Home namma chikmagalur chikamagalur ಶೃಂಗೇರಿ ರಾಜಕೀಯ ಮಿಕ್ಸ್ ಮಸಾಲಾ-ಎದೆ ಬಡಿತ ಯಾರಿಗೆ.
chikamagalurHomeLatest Newsnamma chikmagalur

ಶೃಂಗೇರಿ ರಾಜಕೀಯ ಮಿಕ್ಸ್ ಮಸಾಲಾ-ಎದೆ ಬಡಿತ ಯಾರಿಗೆ.

Share
Share

ಶೃಂಗೇರಿ: ಶೃಂಗೇರಿ ವಿಧಾನ ಸಭಾ ಸದಸ್ಯರಾದ ಟಿ.ಡಿ.ರಾಜೇಗೌಡರ ಆಯ್ಕೆಯಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಅನ್ಯಾಯಯಾಗಿದೆ ಎಂದು ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸಿದ್ದ ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ಅರ್ಜಿ ಹೈಕೋರ್ಟ್ ಪುರಸ್ಕರಿಸಿ ಮೇ 2 ರಂದು ಅಂಚೆ ಮತಗಳ ಏಣಿಕೆಗೆ ಆದೇಶ ನೀಡಿದೆ.

ಮತಗಳ ಏಣಿಕೆಗಾಗಿ ಈಗಾಗಲೇ ಜಿಲ್ಲಾ ಆಡಳಿತ ತಯಾರಿ ನಡೆಸಿದೆ.ಫಲಿತಾಂಶ ಏನೇ ಬಂದರು ಮತ್ತೆ ಸುಪ್ರೀಂ ಕೋರ್ಟ್ ಗೆ ಹೋಗಲೇ ಬೇಕಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.

ರಾಜೇಗೌಡರು 205 ಮತಗಳ ಅಂತರದಿಂದ ವಿಜೇಯತರಾಗಿದ್ದು 299 ಮತಗಳನ್ನು ತಿರಸ್ಕರಿಸಿರುವುದು ಸೇರಿದಂತೆ ಅಂಚೆ ಮತಗಳನ್ನು ಮತ್ತೊಮ್ಮೆ ಏಣಿಕೆ ಮಾಡಬೇಕಾಗಿದೆ.ಹೀಗಾಗಿ ಜೀವರಾಜ್ ಮತ್ತು ರಾಜೇಗೌಡರ ಹೃದಯ ಬಡಿತ ಯಾರಿಗೆ ಬೇಕಾದರೂ ಆಗಬಹುದು ಎಂದು ನಿರೀಕ್ಷೆ ಮಾಡುವಂತಿಲ್ಲ ಏಕೆಂದರೆ ಯಾರ ಪರ ಫಲಿತಾಂಶ ಬಂದರು ಮತ್ತೊಮ್ಮೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡುವ ಅವಕಾಶವಿದೆ.

ಈಗಾಗಲೇ ವಿಧಾನ ಪರಿಷತ್ ಸದಸ್ಯರಾದ ಪ್ರಾಣೇಶ್ ಮತ್ತು ಗಾಯಿತ್ರಿ ಶಾಂತೇಗೌಡ ಆಯ್ಕೆ ತಕರಾರು ಸುಪ್ರೀಂ ಕೋರ್ಟ್ ಆದೇಶದಂತೆ ಏಣಿಕೆ ಕಾರ್ಯ ಕೂಡ ಮುಗಿದರು ಫಲಿತಾಂಶ ಮಾತ್ರ ಪ್ರಕಟವಾಗಿಲ್ಲ.ಹೀಗಾಗಿ ಏನೇ ಫಲಿತಾಂಶ ಬಂದರು ಅವಧಿ ಮುಗಿಯುವವರೆಗೆ ಟಾಕು ಠೀಕಾಗಿ ರಾಜೇಗೌಡ ಓಡಾಡುತ್ತಾರೆ ಎಂದು ಅಂದಾಜಿಸಲಾಗುತ್ತಿದೆ.

ಜಿಲ್ಲೆಯಲ್ಲಿ ವಿಧಾನ ಪರಿಷತ್ ಮತ್ತು ವಿಧಾನ ಸಭಾ ಕ್ಷೇತ್ರಗಳ ತಕರಾರು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಮುಂದಿನ ವಿಧಾನ ಸಭಾ ಚುನಾವಣೆ ರಂಗೇರುವುದು ಖಚಿತ.ಬಿಜೆಪಿಯಲ್ಲಿ ಗದ್ದೆ ಮನೆ ವಿಶ್ವನಾಥ ಎಂಟ್ರಿ ಕೊಟ್ಟಿರುವುದು ಜೀವರಾಜ್ ಪರಿಸ್ಥಿತಿ ಏನು ಎಂದು ಚರ್ಚೆ ಅಗುತ್ತಿದೆ.ಇದರ ಜೊತೆಗೆ ಮಲೆನಾಡಿನಲ್ಲಿ ಝಣ,ಝಣ ಕಾಂಚಾಣ ಸದ್ದು ಮಾಡುವುದು ಮಾತ್ರ ಖಚಿತ ಎನ್ನಲಾಗಿದೆ.

ಬಿಜೆಪಿ ಜನತಾದಳ ಒಟ್ಟಾಗಿ ಚುನಾವಣೆಗೆ ಹೋದರೆ ಕಾಂಗ್ರೆಸ್ ಗೆ ಸಂಕಷ್ಟ ಎನ್ನಲಾಗುತ್ತಿದೆ.ಆದರೂ ರಾಜೇಗೌಡರು ಪವರ್ ಪುಲ್ ಅಭ್ಯರ್ಥಿಯಾಗಿರುವುದು ಹಣ ಬಲ ಕೂಡ ನೆರವಿಗೆ ಬರುತ್ತದೆ ಎಂದು ಕಟ್ಟಾ ಕಾಂಗ್ರೆಸ್ಸಿಗರ ಅಭಿಪ್ರಾಯವಾಗಿದೆ.

Sringeri political mix masala-who is the chest beating for?

Share

Leave a comment

Leave a Reply

Your email address will not be published. Required fields are marked *

Don't Miss

ಡಾ.ಮಂಜುನಾಥ್ ಚಿಕ್ಕ‌ಮಗಳೂರು ಡಿಎಚ್ಒ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕ‌ಮಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಎಚ್.ಕೆ.ಮಂಜುನಾಥ್ ನೇಮಕಗೊಂಡಿದ್ದಾರೆ. ಈ ಹಿಂದೆ ಡಿಎಚ್ ಒ ಆಗಿದ್ದ ಅಶ್ವಥ್ ಬಾಬು ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಸಂತಾನೋತ್ಪತ್ತಿ...

ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ...

Related Articles

ಕಳಸದಲ್ಲಿ ಕಾಡುಕೋಣ ದಾಳಿಗೆ ಮಹಿಳೆ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಸಮೀಪ ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ...

ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ

ಚಿಕ್ಕಮಗಳೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ...

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್...