ಚಿಕ್ಕಮಗಳೂರು: ವಿವಿಧ ಸಾಮಾಜಿಕ ಸೇವೆ ಸಲ್ಲಿಸುವ ಮೂಲಕ ರೋಟರಿ ಕಾಫಿ ಲ್ಯಾಂಡ್ ನ ಪದಾಧಿಕಾರಿಗಳು ಸಂಸ್ಥೆಯ ಬೆಳ್ಳಿ ಹಬ್ಬವನ್ನು ನಗರದಲ್ಲಿ ಇತ್ತೀಚೆಗೆ ಅರ್ಥಪೂರ್ಣವಾಗಿ ಆಚರಿಸಿದರು.
ಇತಿಹಾಸ ಪ್ರಸಿದ್ಧ ಶ್ರೀ ಬೋಳ ರಾಮೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಪದಾಧಿಕಾರಿಗಳು ದೇವಾಲಯದ ಆವರಣದಲ್ಲಿ ಬನ್ನಿ ಮತ್ತು ಬಿಲ್ವಪತ್ರೆ ಸಸಿ ಗಳನ್ನು ನೆಟ್ಟರು, ನಂತರ ಹೀರೆಕೊಳಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಆರು ಹಸಿರು ಬೋರ್ಡ್ ಮತ್ತು ಟೆಸ್ಟ್ ಬೋರ್ಡ್ ಗಳನ್ನು ಕೊಡುಗೆಯಾಗಿ ನೀಡಿದರು.
ಶಾಲೆಯ ಆವರಣದಲ್ಲಿ ೩೫ ವಿವಿಧ ಜಾತಿಗಳ ಸಸಿಗಳನ್ನು ನೆಡಲಾಯಿತು, ಇದೇ ವೇಳೆ ನೀನಾಸಂ ನ ಕಲಾವಿದೆ ಪ್ರತಿಭಾ ಅವರಿಂದ ನೈರ್ಮಲ್ಯ, ಶುಚಿತ್ವ ಕುರಿತು ಹಾಗೂ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ ಬೇಬಿ ಮತ್ತು ಡಾ ಪ್ರಿಯಾಂಕ ಅವರಿಂದ ರೋಗಗಳನ್ನು ತಡೆಗಟ್ಟುವಿಕೆ, ಚಿಕಿತ್ಸಾ ವಿಧಾನ, ಆರೋಗ್ಯದ ಕಾಳಜಿ ಬಗ್ಗೆ ಉಪನ್ಯಾಸ ನಡೆಯಿತು.
ನಂತರ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ತೆರಳಿದ ಪದಾಧಿಕಾರಿಗಳು ೬೦ ನವಜಾತ ಶಿಶುಗಳಿಗೆ ಸ್ಲೀಪಿಂಗ್ ಪ್ಯಾಡ್ ಗಳನ್ನು ವಿತರಿಸಿದರು, ಬೀದಿ ಬದಿ ವ್ಯಾಪಾರಿಗಳಿಗೆ ಮಳೆ ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೊಡೆಗಳನ್ನು ನೀಡಿದರು, ವೈದ್ಯರ ದಿನಾಚರಣೆ ಪ್ರಯುಕ್ತ ಎಂಟು ವೈದ್ಯರನ್ನು ಸನ್ಮಾನಿಸಿ, ಗೌರವಿಸಿದರು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು.
ಈ ವೇಳೆ ಮಾತನಾಡಿದ ರೋಟರಿ ಕಾಫಿ ಲ್ಯಾಂಡ್ ನ ನೂತನ ಅಧ್ಯಕ್ಷ ನಾಗೇಶ್ ಕೆಂಜಿಗೆ ಈ ವ?ದ ಡಿಸೆಂಬರ್ ಗೆ ಸಂಸ್ಥೆ ೨೫ ವ?ಗಳನ್ನು ಪೂರೈಸಲಿದ್ದು ಆ ಹಿನ್ನೆಲೆಯಲ್ಲಿ ಇಡೀ ವ? ಹಲವಾರು ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ರೋಟರಿ ಕಾಫಿ ಲ್ಯಾಂಡ್ ಸೇವೆಗೆ ಹೆಸರಾದ ಸಂಸ್ಥೆಯಾಗಿದ್ದು ಕಳೆದ ೨೫ ವ?ಗಳಲ್ಲಿ ಅದು ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿದೆ ಮುಂದಿನ ದಿನಗಳಲ್ಲೂ ಅದನ್ನು ಮುಂದುವರೆಸಲಿದೆ ಎಂದು ಹೇಳಿದರು
ರೋಟರಿ ಕ್ಲಬ್ ನ ವಲಯ ಸಹಾಯಕ ರಾಜ್ಯಪಾಲ ಪ್ರವೀಣ್ ನಹರ್, ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ಪಿ.ತನೋಜ್ ಕುಮಾರ್, ಕಾರ್ಯದರ್ಶಿ ಎಂ.ಆನಂದ್, ಪದಾಧಿಕಾರಿಗಳಾದ ಗುರುಮೂರ್ತಿ, ಎಂ. ಪಿ. ವಿಕ್ರಂ, ವಿವೇಕ್, ಜಿಲ್ಲಾ ಸಜನ್ ಡಾ. ಮೋಹನ್ ಕುಮಾರ್, ಡಾ ಶಶಿಕಲಾ, ಬಿ. ಎನ್. ಸುರೇಶ್, ನಾಸೀರ್ ಹುಸೇನ್, ರವೀಂದ್ರನಾಥ್ ನಾಯ್ಡು, ಗುರುಪ್ರಸಾದ್, ಎಚ್. ಕೆ. ಮಂಜುನಾಥ್ ಹಾಜರಿದ್ದರು.
Silver festival is a meaningful celebration by doing social service
Leave a comment