ಕೊಪ್ಪ: ಇತ್ತೀಚೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ಮೃತರಾದ ವಿದ್ಯಾರ್ಥಿನಿ ಶಮಿತ (೧೫) ಪ್ರಕರಣವನ್ನು ತನಿಖೆ ನಡೆಸಬೇಕು, ಸಾವಿನ ಬಗ್ಗೆ ಸತ್ಯಾಂಶ ತಿಳಿಯ ಬೇಕು, ವಸತಿ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ನನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕು ಎಂದು ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ವೀರಭದ್ರ ದೇವಸ್ಥಾನದಿಂದ ಹೊರಟ ಪ್ರಗತಿ ಪರ ಸಂಘಟನೆಗಳ ಮೆರವಣಿಗೆ ಬಸ್ ನಿಲ್ದಾಣದ ಆವರಣದಲ್ಲಿ ಸಭೆಗೊಂಡಿತು. ಮೆರವಣಿಗೆಯಲ್ಲಿ ವಸತಿ ಶಾಲೆಯ ಆಡಳಿತ ವರ್ಗದ ವಿರುದ್ಧ ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿದರು. ನಿಪಕ್ಷಪಾತವಾದ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಪ್ರಗತಿ ಸಂಘಟನೆ ಮುಖಂಡ ಕೆ.ಎಲ್ ಆಶೋಕ್ ಮಾತನಾಡಿ, ಮಲೆನಾಡಿನಲ್ಲಿ ಶಿಕ್ಷಣ ಪಡೆಯುವುದು ಕಷ್ಟವಾಗಿದೆ. ಅಂತಹ ವೇಳೆಯಲ್ಲಿ ವಿದ್ಯಾರ್ಥಿಯರು ಇಂದು ಶಾಲೆ, ವಸತಿ ಶಾಲೆಗಳಿಗೆ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ವೇಳೆಯಲ್ಲಿ ವಸತಿ ಶಾಲೆಯಲ್ಲಿ ಪದೇ ಪದೇ ಸಾವಾಗುತ್ತಿರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಶಾಸಕ ರಾಜೇಗೌಡರು ಅಲ್ಲಿನ ಪ್ರಾಂಶುಪಾಲರನ್ನು ವಜಾದಲ್ಲಿ ಇಟ್ಟು ತನಿಖೆ ನಡೆಸುವಂತೆ ನೋಡಿಕೊಳ್ಳಬೇಕು ಎಂದರು.
ಡಿಎಸ್ಎಸ್ ಮುಖಂಡ ರಾಜಾಶಂಕರ್ ಮಾತನಾಡಿ, ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ಶುಚಿತ್ವ ಇಲ್ಲ. ವಿದ್ಯಾರ್ಥಿಗಳ ಪಾಲಕರನ್ನು ವಸತಿ ಗೃಹದ ಬಒಳಗಡೆ ಇಲ್ಲಿನ ಶಿಕ್ಷಕರು ಬಿಡುವುದಿಲ್ಲ. ವಸತಿ ಗೃಹದ ವಾತಾವರಣ ಭಯದ ವಾತಾವರಣವಿದೆ. ಪ್ರಾಂಶುಪಾಲರ ಈ ಘಟನೆಯ ಹೊಣೆಯನ್ನು ಹೊರಬೇಕು ಎಂದರು.
ಶಮಿತಳ ದೊಡ್ಡಮ್ಮ ರಾಜೀವಿ ಮಾತನಾಡಿ, ವಿದ್ಯಾರ್ಥಿನಿ ಸಾವಿನ ಬಗ್ಗೆ ಮೂಲ ಕಾರಣವನ್ನು ತನಿಖೆಯ ಮೂಲಕ ಬಹಿರಂಗ ಪಡಿಸಿಬೇಕು. ವಿದ್ಯಾರ್ಥಿನಿ ಕಿರುಕುಳಕ್ಕೆ ಒಳಗಾಗಿ ಸಾವನ್ನಪ್ಪಿರುದೇ ಅಥವಾ ವೈಯುಕ್ತಿಕ ಕಾರಣದಿಂದ ಆಗಿರುವುದೇ ಎಂದು ತಿಳಿಸಬೇಕು. ವಿದ್ಯಾರ್ಥಿನಿ ಮೃತ ಹೊಂದಿದ ದಿನ ಆಕೆಯ ತಾಯಿ ೪೦ ಸಲ ವಾರ್ಡ್ನ್ಗೆ ಕರೆ ಮಾಡಿದ್ದಾರೆ. ಕರೆಗೆ ಉತ್ತರ ಸಿಕ್ಕಿಲ್ಲ. ಯಾಕೆ ಎಂದು ಪ್ರಶ್ನಿಸಿದರು.
ಪ್ರಾಂಶುಪಾಲ ಬೇಜಾವಾಬ್ದಾರಿ ಈ ಸಾವಿಗೆ ಕಾರಣವಾಗಿದೆ. ಅವರನ್ನು ಕೆಲಸದಿಂದ ವಜಾ ಮಾಡಬೇಕು. ವಾರ್ಡನ್ ಅವರನ್ನು ಕೆಲಸದಿಂದ ತೆಗೆಯಬೇಕು. ಡೆಟ್ನೋಟ್ ಇದೆ ಅಂತಾ ಹೇಳುತ್ತಿದ್ದಾರೆ. ಆ ಡೆಟ್ನೋಟ್ ನಮಗೆ ಯಾಕೆ ನೀಡಿಲ್ಲ ಎಂದು ಪ್ರಶ್ನೆ ಮಾಡಿದರು.
ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ ಮಾತನಾಡಿ, ಪ್ರತಿಭಟನಾ ಸಭೆಯಲ್ಲಿ ಶಾಸಕರು ಕೂತು ನಮ್ಮ ಸಮಸ್ಯೆ, ದೂರನ್ನು ಆಲಿಸಬೇಕಿತ್ತು. ಅಧಿಕಾರಿಗಳನ್ನು ಕರೆದು ಕ್ರಮ ತೆಗೆದುಕೊಳ್ಳಬೇಕಿತ್ತು. ಅಧಿಕಾರಕ್ಕೆ ಯಾವ ಪಕ್ಷ ಬೇಕಾದರು ಅಧಿಕಾರಕ್ಕೆ ಬರಬಹುದು. ಹೆಣದ ಮೇಲೆ ರಾಜಕಾರಣ ಬೇಡ ಎಂದದು.
ಕರವೇ ಮುಖಂಡರಾದ ಪ್ರೇಮಾ ಶ್ರೀನಿವಾಸ್ ಮಾತನಾಡಿ, ರಾಜಕಾರಣವನ್ನು ಬಿಟ್ಟು ಬಾಲಕಿ ಸಾವಿಗೆ ನ್ಯಾಯ ದೊರತಕಿಸುವ ಪ್ರಯತ್ನ ಮಾಡಬೇಕಾಗಿದೆ. ವಾರ್ಡನ್ ಹಾಗೂ ಪ್ರಾಂಶುಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪ್ರತಿಭಟನಾಕಾರರ ಸಮಸ್ಯೆ ಆಲಿಸಬೇಕಿತ್ತು: ಪ್ರತಿಭಟನೆ ನಡೆಯುತ್ತಿರು ಮಧ್ಯೆದಲ್ಲಿ ಶಾಸಕರು ಆಗಮಿಸಿ ಸಭೆಯಿದೆ ಎಂದು ತೆರಳಿರುವುದು ಸರಿಯಲ್ಲ. ಪ್ರತಿಭಟನೆಯಲ್ಲಿ ಇದ್ದು ಆಲಿಸಬೇಕಿತ್ತು. ಅಧಿಕಾರಿಗಳು ಕಾಯುತ್ತಿದ್ದರು. ಆದರೇ, ಇಲ್ಲಿ ಮುಖ ತೋರಿಸಿ ಅಲ್ಲಿಗೆ ತೆರಳಿರುವುದು ಸರಿಯಲ್ಲ. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಯ ಹೋರಾಟಗಾರು ಭಾಗಿಯಾಗಿದ್ದರು. ಮಳೆಯನ್ನು ಲೆಕ್ಕಿಸದೇ ಹೋರಾಟ ಮಾಡುತ್ತೀರುವ ಶಾಸಕ ರಾಜೇಗೌಡರು ನಡೆದುಕೊಂಡಿರುವ ರೀತಿ ಸರಿಯಲ್ಲ ಎಂದು ಕರವೇ ನಾಯಕಿ ಪ್ರೇಮಾ ಶ್ರೀನಿವಾಸ್ ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಬಿಎಸ್ಪಿ ಮುಖಂಡ ಆನಂದ್, ಕಾಂಗ್ರೆಸ್ ಮುಖಂಡ ಸುದೀರ್ ಕುಮಾರ್ ಮುರೊಳ್ಳಿ, ಬಜರಂಗದಳ ಮಾಜಿ ಸಂಚಾಲಕ ರಾಕೇಶ್ ಹಿರೇಕೊಡಿಗೆ ಮುಂತಾದವರು ಮಾತನಾಡಿದರು.
Shamita case: Protest in Koppal demanding a higher investigation
Leave a comment