ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ವತಿಯಿಂದ ಪ್ರೀಮಿಯರ್ ಲೀಗ್ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಫೆ.೭ ರಿಂದ ೯ ರವರೆಗೆ ಮೂರು ದಿನಗಳ ಕಾಲ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ರಾಜ್ ಪ್ರಶಾಂತ್ ಹೆಚ್.ಜಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರಾರವೇ ಕಪ್-೨೦೨೬ ಸೀಸನ್ ಒಂದರ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಕ್ಕೆ ಪ್ರವೇಶ ಶುಲ್ಕ ೫೫೦೦ ರೂಗಳನ್ನು ನಿಗಧಿಪಡಿಸಲಾಗಿದ್ದು, ಮೊದಲು ನೊಂದಾಯಿಸಿಕೊಂಡ ೨೪ ತಂಡಗಳಿಗೆ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಪ್ರತಿ ಪಂದ್ಯಕ್ಕೆ ೫ ಸೀಮಿತ ಓವರ್‌ಗಳಿದ್ದು, ಈಗಾಗಲೇ ೧೨ ತಂಡಗಳು ನೊಂದಾಯಿಸಿಕೊಂಡಿವೆ. ತಂಡದ ಆಟಗಾರರು ಆಧಾರ್ ಕಾರ್ಡ್‌ನ್ನು ಕಡ್ಡಾಯವಾಗಿ ನೀಡಬೇಕು. ನೊಂದಾಯಿಸಿಕೊಳ್ಳಲು ಫೆ.೩ ಅಂತಿಮ ದಿನವಾಗಿರುತ್ತದೆ ಎಂದು ತಿಳಿಸಿದರು.
ವಿಜೇತ ತಂಡಕ್ಕೆ ಪ್ರಥಮ ಬಹುಮಾನ ೫೦ ಸಾವಿರ ರೂ., ಆಕರ್ಷಕ ಟ್ರೋಫಿ, ದ್ವಿತೀಯ ೨೦ ಸಾವಿರ ರೂ. ಹಾಗೂ ತೃತೀಯ ೮ ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಎಲ್ಲಾ ಪಂದ್ಯಗಳಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿ ಇರುತ್ತದೆ. ನೊಂದಣಿಯಾದ ತಂಡಗಳು ಬರದಿದ್ದಲ್ಲಿ ಹಣವನ್ನು ಹಿಂದಿರುಗಿಸಲಾಗುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ನಿರ್ದೇಶಕ ಚಂದ್ರು ಉಪಸ್ಥಿತರಿದ್ದರು.
District Level Tennis Ball Cricket Tournament
Leave a comment