ಚಿಕ್ಕಮಗಳೂರು : ಎನ್ ಕೌಂಟರ್ ಗೆ ಬಲಿಯಾದ ನಕ್ಸಲ್ ವಿಕ್ರಂಗೌಡ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 13 ಕೇಸ್ ಗಳು ಇವೆ. ಕೊಲೆ, ಕೊಲೆ ಯತ್ನ, ಡಕಾಯಿತಿ, ಜನರನ್ನು ಬೆದರಿಸಿರೋದು, ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿರೋದು, ಆಯುಧ ಹಿಡಿದು ಓಡಾಡಿರುವುದು ಸೇರಿ 13 ಪ್ರಕರಣಗಳಲ್ಲಿ ವಿಕ್ರಮ್ ಪೊಲೀಸರಿಗೆ ಬೇಕಾಗಿದ್ದ 2007 ರಲ್ಲಿ ಪೊಲೀಸ್ ಮಾಹಿತಿದಾರ ಎಂದು ವೆಂಕಟೇಶ್ ಎಂಬುವನ ಕೊಲೆ ಈತನ ಮೇಲಿದ್ದ ಪ್ರಮುಖ ಪ್ರಕರಣ ಆಗಿದೆ. ಇಷ್ಟು ಪ್ರಕರಣಗಳಲ್ಲಿ ಕಾಫಿನಾಡ ಪೊಲೀಸರಿಗೂ ಬೇಕಾಗಿದ್ದ ವಿಕ್ರಂಗೌಡ ಸದ್ಯ ಹತನಾಗಿದ್ದಾನೆ
ನಕ್ಸಲ್ ನಾಯಕರಲ್ಲಿ ಒಬ್ಬನಾಗಿದ್ದ ವಿಕ್ರಂಗೌಡ ಸರ್ಕಾರದ ಜನವಿರೋಧಿ ನೀತಿಗಳಿಂದ ನಕ್ಸಲ್ ಚಳುವಳಿಗೆ ಧುಮುಕಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿ ಮುಖಂಡನಾಗಿದ್ದ ಈತ ಕಸ್ತೂರಿ ರಂಗನ್ ವರದಿ, ಅರಣ್ಯ ಒತ್ತುವರಿ ತೆರವಿಗೆ ಕೂಡಾ ತೀವ್ರ ವಿರೋಧ ವ್ಯಕ್ತಪಡಿಸಿದ್ದನು. ಮೂಲತಃ ಕರಾವಳಿಯ ಹೆಬ್ರಿ ತಾಲೂಕಿನಿಂದ ಕಾರ್ಮಿಕ ನಾಯಕನಾಗಿದ್ದ ವಿಕ್ರಂ ನಂತರ ಭೂಗತನಾಗಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದು ಪ್ರಮುಖ ನಾಯಕ ಎನಿಸಿಕೊಂಡಿದ್ದ ಕಳೆದ 20 ವರ್ಷಗಳಿಂದ ನಕ್ಸಲನಾಗಿ ಗುರುತಿಸಿಕೊಂಡಿದ್ದ ವಿಕ್ರಂಗೌಡ ಹಲವು ಪೊಲೀಸ್ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಆಗಾಗ್ಗೆ ಕಾಣಿಸಿಕೊಂಡಿದ್ದ ನಂತರ ಮಲೆನಾಡಿಲ್ಲಿ ಹೋರಾಟಕ್ಕೆ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ಸೇರಿಕೊಂಡು ಅಲ್ಲಿ ಸಕ್ರಿಯವಾಗಿದ್ದ ಅಲ್ಲದೇ ಕರ್ನಾಟಕದ ನಕ್ಸಲರಾದ ಮುಂಡಗಾರು ಲತಾ , ವನಜಾಕ್ಷಿ ಜಯಣ್ಣ ಸೇರಿದಂತೆ ಹಲವರು ಕಳೆದ ತಿಂಗಳ ಹಿಂದಷ್ಟೇ ಅಲ್ಲಿಂದ ಕಾಲ್ಕಿತ್ತು ಕರ್ನಾಟಕಕ್ಕೆ ವಾಪಸ್ಸಾಗಿದ್ದರು
Leave a comment