ಚಿಕ್ಕಮಗಳೂರು: ಲೋಕಸಭಾ ಸ್ಥಾನದಲ್ಲಿ ಮಹಿಳೆಯರಿಗೆ ಶೇ.೩೩ ಮೀಸಲಾತಿ ಮಂಡನೆ ಅನುಷ್ಟಾನ ಗೊಳಿಸದಂತೆ ತಡೆಹಿಡಿದ ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷದ ನಡೆಯನ್ನು ಖಂಡಿಸಿ ಶನಿವಾರ ನಾರಿಶಕ್ತಿ ವಂದನಾ ವತಿಯಿ ಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು.
ಈ ವೇಳೆ ಆರ್ಡಿಟರ್ ಅಸೋಸಿಯೇಷನ್ ಅಧ್ಯಕ್ಷೆ ಶ್ಯಾಮಲಾ ಎಂ.ರಾವ್ ಮಾತನಾಡಿ ಭಾರತೀಯ ಜನಸಂಖ್ಯೆ ಅನುಸಾರ ಶೇ.೫೦ ಮಹಿಳೆಯರು ದೇಶದಲ್ಲಿ ವಾಸಿಸುತ್ತಿದ್ದಾರೆ. ಆದರೆ ರಾಜಕೀಯವಾಗಿ ಶೇ.೩೩ ಮೀಸಲಾತಿ ಕಲ್ಪಿಸುತ್ತಿ ಲ್ಲ. ಆದರೆ ಹೊರದೇಶಗಳಲ್ಲಿ ಶೇ.೫೦ ರಿಂದ ೬೦ ರಷ್ಟು ಮೀಸಲಾತಿ ಮಹಿಳೆಯರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಆಧುನಿಕ ಭಾರತದಲ್ಲಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಮನೆ, ಮಕ್ಕಳು ಸೇರಿದಂತೆ ಕುಟುಂ ವನ್ನು ನಿಭಾಯಿಸುವ ಶಕ್ತಿ ಹೊಂದಿದ್ದು, ದೇಶದ ರಾಜಕೀಯ ಸ್ಥಾನದಲ್ಲಿ ಕಲ್ಪಿಸದಿರುವುದು ಶೋಚನೀಯ. ಕಳೆದ ೨೦೨೩ ಮೋ ದಿ ಸರ್ಕಾರ ಮಹಿಳಾ ಮೀಸಲಾತಿ ಅನುಮೋದನೆ ಸಾಕಷ್ಟು ತಯಾರಿ ನಡೆಸಿತ್ತು. ಇದೀಗ ಅನುಷ್ಟಾನಗೊಳಿಸುವ ವೇಳೆ ೫೪ ಮ ಂದಿ ಗೈರಾಗಿ ಮಸೂದೆಗೆ ಸೋಲಾಯಿತು ಎಂದರು.
ಕೇಂದ್ರ ಸರ್ಕಾರದಲ್ಲಿ ಮೀಸಲಾತಿ ಅನುಷ್ಟಾನಗೊಳಿಸಲು ಕನಿಷ್ಟ ೩೪೩ ಸದಸ್ಯರುಗಳ ಸಹಮತ ಅಗತ್ಯವಿದೆ. ಆದರೆ ಬಿಜೆ ಪಿ ಪಕ್ಷದಲ್ಲಿರುವುದು ೨೯೩ ಸ್ಥಾನಗಳು. ಉಳಿದ ಸದಸ್ಯರು ಶೇ.೩೩ ಮೀಸಲಾತಿಗೆ ಒಪ್ಪಿಕೊಳ್ಳದೇ ಸಭೆಗೆ ಗೈರಾಗುವ ಮೂಲಕ ಮಹಿಳೆಯರಿಗೆ ದ್ರೋಹವೆಸಗಿದ್ದಾರೆ. ಇದು ನೇರ ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾಗಾಂಧಿ, ಪ್ರಿಯಾಂಕಾ ಗಾಂಧಿಗೆ ಮಾತ್ರ ಮೀಸಲಾತಿಯಿದೆ. ಉಳಿದ ಸದಸ್ಯರಿಗೆ ಅವಕಾ ಶ ನೀಡುತ್ತಿಲ್ಲ. ಇಂದಿಗೂ ದೇಶದ ಅನೇಕ ಮಹಿಳೆಯರು ಸಂಸತ್‌ಗೆ ತೆರಳಿ ಜನಸಾಮಾನ್ಯರ ಧ್ವನಿಗೂಡಿಸುವ ಕೆಲಸ ಮಾಡ ಲು ತಯಾರಿದ್ದು, ಆದರೆ ಕಾಂಗ್ರೆಸ್ ಮಹಿಳಾ ವಿರೋಧಿ ನಡೆಯಿಂದ ಕೈಚೆಲ್ಲಿ ಕೂತಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಶೇ.೩೩ ಮೀಸಲಾತಿ ಲಭಿಸಿದ್ದಲ್ಲಿ ೮೦೦ಕ್ಕೂ ಹೆಚ್ಚು ಮಂದಿ ಸಂಸತ್ ಸದಸ್ಯ ರಾಗಲಿದ್ದಾರೆ. ಜೊತೆಗೆ ಮಹಿಳೆಯರಿಗೆ ಶೇ.೩೩ ಮೀಸಲಾತಿಯಡಿ ೨೭೩ ಮಹಿಳೆಯರಿಗೆ ಅವಕಾಶ ಲಭಿಸಲಿದೆ. ಆದರೂ ಮೋ ದಿ ಸರ್ಕಾರ ಕೈಗೊಂಡ ಕೆಲಸ ಎಂದಿಗೂ ಕೈಬಿಡುವುದಿಲ್ಲ. ಮುಂದೊಂದು ದಿನ ಮಹಿಳಾ ಮೀಸಲಾತಿ ಬಿಜೆಪಿ ಸರ್ಕಾರದ ಅ ವಧಿಯೊಳಗೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿ ಶೇ.೩೩ ಮೀಸಲಾತಿ ನೀಡುವುದು ರಾಜಕೀಯ ಪ್ರೇರಿತ ಎಂದೇಳುತ್ತಿದ್ದಾರೆ. ಮುಖ್ಯಮಂತ್ರಿಗಳಿ ಗೆ ದೇಶ ಹಾಗೂ ಮಹಿಳೆಯರ ಬಗ್ಗೆ ಅಪಾರ ಕಾಳಜಿಯಿದ್ದಲ್ಲಿ ಈ ರೀತಿ ಮಾತು ಹೇಳುತ್ತಿರಲಿಲ್ಲ. ಮುಂದೆ ಬಿಜೆಪಿ ಸರ್ಕಾರ ಮಹಿಳೆಯರ ಮೂಲ ಬೇಡಿಕೆಗೆ ಈಡೇರಿಸುವ ಮೂಲಕ ಸೂಕ್ತ ಸ್ಥಾನ ಕಲ್ಪಿಸಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್ ಮಾತನಾಡಿ ಭಾರತದ ಮಹಿಳೆಯರಿಗೆ ಶೇ.೩೩ ಮೀಸಲಾತಿ ಖಂಡಿತ ಒದಗಿ ಬರಲಿದೆ. ಇದಕ್ಕೆ ಅಡ್ಡಿಪಡಿಸುವ ಕಾಂಗ್ರೆಸ್ ಪಕ್ಷದವರಿಗೆ ಮುಂದೊಂದು ತಕ್ಕಪಾಠ ಬಿಜೆಪಿ ಕಲಿಸಲಿದೆ. ಮಹಿಳೆಯರ ಏಳಿಗೆ ಬಯಸದ ಕಾಂಗ್ರೆಸ್, ದೇಶ ಅಭಿವೃದ್ದಿಗೊಳಿಸುವುದು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ನಾರಿಶಕ್ತಿ ವಂದನಾ ಮುಖಂಡರಾದ ಜಸಂತಾ ಅನಿಲ್‌ಕುಮಾರ್, ಲಲಿತಾ ರವಿನಾಯ್ಕ್, ಪವಿತ್ರ, ಲೀಲಾ, ಗಿರಿಜಾ, ಪ್ರೀತಿ, ಶೋಭಾ, ಪುಷ್ಪ, ಹೇಮಾಸಿಂಗ್, ಸುಜಾತ, ಗೋವಿಂದ, ಗೀತಾ, ಕೋಮಲಾ, ಜ್ಯೋತಿ, ಗಗನ ಇದ್ದರು.
Women protest against anti-women Congress party’s move
Leave a comment