Home Crime News ನಕ್ಸಲ್ ವಿಕ್ರಂಗೌಡ ಎನ್ ಕೌಂಟರ್ : ಕಾಫಿನಾಡಲ್ಲಿ ಕೂಂಬಿಂಗ್ ತೀವ್ರ
Crime News

ನಕ್ಸಲ್ ವಿಕ್ರಂಗೌಡ ಎನ್ ಕೌಂಟರ್ : ಕಾಫಿನಾಡಲ್ಲಿ ಕೂಂಬಿಂಗ್ ತೀವ್ರ

Share
Share

ಚಿಕ್ಕಮಗಳೂರು :

ಉಡುಪಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಫಿನಾಡನಲ್ಲಿಯೂ ಎ.ಎನ್.ಎಫ್, ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ

ವಾರದ ಹಿಂದಷ್ಟೆ ಕಾಡಂಚಿನ ಕುಗ್ರಾಮಕ್ಕೆ ಬಂದಿದ್ದ ನಕ್ಸಲ್ ನಾಯಕಿ ಮುಂಡಗಾರು ಲತಾ ತಂಡದ ವಿಕ್ರಮ್ ಗೌಡ ಎಎನ್ಎಫ್ ಎನ್ ಕೌಂಟ್ ಗೆ ಬಲಿಯಾಗಿದ್ದಾನೆ ಕಳೆದ ವಾರದ ಹಿಂದೆ ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮಕ್ಕೆ ಭೇಟಿ ನೀಡಿದ್ದ ಮುಂಡಗಾರು ಲತಾ, ಜಯಣ್ಣ ತಂಡ ಸುಬ್ಬೇಗೌಡ ಎಂಬುವರ ಮನೆಯಲ್ಲಿ ಊಟ ಮಾಡಿ, ಗನ್ ಬಿಟ್ಟು ಹೋಗಿದ್ದರು. ನಂತರ ತೀವ್ರ ಕಾರ್ಯಾಚರಣೆ ನಡೆಸುತ್ತಿರೋ ಪೊಲೀಸರು ಅಲರ್ಟ್ ಆಗಿದ್ದರು.

ಇದೀಗ ವಿಕ್ರಂ ಗೌಡ ಎನ್ಕೌಂಟರ್ ಹಿನ್ನೆಲೆ ಕೂಂಬಿಂಗ್ ಮತ್ತಷ್ಟು ಚುರುಕು ಗೊಳಿಸಿದ್ದಾರೆ. ಇತ್ತೀಗಷ್ಟೆ, ಕೇರಳದಿಂದ ತಮ್ಮ ರಾಜ್ಯಗಳತ್ತ ವಾಪಸ್ಸಾಗಿದ್ದ ನಕ್ಸಲರು ಬಗ್ಗೆ ಕೂಂಬಿಂಗ್ ನಡೆಯುತ್ತಿತ್ತು, ಮುಂಡಗಾರು ಲತಾ, ವಿಕ್ರಂ ಗೌಡ, ವನಜಾಕ್ಷಿ, ಜಯಣ್ಣ ಕೇರಳದಿಂದ ಹಿಂದಿರುಗಿದ್ರು ವಿಕ್ರಂ ಗೌಡ ತನ್ನ ಜಿಲ್ಲೆ ಉಡುಪಿಯಲ್ಲೇ ಇದ್ದು, ಲತಾ-ಜಯಣ್ಣ ಕೊಪ್ಪಾಗೆ ಬಂದು ಹೋಗಿದ್ರು, ಮುಂಡಗಾರು ಲತಾ ವಿರುದ್ಧ ಚಿಕ್ಕಮಗಳೂರಲ್ಲಿ 38 ಪ್ರಕರಣಗಳಿವೆ ವಿಕ್ರಂ ಎನ್ಕೌಂಟರ್ ಹಿನ್ನೆಲೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ತೀವ್ರ ಕೂಂಬಿಂಗ್ ಮತ್ತಷ್ಟು ಹೆಚ್ಚಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಚಿಕ್ಕಮಗಳೂರು:  ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1.30 ರಿಂದ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ...