Home namma chikmagalur chikamagalur ಅಕ್ರಮಗಳ ತನಿಖೆಗೆ ಒತ್ತಾಯ ಪೊಲೀಸ್ ದಬ್ಬಾಳಿಕೆ ವಿರುದ್ದ ಪ್ರತಿಭಟನೆ
chikamagalurHomeLatest Newsnamma chikmagalur

ಅಕ್ರಮಗಳ ತನಿಖೆಗೆ ಒತ್ತಾಯ ಪೊಲೀಸ್ ದಬ್ಬಾಳಿಕೆ ವಿರುದ್ದ ಪ್ರತಿಭಟನೆ

Share
Share

ತರೀಕೆರೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಕೆಲವು ಸಂಘ ಸಂಸ್ಥೆಯವರು ಸ್ಥಳೀಯ ಶಾಸಕ ಶ್ರೀನಿವಾಸ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯ್ಕ್ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಮೂರು ವರ್ಷಗಳು ಮೌನವಾಗಿದ್ದವರು ಇದ್ದಕ್ಕಿದ್ದಂತೆ ಪ್ರತಿಭಟನೆಗೆ ಮುಂದಾಗಿರುವುದು ಏಕೆ ?

ಶಾಸಕ ಶ್ರೀನಿವಾಸ್ ಗೆ ಧಿಕ್ಕಾರ,ಇನ್ಸ್‌ಪೆಕ್ಟರ್ ರಾಮಚಂದ್ರ ನಾಯ್ಕ್ ಗೆ ಧಿಕ್ಕಾರ ಎಂದು ಕೂಗಿದ್ದಾರೆ. ಅಕ್ರಮಗಳ ಚಟುವಟಿಕೆ , ಕಳಪೆ ಕಾಮಗಾರಿ ಮತ್ತು ಕುಟುಂಬ ರಾಜಕಾರಣಕ್ಕೆ ಪೊಲೀಸರು ಸರ್ಪಗಾವಲಾಗಿದ್ದಾರೆ ಎಂದು ಭಾಷಣ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ತುಟಿ ಬಿಚ್ಚದವರು ಇದ್ದಕ್ಕಿದ್ದಂತೆ ಬೀದಿಗೆ ಇಳಿಯಲು ಕಾರಣವೇನು? ಎಂಬ ಪ್ರಶ್ನೆ ಸಹಜವಾಗಿದೆ. ಕಳೆದ ವಾರ ನಾಗಪ್ಪ ಕಾಲೋನಿ ಸಮೀಪ ಐದು ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗತ್ತಿದೆ ಇದು ಕಳಪೆ ಕಾಮಗಾರಿ ಎಂದು ಪುರಸಭಾ ಸದಸ್ಯ ಟಿ.ಎಂ.ಬೋಜ್ ರಾಜ್ ಕೆಲಸಕ್ಕೆ ತಡೆ ಒಡ್ಡಿದ್ದಾರೆ.

ತಕ್ಷಣ ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯ್ಕ ಬಂದು ಬೀದಿಯಲ್ಲಿ ಕೂಗಾಡಿ ಧಮಕಿ ಹಾಕಿರುವುದರ ಹಿಂದೆ ಶಾಸಕರ ಕೈವಾಡ ಇದೇ ಎಂದು ಆರೋಪಿಸಿ ಪ್ರತಿಭಟನೆಗೆ ಕರೆ ಕೊಡಲಾಗಿತ್ತು.

ಶಾಸಕ ಶ್ರೀನಿವಾಸ್ ನಡೆಸುತ್ತಿರುವ ಆಡಳಿತದ ಬಗ್ಗೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಕ್ಷೇತ್ರದಲ್ಲಿ ವಸೂಲಿ ಬಿಟ್ಟು ಮತ್ತೇನು ನಡೆಯುತ್ತಿಲ್ಲ. ಕಳಪೆ ಕಾಮಗಾರಿ, ನಕಲಿ ಬಿಲ್ ಗಳು ಪೊಲೀಸ್ ಕಾರ್ಯಭಾರದ ಬಗ್ಗೆ ಖಂಡಿಸಿ ಇನ್ನೂ ಮುಂದೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಮಾತಾನಾಡಿ ರಸ್ತೆ ಕಳಪೆ ಕಾಮಾಗಾರಿ ಕಳೆದ ಎರಡು ವರ್ಷಗಳಿಂದ ನಡೆಸಿ ವಸೂಲಿಗೆ ಇಳಿದಿರುವ ಶಾಸಕ ಶ್ರೀನಿವಾಸ್ ಮತ್ತು ಕುಟುಂಬ ಅಕ್ರಮ ಗಾಣಿಗಾರಿಕೆ, ಬ್ರಾಂಡಿ ಶಾಪ್ ಗಳಲ್ಲಿ ಪಾಲುದಾರಿಕೆ,ಇಸ್ಪೀಟು ,ಮಟ್ಕಾ ದಂಧೆ ಗೆ ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯ್ಕ ಟೊಂಕ ಕಟ್ಟಿಕೊಂಡು ನಿಂತಿದ್ದಾನೆ.ಹಲವರ ಮೇಲೆ ವಿನಾಕಾರಣ ದೂರು ದಾಖಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ನನ್ನ ಮೇಲೆ ದೂರು ದಾಖಲಿಸಿದ್ದಾರೆ ತಕ್ಷಣ ಇವರನ್ನು ಅಮಾನತು ಮಾಡಿ ತನಿಖೆ ನಡೆಸಲು ಆಗ್ರಹಿಸಿದರು.

ಪುರಸಭಾ ಸದಸ್ಯ ಬೋಜ್ ರಾಜ್ ಮಾತನಾಡಿ ತರೀಕೆರೆ ಕ್ಷೇತ್ರದಲ್ಲಿ ತುರ್ತುಪರಿಸ್ಥಿತಿ ಇದೆಯೇ ಜನಪ್ರತಿನಿಧಿಯಾಗಿ ನಾನು ಪ್ರಶ್ನೆ ಮಾಡಿದರೆ ಮನೆಯ ಬಳಿ ಪೊಲೀಸರನ್ನು ಕಳುಹಿಸಿ ಕೂಗಾಡುವಂತೆ ಮಾಡಿದ್ದಾರೆ. ರಸ್ತೆ,ಚರಂಡಿ, ಸೇತುವೆಗಳ ಹೆಸರಿನಲ್ಲಿ ಅಕ್ರಮವಾಗಿ ಬಿಲ್ ಮಾಡಲಾಗಿದೆ ಈ ಬಗ್ಗೆ ತನಿಖೆ ನಡೆಸಲು ಒತ್ತಾಯ ಮಾಡಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್.ಕೃಷ್ಣಮೂರ್ತಿ, ಅಜ್ಜಂಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರೇವಣ್ಣ,ಅರುಂಧತಿ, ಮತ್ತಿತರರು ಮಾತನಾಡಿದರು. ತರೀಕೆರೆ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಇದೆ.ಈಗ ನಡೆಯುತ್ತಿರುವ ಘಟನೆಗಳನ್ನು ನೋಡಿ ಜನ ಥೂ,ಚೀ ಎಂದು ಉಗಿಯುತ್ತಿರುವುದು ಮಾತ್ರ ಕಂಡು ಬರುತ್ತಿದೆ.

Why are you suddenly protesting after 3 years of silence?

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...