Home Latest News ನಕ್ಸಲ್ ವಿಕ್ರಮ್ ಗೌಡ ಎನ್ ಕೌಂಟರ್ ನಕಲಿ : ನಿಲುಗುಳಿ ಪದ್ಮನಾಭ
Latest News

ನಕ್ಸಲ್ ವಿಕ್ರಮ್ ಗೌಡ ಎನ್ ಕೌಂಟರ್ ನಕಲಿ : ನಿಲುಗುಳಿ ಪದ್ಮನಾಭ

Share
Share

ಚಿಕ್ಕಮಗಳೂರು : ವಿಕ್ರಂಗೌಡನ ಹತ್ಯೆ ತೀವ್ರ ಖಂಡನೀಯ ಸಿ.ಎಂ ಹಾಗೂ ಗೃಹ ಸಚಿವರು ಎನ್ ಕೌಂಟರ್ ಸಮರ್ಥಿಸಿ ಕೊಂಡಿರೋದು ದುರಾದೃಷ್ಟಕರ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ವಿಕ್ರಂ ಗೌಡನ ಹತ್ಯೆ ಅತ್ಯಂತ ಖಂಡನೀಯವಾಗಿದ್ದು ಯಾರು ಅದನ್ನು ಒಪ್ಪುವಂತದ್ದಲ್ಲ, ಸತ್ಯವನ್ನು ತಿಳಿದುಕೊಳ್ಳದೆ ಒಮ್ಮುಖ ವರದಿ ನೋಡಿ ಹತ್ಯೆಯ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಯಾರೂ ಕೂಡ ಒಪ್ಪುಲ್ಲ. ಪೊಲೀಸರ ಎನ್ ಕೌಂಟರ್ ಕಥೆಯನ್ನು ಎನ್ಕೌಂಟರ್ ಗೊತ್ತಿರೋರು ಯಾರೂ ಕೂಡ ಒಪ್ಪಿಕೊಳ್ಳುವುದಿಲ್ಲ. ಇದು ಪ್ರಜಾತಂತ್ರವಾದಿಯೂ ಒಪ್ಪುವ ವಿಚಾರವೇ ಅಲ್ಲ. ಹತ್ಯೆ ಕಪೋಲ ಕಲ್ಪಿತವಾಗಿ ಸೃಷ್ಟಿ ಮಾಡಿರುವ ಎನ್ಕೌಂಟರ್. ಎಲ್ಲೋ ಹಿಡಿದು ಹಿಂಸೆ ನೀಡಿ ಸಾಯಿಸಿ ಕೊನೆಗೆ ಪೀತಬೈಲಿಗೆ ತಂದು ಮೃತ ದೇಹ ಹಾಕಿದ್ದಾರೆ.

ಇದರ ಜೊತೆಗೆ ಹತ್ಯೆಯ ಬಗ್ಗೆ ಮಾಧ್ಯಮದವರಿಗೂ ತಿಳಿಯದಂತೆ ಯಾರಿಗೂ ಮುಖ ತೋರಿಸದೆ ಎಲ್ಲಾ ವಿಚಾರವನ್ನು ವಂಚಿಸಿದ್ದಾರೆ. ಆರೋಪಿಯನ್ನು ಕೊಲೆ ಮಾಡಿ ಎಂದು ಎಲ್ಲೂ ಕೂಡ ಸಂವಿಧಾನದಲ್ಲಿ ಹೇಳಿಲ್ಲ. ವಿಕ್ರಂ ಗೌಡ ಎನ್ ಕೌಂಟರ್ ಬಗ್ಗೆ ಕೂಲಂಕುಶ ನ್ಯಾಯಾಂಗ ತನಿಖೆ ಆಗಬೇಕೆಂದು ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ, ದೇಶದ ಸಾಧನೆಗಳನ್ನು ಸ್ಮರಿಸುವ, ಸ್ವಾತಂತ್ರ್ಯದ ಮೌಲ್ಯಗಳನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು...

ಕಸ್ತೂರಿ ರಂಗನ್ ವರದಿ ಮರುಪರಿಶೀಲಿಸಲು ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ತಕ್ಷಣವೇ ಬರಗಾಲವೆಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮಲೆನಾಡಿನ 137 ಗ್ರಾಮಗಳಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಪುನಃ ಪರಿಶೀಲಿಸಿ ಜನವಸತಿ...

Related Articles

ಅಧಿಕಾರ ಎಂಬ ಮಾಯಾ ಜಿಂಕೆ ಮರೆಯಾಗಿದ್ದು ಏಕೆ ?

ಚಿಕ್ಕಮಗಳೂರು: ಕಳೆದ ನಾಲ್ಕು ವರೆ ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಸದಸ್ಯರಾಗ ಬೇಕಿದ್ದ ಗಾಯಿತ್ರಿ ಶಾಂತೇಗೌಡ...

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ-ಲೂಟಿಗಾಗಿ ಪೈಪೋಟಿ

ಚಿಕ್ಕಮಗಳೂರು: ಬಿಜೆಪಿ ಸರ್ಕಾರದಲ್ಲಿ ಶಾಸಕರ ನಡುವೆ ಕ್ಷೇತ್ರದ ಅಭಿವೃದ್ಧಿಗೆ ಪೈಪೋಟಿ ನಡೆದರೆ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ,ಲೂಟಿಗಾಗಿ...

ಸ್ವಾವಲಂಬನೆ-ಸಮಾಜ ಅವಕಾಶವೇ ಸಹಕಾರಿ ಚಳುವಳಿ ಉದ್ದೇಶ

ಚಿಕ್ಕಮಗಳೂರು: ಸಹಕಾರಿ ಚಳುವಳಿಯ ಮೂಲತತ್ವವೇ ಸ್ವಾವಲಂಬನೆ, ಪರಸ್ಪರ ಸಹ ಕಾರ, ಸಮಾನ ಅವಕಾಶ ಹಾಗೂ ಸಾಮಾಜಿಕ...

ಅಕ್ರಮ ಮರಳು ಸಾಗಾಟ: 407 ಲಾರಿ ವಶ, ಚಾಲಕ ಪೊಲೀಸ್ ವಶಕ್ಕೆ

ಶೃಂಗೇರಿ: ಪರವಾನಗಿ ಇಲ್ಲದೆ 407 ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಶೃಂಗೇರಿ ಪೊಲೀಸರು...