Home namma chikmagalur chikamagalur ಜ.25ಕ್ಕೆ ಬೆಳವಾಡಿಯಲ್ಲಿ ಸಾಧನಾ ಧಾಮ ಸೂರ್ಯ ಮಂದಿರ-ಗೋಶಾಲೆ ಉದ್ಘಾಟನೆ
chikamagalurHomeLatest Newsnamma chikmagalur

ಜ.25ಕ್ಕೆ ಬೆಳವಾಡಿಯಲ್ಲಿ ಸಾಧನಾ ಧಾಮ ಸೂರ್ಯ ಮಂದಿರ-ಗೋಶಾಲೆ ಉದ್ಘಾಟನೆ

Share
Oplus_153223200
Share

ಚಿಕ್ಕಮಗಳೂರು: ತಾಲ್ಲೂಕು ಬೆಳವಾಡಿಯಲ್ಲಿ ಸಾಧನಧಾಮ, ಸೂರ್ಯಮಂದಿರ ಹಾಗೂ ಗೋಶಾಲೆ ಉದ್ಘಾಟನಾ ಸಮಾರಂಭ ಜ.೨೩ ರಿಂದ ೨೫ ರವರೆಗೆ ಜರುಗಲಿದೆ ಎಂದು ಯೋಗಕ್ಷೇಮ ಯೋಗ ಸಾಧನಾ ಧಾಮದ ಸಂಸ್ಥಾಪಕ ವಿರೂಪಾಕ್ಷ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.೨೩ ರಂದು ಹೋಮ, ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದ್ದು, ೨೪ ರಂದು ಬೆಂಗಳೂರಿನ ಯೋಗ ಬಂಧುಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುಮಾರು ೮ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೂರ್ಯ ದೇವಸ್ಥಾನ ಹಾಗೂ ಪುರಿ ಜಗನ್ನಾಥ ದೇವಸ್ಥಾನದ ರೀತಿ ಮೂರು ಗೋಪುರಗಳು ಜೊತೆಗೆ ಕೃಷ್ಣನ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಕೋನಾರ್ಕ್ ಸೂರ್ಯ ದೇವಸ್ಥಾನದ ಮಾದರಿಯಲ್ಲಿ ರಥದ ಆಕೃತಿಯಲ್ಲಿ ದೇವಸ್ಥಾನ ಇದ್ದು, ಅಯೋಧ್ಯೆ ಬಾಲರಾಮನ ವಿಗ್ರಹದ ಕೆತ್ತನೆಯನ್ನು ಮಾಡಿರುವ ಮೈಸೂರಿನ ಅರುಣ್ ಯೋಗಿರಾಜ್ ಅವರು ಈ ಸೂರ್ಯ ದೇವರ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳವಾಡಿ ಗ್ರಾಮದವರೇ ಆದ ಖ್ಯಾತ ಹೋಮಿಯೋಪತಿ ತಜ್ಞ ನಾಡೋಜ ಡಾ. ಬಿ.ಟಿ ರುದ್ರೇಶ್ ವಹಿಸಲಿದ್ದು, ಖ್ಯಾತ ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ, ಚಲನಚಿತ್ರ ನಟ ಶಶಿಕುಮಾರ್, ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಂಡೂರಿನ ಶಾಸಕರಾದ ಶ್ರೀಮತಿ ಅನ್ನಪೂರ್ಣ ತುಕಾರಾಮ ಅವರು ಆಗಮಿಸುತ್ತಿದ್ದಾರೆಂದು ವಿವರಿಸಿದರು.

ಸೂರ್ಯ ದೇವಸ್ಥಾನ ಸಾಧನಾ ಧಾಮ ಮತ್ತು ಗೋಶಾಲೆಯನ್ನು ಮೈಸೂರು ಹಾಗೂ ಕೊಡಗು ಜಿಲ್ಲೆ ಸಂಸದ ಯದುವೀರ ಕೃಷ್ಣರಾಜದತ್ತ ಒಡೆಯರ್ ಉದ್ಘಾಟಿಸುವರು. ಮೈಸೂರು ರಾಜಮನೆತನಕ್ಕೆ ಹಾಗೂ ಬೆಳವಾಡಿ ಗ್ರಾಮಕ್ಕೆ ವಿಶೇಷ ನಂಟು ಇದ್ದು, ಅತ್ಯಂತ ಸಮೃದ್ಧ ಮತ್ತು ಸುಂದರವಾಗಿದ್ದ ಬೆಳವಾಡಿ ಗ್ರಾಮವನ್ನು ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಕ್ರಿ.ಶ ೧೮೨೮ ರಲ್ಲಿ ಶೃಂಗೇರಿ ಮಠಕ್ಕೆ ದಾನ ನೀಡಿದ್ದಾರೆಂದು ಹೇಳಿದರು.

ಇಂದಿಗೂ ಸಹ ಬೆಳವಾಡಿ ಗ್ರಾಮದಲ್ಲಿ ಪೂಜಾ ಕೈಂಕರ್ಯಗಳು ಶೃಂಗೇರಿ ಮಠದ ಸುಪರ್ದಿಯಲ್ಲಿ ನಡೆಯುತ್ತಿದ್ದು, ಇದೀಗ ಬೆಳವಾಡಿಗೆ ಆಗಮಿಸುತ್ತಿರುವ ಸಂಸದ ಯದುವೀರ್‌ರವರು ಗ್ರಾಮದ ಜನರಿಗೆ ಮಹಾರಾಜರೇ ಆಗಿದ್ದಾರೆ ಎಂದು ತಿಳಿಸಿದರು.

ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಬೆಳವಾಡಿ ಮಂಜುನಾಥ್, ಹೆಚ್‌ಡಿ ಕಂಪನಿ ನಿರ್ದೇಶಕ ಶ್ರೀಧರ್ ಉಪಸ್ಥಿತರಿದ್ದರು.

Sadhana Dham Surya Mandir-Goshala to be inaugurated in Belawadi on January 25th

Share

Leave a comment

Leave a Reply

Your email address will not be published. Required fields are marked *

Don't Miss

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ...

Related Articles

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.1ನೇ ಸ್ಥಾನ

ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ...

ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಪ್ರಕರಣ ದಾಖಲು

ಚಿಕ್ಕಮಗಳೂರು: ಸೈಬರ್ ಕ್ರೈಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆಯ ಅಶ್ಲೀಲ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಆಲ್ದೂರಿನ ಯುವಕನ ಸಾಧನೆ

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ ‘Pixxeಟ’ ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ...

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದ ಬಳಸಲು ಮನವಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಶೇ.೬೦ರಷ್ಟು ಕನ್ನಡ ಪದಗಳ...