲ್ಲ, ರಾಜಕೀಯ ಮಾತನಾಡೋದಾದ್ರೆ ಕೆಳಗೆ ಇಳಿಯಿರಿ ಎಂದು ಆಕ್ರೋಶ ವ್ಯಕ್ತವಾಯಿತು.

ಈ ವೇಳೆ ಗರಂ ಆದ ಸಚಿವ ಜಾರ್ಜ್ ರಾಜಕೀಯ ಮಾಡಬೇಡಿ, ನನಗೂ ರಾಜಕೀಯ ಬರುತ್ತೆ ಅಂತ ಸಿಟ್ಟಾದರು. ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ಏರ್ಪಟ್ಟಿತ್ತು ಕೊನೆಗೆ ನಿರ್ಮಲಾನಂದ ಶ್ರೀಗಳ ಮಧ್ಯ ಪ್ರವೇಶದಿಂದ ವಾತಾವರಣ ತಿಳಿಯಾಯಿತು. ತಮ್ಮ ಮಾತಿಗೆ ಸಭೆಯಲ್ಲೇ ಎರಡೆರಡು ಬಾರಿ ಕ್ಷಮೆಯಾಚಿಸಿದರು ಸಚಿವ ಜಾರ್ಜ್

Share

Leave a comment

Leave a Reply

Your email address will not be published. Required fields are marked *

Don't Miss

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ ಮಹಿಳೆಯೊಬ್ಬರ ವಿಚಾರವಾಗಿ ಶೇಷಗಿರಿ...

Related Articles

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...

ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್...