ಚಿಕ್ಕಮಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಬಿರುಗಾಳಿ ಬಿಸುತ್ತಿದೆ.ಮಂಡ್ಯ ಶಾಸಕ ರವಿ ಗಣಿಗ ಗಂಭೀರ ಆರೋಪ ಮಾಡಿ ಬಿಜೆಪಿಯವರು ನಮ್ಮ ಶಾಸಕರುಗಳಿಗೆ ಪಕ್ಷಾಂತರ ಮಾಡಲು ನೂರು ಕೋಟಿ ಅಫರ್ ಮಾಡಿದ್ದಾರೆ ಇದಕ್ಕೆ ಬೇಕಾದ ದಾಖಲೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರವಿ ಗಣಿಗ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯರ ಹೆಸರು ಹೇಳಿರುವುದು ಯಾಕೆ ?ತಮ್ಮಯ್ಯ ಇದು ಸುಳ್ಳು ನಾನು ನಿಷ್ಠಾವಂತ ಕಾಂಗ್ರೆಸ್ ಗ ಎನ್ನುತ್ತಿದ್ದಾರೆ.ಆದರೆ ಅವರ ವಿರೋಧಿಗಳು ಮತ್ತು ಹಿತ ಶತೃಗಳು ತಮ್ಮಯ್ಯ ಈಗಾಗಲೇ ಹಲವು ಪಕ್ಷಗಳನ್ನು ಪಕ್ಷಂತರ ಮಾಡಿರುವುದನ್ನು ಉಲ್ಲೇಖ ಮಾಡಿ ಮಾತನಾಡುತ್ತಿದ್ದಾರೆ.
ದಳ,ಕಾಂಗ್ರೆಸ್ ಬಿಜೆಪಿ ಮತ್ತೆ ಕಾಂಗ್ರೆಸ್ ಗೆ ಜಂಪ್ ಮಾಡಿರುವುದು ಸುಳ್ಳೇನಲ್ಲಾ ಮತ್ತೆ ಜಂಪ್ ಮಾಡಿದರೆ ತಪ್ಪೇನು ?ಎಂದು ಅವರ ಬಿಜೆಪಿ ಹಿತೈಷಿಗಳು ವಾದ ಮಾಡುತ್ತಿದ್ದಾರೆ.ತಮ್ಮಯ್ಯ ಎಲ್ಲಾ ಪಕ್ಷಗಳೊಂದಿಗೆ ಸರಸದಿಂದ ಇರುವುದು ಪುಷ್ಟಿ ಕೊಡುತ್ತದೆ.
ರಾಜ್ಯದಲ್ಲಿ ಇಬ್ಬರು ಶಾಸಕರ ಹೆಸರು ಪ್ರಸ್ತಾಪ ಮಾಡಿರುವ ರವಿ ಗಣಿಗ ಚಿಕ್ಕಮಗಳೂರು ಶಾಸಕ ಎಂದು ಹೇಳಿದ ತಕ್ಷಣ ತಮ್ಮಯ್ಯನವರ ಹೆಸರು ಏಕೆ ಹೇಳಬೇಕು ಎಂದು ಹಿಂಬಾಲಕರು ಅಕ್ಷೇಪ ಮಾಡುತ್ತಿದ್ದಾರೆ ಅದರಲ್ಲೂ ಬೆಂಕಿ ಇಲ್ಲದೆ ಹೊಗೆ ಬರುತ್ತಾದ ಎನ್ನುವವರು ಇದ್ದಾರೆ.
ಒಟ್ಟಾರೆ ರಾಜ್ಯದ ರಾಜಕಾರಣದಲ್ಲಿ ತಮ್ಮಯ್ಯನವರ ಹೆಸರು ಪದೇ,ಪದೇ ಪಕ್ಷಾಂತರದೊಂದಿಗೆ ತಳುಕು ಹಾಕಿಕೊಂಡಿದೆ ಇದಕ್ಕೆ ಕಲ್ಯಾಣಮಸ್ತು ಎನ್ನುವ ಗ್ಯಾರಂಟಿ ಬೇಕಾಗಿದೆ.
Leave a comment